ಎಲ್ಲ ಅಭಿಯಂತರರಿಗೆ ಮಾದರಿ ಆದಶ೯ ವ್ಯಕ್ತಿ ಇಂ.ಪ್ರೊ.ವಸುದೇವ ಪರ್ವತಿ - ಸುನೀಲ ಬಾಗೇವಾಡಿ
Or. ಇಂ.ಪ್ರೊ.ವಸುದೇವ ಪರ್ವತಿ ನಿವೃತ್ತಿ ಸನ್ಮಾನ ಕಾರ್ಯಕ್ರಮ.
ಧಾರವಾಡ 03 :
ವೃತ್ತಿ ಜೀವನದ ಜೊತೆಗೆ ಎಲ್ಲ ಅಭಿಯಂತರರ ಜೊತೆಗೆ ಉತ್ತಮ ಸ್ನೇಹಪರತೆ ಇಟ್ಟುಕೊಂಡು ಎಲ್ಲ ಅಭಿಯಂತರರಿಗೆ ಮಾರ್ಗದರ್ಶನ ಮಾಡುತ್ತಾ ಎಲ್ಲರ ಮನಗೆದ್ದು ಮಾದರಿಯಾದ ವ್ಯಕ್ತಿ ಪ್ರೊ.ವಸುದೇವ ಪರ್ವತಿ ಎಂದು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ, ಲೋಕಲ್ ಸೆಂಟರ್, ಧಾರವಾಡದ ಅಧ್ಯಕ್ಷ ಸುನೀಲ ಬಾಗೇವಾಡಿ ಹೇಳಿದರು.
ಅವರು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ, ಲೋಕಲ್ ಸೆಂಟರ್, ಧಾರವಾಡದ ವತಿಯಿಂದ ಎಸ್.ಡಿ.ಎಮ್ ಇಂಜಿನಿಯರ್ ಕಾಲೇಜಿನಲ್ಲಿ ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ ಆಗಿ ನಿವೃತ್ತಿಯಾದ ಪ್ರೊ.ವಸುದೇವ ಪರ್ವತಿ ಅವರನ್ನು ಸನ್ಮಾನಿಸಿ ಮಾತನಾಡಿ ಸರಳತೆ, ಸಹಕಾರ, ಸ್ನೇಹಪರತೆಯಿಂದ ಎಲ್ಲರಿಗೂ ಮತ್ತು ವಿದ್ಯಾರ್ಥಿಗಳಿಗೆ ಮೆಚ್ಚಿನ ಮಾರ್ಗದರ್ಶಕರಾಗಿದ್ದರು ಎಂದು ಹೇಳಿದರು.
ಪ್ರೊ.ವಾಸುದೇವ ಪರ್ವತಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಇಂಜಿನಿಯರ್ಗಳಾದ ಕಬೀರ ನದಾಫ್, ಇಂ. ಪ್ರಕಾಶ ಏಕoಚಿ, ಬಸವರಾಜ ಲಂಗೋಟಿ, ನಾಗರಾಜ ದೇಸಾಯಿ ಹಾಗೂ ವಿಜಯ ತೋಟಿಗೇರ ಇದ್ದರು.