"ವಚನ ದರ್ಶನ" ಮಿಥ್ಯ/ಸತ್ಯ ಗ್ರಂಥ ಲೋಕಾರ್ಪಣೆ.
ಧಾರವಾಡ 17 :
ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಂಗಾಯತ ಧರ್ಮ ಮಹಾಸಭಾ, ರಾಷ್ಟ್ರೀಯ ಬಸವದಳ, ಬಸವ ಸಮಿತಿ, ಬಸವ ಕೇಂದ್ರ, ಕರ್ನಾಟಕ ಲಿಂಗಾಯತ ಒಳಪಂಗಡಗಳ ವಿಕತಾ ಸಮಿತಿ ಹಾಗೂ ಬಸವಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ವಚನ ದರ್ಶನ" ಮಿಥ್ಯ/ಸತ್ಯ ಗ್ರಂಥ ಲೋಕಾರ್ಪಣೆ ಸಮಾರಂಭ ಏ.19 ರ ಬೆಳಿಗ್ಗೆ 10.30 ಕ್ಕೆ ಚನ್ನಬಸವೇಶ್ವರ ನಗರದ ಲಿಂಗಾಯತ ಭವನದಲ್ಲಿ ಏರ್ಪಡಿಸಿದೆ ಎಂದು ಎಮ್ ವಿ ಗೊಂಗಡಶಟ್ಟಿ ತಿಳಸಿದರು.ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು
ಲಿಂಗಾಯತರು ಧರ್ಮಕ್ಕೆ ಸಂವಿಧಾನಾತ್ಮಕವಾಗಿ ಸ್ವತಂತ್ರ ಧರ್ಮ ಎಂದು ಪರಿಗಣಿಸಲು, ಧರ್ಮೀಯರಿಗೆ ಅನುಕೂಲವಾಗುವ ಅನೇಕ ಆದೇಶ ಮಾಡಿವೆ. ಕರ್ನಾಟಕ ಸರ್ಕಾರ ಬಸವ ಧರ್ಮೀಯರ ಪರವಾಗಿ ಪರಿಗಣಿಸಲು, ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ಶರಣರ ಸ್ಥಾನಗಳನ್ನು ಅಭಿವೃದ್ಧಿಪಡಿಸುವುದರೊಂದಿಗೆ ವಿಶ್ವಗುರು ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಹೆಮ್ಮೆಯ ವಿಷಯ. ಪ್ರತಿಯೊಬ್ಬ ಪ್ರಜ್ಞಾವಂತರಾಗುತ್ತಿದ್ದಾರೆ. ಸಂಸ್ಕೃತ ಮತ್ತು ಇತರ ಶ್ಲೋಕಗಳನ್ನು ಬಿಟ್ಟು ವಚನಗಳ ಮುಖಾಂತರ ಪ್ರತಿಯೊಂದು ಕಾರ್ಯಕ್ರಮ ನಿಜಾಚರಣೆ ಮುಖಾಂತರ ನಡೆಸುತ್ತಿದ್ದಾರೆ. ಈ ಬೆಳವಣಿಗೆಗಳಿಂದ ಅನೇಕ ಸಂಘ-ಸಂಸ್ಥೆಗಳು ಲಿಂಗಾಯತರೊಂದಿಗೆ ಕೈಜೋಡಿಸುತ್ತಿರುವುದು ಶ್ಲಾಘನೀಯ. ಭಾರತದ ಅನೇಕ ರಾಜ್ಯಗಳಲ್ಲಿರುವ ಸುಮಾರು 5-6 ಕೋಟಿ ಲಿಂಗಾಯತರು ಬಸವೇಶ್ವರರ ತತ್ವ ಸಿದ್ಧಾಂತಗಳನ್ನು ಅನುಸರಿಸಿದರೆ ಪುರೋಹಿತಶಾಹಿ ವ್ಯವಸ್ಥೆಗೆ ಧಕ್ಕೆಯುಂಟಾಗುತ್ತದೆ ಎನ್ನುವ ಕಾರಣಗಳಿಗೆ ಅನೇಕ ರೀತಿಯಿಂದ ಸನಾತನೀಯರು ವಿರೋಧ ಮಾಡುತ್ತಿದ್ದಾರೆ. ವಿವಿಧ ಕಾರ್ಯಕ್ರಮಗಳನ್ನು ಪ್ರಾರಂಭಿಸಿ ಲಿಂಗಾಯತರು ಒಗ್ಗೂಡುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಹಿಂದೂ ಎನ್ನುವುದು ಧರ್ಮವಲ್ಲ ಒಂದು ಸಂಸ್ಕೃತಿ ಎಂದು ಗೊತ್ತಿದ್ದರೂ ಸಹ ಲಿಂಗಾಯತರು ಒಗ್ಗೂಡಿದರೆ ವರ್ಣಾಶ್ರಮಕ್ಕೆ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ "ಶ್ರೀ ಗುರು ಬಸವೇಶ್ವರರು ಹಾಗೂ ಶರಣರು ವಚನಗಳನ್ನು ರಚಿಸಿಲ್ಲ, ಅನುಭವ ಮಂಟಪವೇ ಇರಲಿಲ್ಲ, ವೇದ ಉಪನಿಷತ್ತುಗಳ ಅಂಶಗಳೇ ವಚನಗಳಲ್ಲಿವೆ” ಎಂದು ತಪ್ಪಾಗಿ ಪ್ರಚಾರ ಮಾಡುತ್ತಿದ್ದಾರೆ.
ಇತ್ತೀಚೆಗೆ ವಚನದರ್ಶನ ಎನ್ನುವ ಪುಸ್ತಕವನ್ನು ನಮ್ಮ ಲಿಂಗಾಯತರ ಒಬ್ಬ ಶ್ರೀಗಳನ್ನು ಮುಂದಾಗಿಸಿಕೊಂಡು ಬಿಡುಗಡೆ ಮಾಡಿಸಿದ್ದಾರೆ. ಈ ಪುಸ್ತಕದ ಮುಖಪುಟದಲ್ಲಿ ಶ್ರೀ ಗುರು ಬಸವೇಶ್ವರರನ್ನು ಒಬ್ಬ ಋಷಿಯಂತೆ ತೋರಿಸಿ ಹಿಂದೆ ಚಕ್ರವನ್ನು ಮೂಡಿಸಿ ಬಿಲ್ಲು ಬಾಣಗಳನ್ನು ಮುದ್ರಿದಸಿದ್ದಾರೆ. ಸುದೈವದಿಂದ ವಿವಿಧ ಜಿಲ್ಲೆಗಳಲ್ಲಿ ನಡೆದ ಈ ಪುಸ್ತಕ ಬಿಡುಗಡೆಯನ್ನು ಮಾಡಲು ನಮ್ಮ ಕೆಲವು ಲಿಂಗಾಯತ ಮಠಾಧಿಪತಿಗಳು ಭಾಗವಹಿಸಿಲ್ಲ. ಆದರೆ, ಈ ಪುಸ್ತಕ ಬಿಡುಗಡೆಯಲ್ಲಿ ರಾಷ್ಟ್ರಮಟ್ಟದ ಹಿಂದೂ ಪ್ರತಿಪಾದಿಸುವ ಧುರೀಣರು ಭಾಗವಹಿಸಿ ಬಸವ ಧರ್ಮಕ್ಕೆ ಅಪಚಾರ ಎಸೆಗಿದ್ದಾರೆ. ಕಾರಣ ಇದಕ್ಕೆ ಪ್ರತಿಯಾಗಿ ವಚನ ದರ್ಶನ ಮಿಥ್ಯ /. ಸತ್ಯ" ಎಂಬ ಪುಸ್ತಕ ಬಿಡುಗಡೆ ಮಾಡಿ ನಿಜ ಲಿಂಗಾಯತರ ತತ್ವಗಳನ್ನು ತಿಳಿಸುವ ಪ್ರಯತ್ನವಿದು. ಅಂದು ಬೆಳಗ್ಗೆ ಷಟಸ್ಥಲ ಧ್ವಜಾರೋಣ ನೆರವೇರಲಿದ್ದು ಶ್ರೀ ಮೂರುಸಾವಿರ ಸಂಸ್ಥಾನ ಮಠದ ಡಾ. ಗುರುಸಿದ್ದ ರಾಜಯೋಗೀಂದ್ರ ಸ್ವಾಮಿಜಿ, ಶ್ರೀ ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮಿಜಿ, ಮುರಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮಿಜಿ,
ಅಕ್ಕಮಹಾದೇವಿ ಪೀಠದ ಶ್ರೀ ಜ್ಞಾನೇಶ್ವರಿ ಮಾತಾಜಿ ಸಾನಿಧ್ಯವಹಿಸುವರು. ಜಾಗತಿಕ ಅಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು, ಸಭಾಪತಿ ಬಸವರಾಜ ಹೊರಟ್ಟಿ ಸಮಾರಂಭ ಉದ್ಘಾಟಿಸುವರು. ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ ಗ್ರಂಥ ಬಿಡುಗಡೆ ಹಾಗೂ ಆಶಯ ನುಡಿಗಳನ್ನಾಡುವರು. ಸಂಶೋಧಕ ಡಾ. ವೀರಣ್ಣ ರಾಜೂರ ಗ್ರಂಥ ಪರಿಚಯ ಮಾಡಲಿದ್ದು ಮಹಾಂತೇಶ ಪಾಟೀಲ ಸಹಯೋಗ ನುಡಿ ಸಲ್ಲಿಸುವರು. ಅಖಿಲ ಕರ್ನಾಟಕ ಅಂಗಾಯತ ಒಳ ಪಂಗಡಗಳ ವಿಕತಾ ಸಮಿತಿ ರಾಜ್ಯಾಧ್ಯಕ್ಷ ಜಿ.ವಿ. ಕೊಂಗವಾಡ, ಸಾಹಿತಿಗಳಾದ ಡಾ. ಎನ್.ಜಿ. ಮಹಾದೇವಪ್ಪ, ಡಾ. ಸಿ.ಎಂ. ಕುಂದಗೋಳ, ಡಿ.ಸಿ.ಪಿ. ಪೊಲೀಸ್ ಕಮೀಶನರೇಟ್ ರವೀಶ ಸಿ.ಆರ್. ಅತಿಥಿಯಾಗಿ
ಪಾಲ್ಗೊಳ್ಳುವರು.
ಎಂದು ತಿಳಸಿದರು.
ಅಖಿಲ ಭಾರತ ವೀರಶೈವ ಅಂಗಾಯತ ಮಹಾಸಭಾ ಧಾರವಾಡ ಜಿಲ್ಲಾ ಘಟಕ ಅಧ್ಯಕ್ಷ ಪ್ರದೀಪಗೌಡ ಪಾಟೀಲ, ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಂಗಮೇಶ ಲೋಕಾಪುರ, ಗುರುಬಸವ ಮಂಟಪ ಸಂಯೋಜಕ ಶಶಿಧರ ಕರವೀರಶೆಟ್ಟರ, ಪ್ರಬಣ್ಣ ನಡಕಟ್ಟಿ, ಜಿ.ಬಿ.ಹಳ್ಯಾಳ, ಶಾರದಾ ಕೌದಿ, ಸವಿತಾ ನಡಕಟ್ಟಿ, ಚನ್ನಪ್ಪಗೌಡ ಪಾಟೀಲ ಉಪಸ್ಥಿತರಿರುವರುಎಂದರು.ಪತ್ರಿಕಾಗೋಷ್ಠಿಯಲ್ಲಿ ಜಿ ವಿ ಕೂಂಗವಾಡ,ಪ್ರಭು ನಡಕಟ್ಟಿ,ಪ್ರದೀಪ ಪಾಟೀಲ,ಸಿದ್ದರಾಮಣ್ಣ ನಡಕಟ್ಟಿ, ಎಮ್ ವ್ಹಿ ಮುಳಗೂರ,ಉಮೇಶ ಕಟಗೆ,ಬಸವಂತ ತೋಟದ,ಶೇಖರ ಕುಂದಗೂಳ,ಪ್ರೋ ನರೇಗಲ್ಲ,ಮಲ್ಲಿಕಾರ್ಜುನ ಔಧರಿ ಇದ್ದರು.