*ಜನತಾ ದರ್ಶನದಲ್ಲಿ ಇಂದು 125 ಅಹವಾಲು ಸಲ್ಲಿಕೆ*
*ಧಾರವಾಡ (ಕರ್ನಾಟಕ ವಾರ್ತೆ) ಏ.21:* ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಇಂದು ಬೆಳಿಗ್ಗೆ 9ನೇ ಜನತಾ ದರ್ಶನವನ್ನು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆಸಿ, ಸಾರ್ವಜನಿಕರಿಂದ 125 ದೂರು, ಅಹವಾಲುಗಳನ್ನು ಸ್ವೀಕರಿಸಿದರು.
ಇವುಗಳಲ್ಲಿ ಕಂದಾಯ 31, ಮಹಾನಗರ ಪಾಲಿಕೆ 26, ಜಿಲ್ಲಾ ಪಂಚಾಯತ 18, ಕಾರ್ಮಿಕ ಇಲಾಖೆ 16, ಪೊಲೀಸ್ ಇಲಾಖೆ 6, ಶಿಕ್ಷಣ ಇಲಾಖೆ 5 ಮತ್ತು ಇತರೆ 23 ಅಹವಾಲುಗಳು ಸೇರಿ ಒಟ್ಟು 125 ದೂರುಗಳಿವೆ. ಇವುಗಳನ್ನು ಸೂಕ್ತವಾಗಿ, ನಿಯಮಾನುಸಾರ ಪರಿಶೀಲಿಸಿ, ಕಾಲಮಿತಿಯಲ್ಲಿ ವಿಲೇವಾರಿ ಮಾಡುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಳೆದ 8 ಜನತಾ ದರ್ಶನಗಳಲ್ಲಿ ಸಾರ್ವಜನಿಕರಿಂದ ಒಟ್ಟು 1,655 ಅಹವಾಲುಗಳನ್ನು ಸ್ವೀಕರಿಸಿ, ಸೂಕ್ತವಾಗಿ ವಿಲೇವಾರಿ ಮಾಡಲಾಗಿದೆ.
******