ಆರ್ಟಗ್ಯಾಲರಿ ಒಳಾಂಗಣ ಮತ್ತು ಗೋಡೆಗಳಿಗೆ ಭಾರತೀಯ ಸಾಂಪ್ರದಾಯಕ ಕಲೆ ಹಾಗೂ ಜಾನಪದ

ಪಆರ್ಟಗ್ಯಾಲರಿ ಒಳಾಂಗಣ ಮತ್ತು ಗೋಡೆಗಳಿಗೆ ಭಾರತೀಯ ಸಾಂಪ್ರದಾಯಕ ಕಲೆ ಹಾಗೂ ಜಾನಪದ ಕಲೆಗಳಿಂದ ಶೃಂಗಾರ*

*ಧಾರವಾಡ (ಕರ್ನಾಟಕ ವಾರ್ತೆ) ಏ.16:* ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಧಾರವಾಡದ, ಆರ್ಟ್ ಗ್ಯಾಲರಿಯ ಒಳಾವರಣದ ಕಂಪೌಂಡ್ ಹಾಗೂ ಕಟ್ಟಡದ ಗೋಡೆಗಳ ಮೇಲೆ, ವಿದ್ಯಾರ್ಥಿಗಳೇ ರಚಿಸಿದ ಭಾರತೀಯ ಸಾಂಪ್ರದಾಯಕ ಕಲೆಗಳು ಹಾಗೂ ಜಾನಪದ ಚಿತ್ರಗಳಿಂದ ಕಂಗೊಳಿಸುತ್ತಿವೆ.

ಏಪ್ರಿಲ್ 15 ರಂದು ಧಾರವಾಡದ ಸರಕಾರಿ ಚಿತ್ರಕಲಾ ಮಹಾ ವಿದ್ಯಾಲಯದಲ್ಲಿ ವಿಶ್ವ ಚಿತ್ರಕಲಾ ದಿನದ ಆಚರಣೆಯ ಪ್ರಯುಕ್ತ ಬಿತ್ತಿ ಚಿತ್ರಗಳನ್ನು ಲೋಕಾರ್ಪಣೆಗೊಸಲಾಯಿತು.

ಚಿತ್ರಕಲೆಯು ಭಾರತಿಯ ಸಂಸ್ಕøತಿ, ಹೆಮ್ಮೆಯ ಪ್ರತಿಕವಾಗಿವೆ. ಕಲಾಕೃತಿಗಳು ನಮ್ಮ ಸಂಪ್ರದಾಯ, ಸ0ಸ್ಕೃತಿ, ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ವಿಶೇಷವಾಗಿ ಭಾರತೀಯ ದೇಶಿಯ, ಸಾಂಪ್ರದಾಯಿಕ, ಕಲೆಗಳಾದ ಕಿರುರೂಪ ಚಿತ್ರಗಳು, ಬಿತ್ತಿ ಚಿತ್ರಗಳ, ಜನಪದ ಚಿತ್ರಗಳು ಹೀಗೆ ಮುಂತಾದ ಕಲಾ ಪ್ರಕಾರಗಳಾದ ಕಾಂಗ್ರಾ, ಬಸೋಲಿ, ಮೇವಾರ, ವಿಜಯನಗರ, ಅಮ್ಮಿನಭಾವಿ, ನವಲಗುಂದ, ರಾಗಮಾಲಾ, ರಾಜಸ್ಥಾನಿ, ಪಟ ಚಿತ್ರಗಳು, ಕಿನ್ನಾಳ, ಮೈಸೂರು, ಅಜಂತಾ, ಕೋಟಾ, ವಾರ್ಲಿ, ಮಧುಬನಿ, ಪಹಾಡಿ, ಬುಂದಿ, ಮುಂತಾದ ಕಲೆಗಳು ವಿದ್ಯಾರ್ಥಿಗಳ ಕುಂಚದಲ್ಲಿ ಅರಳಿವೆ.

ಸರಕಾರಿ ಪದವಿ ಮಹಾವಿದ್ಯಾಲಯಗಳ ಪ್ರಾಚಾರ್ಯರಾದ ಡಾ. ನಳಿನಿ ಬೆಂಗೇರಿ, ಡಾ. ಎಸ್. ಎಸ್. ಅಂಗಡಿ ಅವರು ಉದ್ಘಾಟಕರಾಗಿ ಭಾಗವಹಿಸಿದ್ದರು. ಬಿತ್ತಿ ಚಿತ್ರಗಳನ್ನು ರಚಿಸಲು ಸಹಾಯ ಮಾಡಿದ ಆರ್ಟ್ ಪಾಯಿಂಟ್‍ನ ಮಾಲೀಕರಾದ ವಿಠ್ಠಲ್ ಬಸಲಗುಂದಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಎಸ್.ಕೆ. ಪತ್ತಾರ, ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ಮುಖ್ಯಸ್ಥರಾದ ಡಾ. ಬಸವರಾಜ್ ಕುರಿ, ಹಿರಿಯ ಕಲಾವಿದ ಬಿ. ಮಾರುತಿ ಅವರು ಉಪಸ್ಥಿತರಿದ್ದರು. 
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.


******
ನವೀನ ಹಳೆಯದು

نموذج الاتصال