ಹೊಸ ಉತ್ಪನ್ನ ಲಾಂಚ್" ಸ್ಫರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಎಸ್ ಡಿ ಎಂ ವಿದ್ಯಾರ್ಥಿಗಳು.
ಧಾರವಾಡ 03 :
ಧಾರವಾಡದ ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜಿನ ಆರನೇ ಸೆಮಿಸ್ಟರ್ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಅನಿರುದ್ಧ್ ಕಾಮಕೇರಿ, ಇಂಚರ್, ಸಿದ್ಧಾರ್ಥ್ ಮತ್ತು ಸ್ಪೂರ್ತಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಆಯೋಜಿಸಿದ್ದ,
ಪ್ರಾದೇಶಿಕ ಕೇಂದ್ರ ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಪ್ರಾದೇಶಿಕ ಮಟ್ಟದ ಟೆಕ್ನೋ-ಕಲ್ಚರಲ್ ಫೆಸ್ಟ್ ಯುಕ್ತಿ-2K25 ನಲ್ಲಿ "ಹೊಸ ಉತ್ಪನ್ನ ಲಾಂಚ್" ಸ್ಫರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿದ್ದಾರೆ. ಈ ವಿದ್ಯಾರ್ಥಿಗಳು ವಿಶ್ವನಾಥ ಭಟ್ ಅವರ ಮಾರ್ಗದರ್ಶನದಲ್ಲಿ ಕಳೆಗಿಡವಾದ ಲಂಟಾನದಿಂದ ತಯಾರಿಸಿದ ಲಂಟಾನಬೋರ್ಡ್ ಎಂಬ ಉತ್ಪನ್ನದ ಮಾರುಕಟ್ಟೆಯ ಕಾರ್ಯಸಾಧ್ಯತೆಯನ್ನು ಪ್ರಸ್ತುತಪಡಿಸಿದ್ದರು. ಎಸ್ಡಿಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಜೀವಂಧರ್ ಕುಮಾರ್, ಪ್ರಾಂಶುಪಾಲರಾದ ಡಾ. ರಮೇಶ್ ಎಲ್. ಚಕ್ರಸಾಲಿ ಮತ್ತು ಸಿವಿಲ್ ವಿಭಾಗದ ಅಧ್ಯಕ್ಷರಾದ ಡಾ. ಆರ್.ಜೆ. ಫೆರ್ನಾಂಡಿಸ್ ಈ ಸಾಧನೆಗಾಗಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.