ಅಂಬೇಡ್ಕರ ರವರ 134ನೇ ಜಯಂತ್ಯೋತ್ಸವದ ಅಂಗವಾಗಿ ದಿ 20 ರವಿವಾರ ದಂದು ಭೀಮೋತ್ಸವ2025 ಕಾರ್ಯಕ್ರಮ
ಧಾರವಾಡ 01 :
ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟ ಧಾರವಾಡದ ವತಿಯಿಂದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ ರವರ 134ನೇ ಜಯಂತ್ಯೋತ್ಸವದ ಅಂಗವಾಗಿ ದಿ 20 ರವಿವಾರ ದಂದು ಭೀಮೋತ್ಸವ2025 ಕಾರ್ಯಕ್ರಮವನ್ನು ಡಾ|| ಮಲ್ಲಿಕಾರ್ಜುನ ಮನಸೂರ ಕಲಾಭವನದ ಆವರಣ, ಕಡಪಾ ಮೈದಾನದಲ್ಲಿ ಏರ್ಪಡಿಸಲಾಗಿದೆ.
ಎಂದು ವೆಂಕಟೇಶ ಸಗಬಾಲ್ ತಿಳಸಿದರು. ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು
ಸಂವಿಧಾನ ಶಿಲ್ಪಿ ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ ರವರ ಆದರ್ಶ, ತತ್ವ ಹಾಗೂ ಸಿದ್ಧಾಂತಗಳ ಆಚರಣೆ ಹಾಗೂ ಅವರ ಸಂವಿಧಾನದ ಮೂಲಕ ನಾಡಿಗೆ ನೀಡಿದ ಕೊಡುಗೆಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ, ಅಲ್ಲದೆ ಸಂವಿಧಾನದ ಕುರಿತು ಜನತೆಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ಆಚರಿಸುವ ಈ ಬೃಹತ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಡಿ.ಕೆ.ಶಿವಕುಮಾರ ರವರು, ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ, ಅಬಕಾರಿ ಇಲಾಖೆಯ ಸಚಿವ ಆರ್.ಬಿ.ತಿಮ್ಮಾಪೂರ, ಆಹಾರ ಮತ್ತು ನಾಗರಿಕ ಇಲಾಖೆಯ ಸಚಿವ ಕೆ.ಎಚ್.ಮುನಿಯಪ್ಪ, ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ ಅಲ್ಲದೇ ಧಾರವಾಡ ಜಿಲ್ಲೆಯ ಶಾಸಕರಾದ ವಿನಯ ಕುಲಕರ್ಣಿ, ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಕೆ.ಎಚ್.ಕೋನರೆಡ್ಡಿ, ಹಾಗೂ ವಿಧಾನ ಸಭಾ ಪರಿಷತ್ ಸದಸ್ಯರು ಹಾಗೂ ಹಲವಾರು ಗಣ್ಯ-ಮಾನ್ಯರು ಆಗಮಿಸಲಿದ್ದಾರೆ.ಎಂದರು. ಕಾರ್ಯಕ್ರಮದ ಸಾನಿಧ್ಯವನ್ನು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮಿಜೀ, ಬೈಲೂರಿನ ನಿಷ್ಕಲ ಮಂಟಪದ ಶ್ರೀ.ನಿಜಗುಣಾನಂದ ಸ್ವಾಮೀಜಿ, ಹಾಗೂ ಮನಸೂರಿನ ಶ್ರೀ ರೇವಣಸಿದ್ದೇಶ್ವರ ಮಹಾಮಠದ ಶ್ರೀ ಬಸವರಾಜ ದೇವರು ರವರು ದಿವ್ಯ ಸಾನಿಧ್ಯವಹಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಸ್ಥಳೀಯ, ಜಿಲ್ಲೆಯ, ಹಾಗೂ ನಾಡಿನ ವಿವಿಧ ಜಿಲ್ಲೆಗಳಿಂದ ಆಗಮಿಸುವ ಖ್ಯಾತ ಜನಪದ ಕಲಾತಂಡಗಳಿಂದ ಜನಪದ ವಾಹಿನಿಯ ಮೂಲಕ ಡಾ|| ಬಿ.ಆರ್. ಅಂಬೇಡ್ಕರ ರವರ ಭಾವಚಿತ್ರದ (ಸ್ತಬ್ಧಚಿತ್ರ) ಭವ್ಯ ಮೆರವಣಿಗೆಯೂ ಕೂಡ ಜರುಗಲಿದೆ. ನಾಡಿನ ಖ್ಯಾತ ಕಲಾವಿದರು ಆಗಮಿಸಿ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರದರ್ಶನ ನೀಡಲಿದ್ದಾರೆ. ಧಾರವಾಡ ಜಿಲ್ಲೆಯ, ನಾಡಿನ ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಸಮುದಾಯದ ಸಂಘ ಸಂಸ್ಥೆಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ದಾನಪ್ಪ ಕಬ್ಬಾರ ಅಶೋಕ್ ದೊಡಮನಿ. ಯಲ್ಲಪ್ಪ ಮಂಟೂರು ರವಿ ಸಾಮ್ರಾಣಿ ಅಶೋಕ್ ಭಂಡಾರಿ ಪರಮೇಶ್ವರ್ ಕಾಳೆ. ರಾಜೇಶ್ ಕೋಟೆ ನವರ. ಚಿದಾನಂದ ಲಕ್ಷ್ಮಣ್ ಬಕಾಯಿ ಮುಂತಾದವರು ಇದ್ದರು.