ALLAVAR: ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಇಂದು ಬೆಳಿಗ್ಗೆ ಅಳ್ನಾವರ ತಾಲೂಕಿನ ಅಂಬೊಳಿ ಅಂಗನವಾಡಿ ಕೇಂದ್ರಕ್ಕೇ ಭೇಟಿ ನೀಡಿ, ಪರಿಶೀಲಿಸಿದರು.
ನಂತರ ಅವರು ಡೋರಿ ಗ್ರಾಮದಲ್ಲಿ ಸರಕಾರಿ ಜಮೀನು ಪಟ್ಟಾ ಹಕ್ಕು ಪಡೆದಿರುವ ರೈತರಿಂದ ಮತ್ತು ಗ್ರಾಮಸ್ಥರಿಂದ ಸನ್ಮಾನ ಗೌರವ ಸ್ವೀಕರಿಸಿದರು.
ನಂತರ ಬೆಣಚಿ ಗ್ರಾಮದ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳ ವೈಜ್ಞಾನಿಕ ಪ್ರಯೋಗಗಳನ್ನು ನೋಡೊದರು. ಕಲಿಕೆಯಲ್ಲಿ ಹಿಂದುಳಿದ 10 ನೇ ತರಗತಿ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ ಸದಸ್ಯರು ಮತ್ತು ಗ್ರಾಮಸ್ಥರೊಂದಿಗೆ ಶೈಕ್ಷಣಿಕ ಮತ್ತು 10 ನೇ ತರಗತಿ ಫಲಿತಾಂಶ ಸುಧಾರಣೆ ಕುರಿತು ಸಂವಾದ ಮಾಡಿದರು.
ಅಲ್ಲಿಂದ ಶಾಲಾ ಶಿಕ್ಷಣ ಇಲಾಖೆ ಅಳ್ನಾವರ ನಗರದ ಎ.ಸಿ.ಹಿರೇಮಠ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ಅಳ್ನಾವರ ತಾಲೂಕಿನ ಎಲ್ಲ ಪ್ರಛಢಶಾಲೆಗಳ ಹೆಡ್ ಮಾಸ್ಟರ್, ಎಸ್.ಡಿ.ಎಂ.ಸಿ ಅಧ್ಯಕ್ಷರು, ಪಾಲಕರೊಂದಿಗೆ ಸಭೆ ನಡೆಸಿ, ವಿದ್ಯಾರ್ಥಿಗಳಿಗೆ ಮನೆಯಲ್ಲಿ ಓದುವ ವಾತಾವರಣ ಮತ್ತು ಮಾರ್ಗದರ್ಶನ, ಸಹಕಾರ ನೀಡುವಂತೆ