ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದ ಶ್ರೀ ಸಂಗಮೇಶ ಸ್ವಾಮೀಜಿವರು ಸ್ವತಃ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಧಾರವಾಡ : ತಾಲೂಕಿನ ನರೇಂದ್ರ ಗ್ರಾಮದ ಮಳೆಪ್ಪಜ್ಜ ಹಾಗೂ ಮೌನಯೋಗಿ ಮಹಾಂತ ಶಿವಯೋಗಿಗಳ 67 ನೇ ಜಾತ್ರಾ ಮಹೋತ್ಸವದ ಅಂಗವಾಗಿ ಏ.12 ರಂದು ಸಂಜೆ 5 ಗಂಟೆಗೆ ಮಹಾ ರಥೋತ್ಸವ ಜರುಗಲಿದೆ.
ಬ್ರಾಹ್ಮಿ ಮುಹೂರ್ತದಲ್ಲಿ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, 8 ಗಂಟೆಗೆ ಸಹಸ್ರ ಬಿಲ್ವಾರ್ಚನೆ, 7 : 15 ಕ್ಕೆ ಕಳಸಾರೋಹಣ, ಬೆಳಗ್ಗೆ 9 ಗಂಟೆಗೆ ಸಪ್ತಾಹ ಮಂಗಲ. ಬೆಳಗ್ಗೆ 10 ಗಂಟೆಗೆ ಗಣಾರಾಧನೆ, 11 ಗಂಟೆಯಿಂದ ಪ್ರಸಾದ ವಿತರಣೆ ಆರಂಭ ಮತ್ತು ಮೈಲಾರಲಿಂಗನ ಪವಾಡಗಳು ನಡೆಯಲಿವೆ.
ಮಧ್ಯಾಹ್ನ 3 ಗಂಟೆಗೆ ಗ್ರಾಮದೇವಿಗೆ ಉಡಿ ತುಂಬುವ ಕಾರ್ಯಕ್ರಮದ ಬಳಿಕ, ಸಕಲ ವಾದ್ಯ ಮೇಳಗಳ ಸಹಿತ ಉಪ್ಪಿನ ಬೆಟಗೇರಿಯ ಶ್ರೀ ಕುಮಾರ ವಿರುಪಾಕ್ಷ ಸ್ವಾಮಿಗಳ ಸಾನಿಧ್ಯದಲ್ಲಿ ರಥೋತ್ಸವ ಜರುಗಲಿದೆ.
ರಕ್ತಾದಾನ ,ಜಾತ್ರಾ ಮಹೋತ್ಸವದ ಅಂಗವಾಗಿ ಏ.11 ರಂದು ಮಠದಲ್ಲಿ ಮುಧೋಳದ ಶ್ರೀ ವೀರಭದ್ರೇಶ್ವರ ರಕ್ತ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ ನಡೆಯಿತು.
ಶ್ರೀಮಠದ ಶ್ರೀ ಸಂಗಮೇಶ ಸ್ವಾಮೀಜಿವರು ಸ್ವತಃ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಡಾ.ಅರವಿಂದ ನಾಯಕ ಅವರ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ಅನೇಕ ಭಕ್ತರು ರಕ್ತದಾನ ಮಾಡಿದರು.
ಮಳೆಪ್ಪಜ್ಜನ ಮಠದ ಟ್ರಸ್ಟ್ ಕಮೀಟಿ ಅಧ್ಯಕ್ಷ ಚಂದ್ರಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ನಾಗೇಶ ಹಟ್ಟಿಹೊಳಿ, ಮಂಜುನಾಥ ತಿರ್ಲಾಪೂರ, ಕರೆಪ್ಪ ಬಳಿಗೇರ, ಶಂಕ್ರಪ್ಪ ದುಬ್ಬದಮರಡಿ, ರಾಯನಗೌಡ ಪಾಟೀಲ, ಈರಪ್ಪ ತೇಗೂರ, ಮಹದೇವ ಜಂಬಗಿ, ಆನಂದಗೌಡ ಪಾಟೀಲ ಇತರರಿದ್ದರು.