*ಸಾಹಿತಿಗಳಾದ ನಿಂಗಣ್ಣ ಕುಂಟಿ ಅಲಗಿಲವಾಡ ಶಾಲೆಗೆ ಬೇಟಿ*
ಗದಗ : ಶಿರಹಟ್ಟಿ ತಾಲೂಕಿನ ಅಲಗಿಲವಾಡ ಶಾಲೆಗೆ ಮಕ್ಕಳ ಸಾಹಿತಿಗಳಾದ ನಿಂಗಣ್ಣ ಹನುಮಪ್ಪ ಕುಂಟಿ ಅನಿರೀಕ್ಷಿತವಾಗಿ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ವಿಚಾರಿಸಿದರು ಅಲಗಿಲವಾಡ ಎಂಬ ಹೆಸರು ಆಲಾ ಎಂದರೆ ಬಂದವರು ಗೆಲಾ ಅಂದರೆ ಹೋದವರು ವಾಡಾ ಅಂದರೆ ಗಡಿ ಎಂಬುದಾಗಿದ್ದು ವಡವಿ ಮಿರಜ ಸಂಸ್ಥಾನ ಹೊಸೂರ ಸಾಂಗ್ಲಿ ಸಂಸ್ಥಾನಕ್ಕೆ ಒಳಪಟ್ಟಿದ್ದು ಮಿರಜ ಸಂಸ್ಥಾನದಿಂದ ಸಾಂಗ್ಲಿ ಸಂಸ್ಥಾನಕ್ಕೆ ಯಾರು ಬಂದ್ರು ಹೊದ್ರು ಎಂದು ತಿಳಿದುಕೊಳ್ಳಲು ಒಬ್ಬ ಕಾರಕೂನನನ್ನು ನೇಮಿಸಿದ್ದರು ಮುಂದೆ ಅದು ಅಲಗಿಲವಾಡ ಎಂಬುದಾಯಿತು ಎಂದರು
ನಿಂಗಣ್ಣ ಕುಂಟಿಯವರು ಶಿರಹಟ್ಟಿ ತಾಲೂಕಿನ ಹೊಳೆ ಇಟಗಿ ಗ್ರಾಮದಲ್ಲಿ 14 ಅಕ್ಟೋಬರ 1943 ರಲ್ಲಿ ಜನಿಸಿದರು ಪ್ರಾಥಮಿಕ ಶಿಕ್ಷಣ ಸ್ವ ಗ್ರಾಮದಲ್ಲಿ ಮುಗಿಸಿ ಪ್ರೌಢ ಶಿಕ್ಷಣ ಎಫ್ ಎಂ ಡಬಾಲಿ ಶಿರಹಟ್ಟಿ ಯಲ್ಲಿ ಪಡೆದರು ನಂತರ 1963 ರಲ್ಲಿ ಶಿಕ್ಷಕರಾಗಿ KBS ಬನ್ನಿಕೊಪ್ಪ ದಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದರು ಮುಂದೆ 1967 ರಿಂದ1969 ಟಿ ಸಿ ಎಚ್ ಮಾಡಿಕೊಂಡು ಮುಂಡರಗಿ ತಾಲೂಕಿನ ಗಂಗಾಪೂರ ಶಾಲೆಗೆ ಶಿಕ್ಷಕರಾಗಿ ಹಾಜರಾದರು ಅಲ್ಲಿ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾದರು ನಂತರ ಗದಗ ತಾಲೂಕಿನ ಚಿಕ್ಕಹಂದಿಗೊಳ ಶಾಲೆಗೆ1972 ರಲ್ಲಿ ವರ್ಗಾವಣೆಗೊಂಡರು ಅಲ್ಲಿ ತಮ್ಮನ್ನೆ ತಾವು ಅರ್ಪಿಸಿಕೊಂಡು ಮಕ್ಕಳಿಗೆ ವಿಧ್ಯ ನೀಡಿದ್ದಾರೆ ಅಲ್ಲದೆ ಚಿಕ್ಕಹಂದಿಗೊಳ ಗ್ರಾಮದ ಹಿರಿಯರ ಒತ್ತಾಸೆಯಂತೆ ಶ್ರಾವಣಮಾಸದಲ್ಲಿ ರಾತ್ರಿ ಶ್ರೀ ಶರಣಬಸವೇಶ್ವರ ಪುರಾಣದ ಪ್ರವಚನ ಮಾಡಿದ್ದು ಧಾರ್ಮಿಕ ಕಾರ್ಯಗಳಿಗೆ ಸಾಕ್ಷಿಯಾಗಿದೆ ರಂಗಭೂಮಿಯಲ್ಲಿ ಕೂಡಾ ಆಸಕ್ತಿಇದ್ದು ನಾಟಕದಲ್ಲಿ ಅಭಿನಯಿಸಿದ್ದಾರೆ ಮತ್ತೆ ಇಲಾಖೆ ಆದೇಶದಂತೆ ಶಿಗ್ಗಾಂ ತಾಲೂಕಿನ ಚಂದಾಪುರ ಶಾಲೆಗೆ 1976 ರಂದು
ವರ್ಗಾವಣೆಗೊಂಡರು ಆವಾಗ ಕತೆ , ಕವನ ಪುಸ್ತಕ ಓದುವ ಬರೆಯುವ ಹವ್ಯಾಸ ಇತ್ತು ಚಿಕ್ಕ ಮಕ್ಕಳಿಗೆ ಉಪಯುಕ್ತವಾದ ಕವನ ರಚಿಸಿ ಮಕ್ಕಳಿಂದ ಹಾಡಿಸಿ ಸಂತೋಷ ಪಟ್ಟರು ಮತ್ತೆ1976 ರಲ್ಲಿ ಹುಬ್ಬಳ್ಳಿ ತಾಲೂಕಿನ ಉಣಕಲ್ಲಿನ ಹೆಣ್ಣು ಮಕ್ಕಳ ಶಾಲೆಗೆ ವರ್ಗಾವಣೆಗೊಂಡು 20 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸುತ್ತಿದ್ದಾರೆ 1999 ರಲ್ಲಿ ಪದೊನ್ನತಿ ಹೊಂದಿ ಧಾರವಾಡ ತಾಲೂಕಿನ ವೀರಾಪೂರ ಶಾಲೆಗೆ ಹಾಜರಾದರು ಅದೆ ಶಾಲೆಯಲ್ಲಿ 2001ನಿವೃತಿ ಹೊಂದಿದರು. ಚಿಕ್ಕಹಂದಿಗೋಳದಲ್ಲಿ ಶ್ರೀ ಶರಣಬಸವೇಶ್ವರ ಪುರಾಣದ ಪ್ರವಚನ ಮಾಡಿದ್ದಾರೆ ಬಾನುಲಿಯ ಕೇಳಿ ಕಲಿ ಮಾಲಿಕೆಯ ರೂಪಕ ಕೂಡಾ ರಚಿಸಿದ್ದಾರೆ
ಇವರು ಚಂದಪ್ಪನ ಶಾಲೆ , ಹಿಂಗ ಒಂದಿಷ್ಟು ಎಂಬೆರಡು ಕವನ ಸಂಕಲನ ರಚಿಸಿ ಬಿಡುಗಡೆಗೊಳಿಸಿದ್ದಾರೆ ಪ್ರಸ್ತುತ ಐದನೆಯ ತರಗತಿಯ ಪಠ್ಯದಲ್ಲಿ ಇವರು ರಚಿಸಿದ ಕಾಮನಬಿಲ್ಲು ಪಧ್ಯ ಮಕ್ಕಳ ಅಭ್ಯಾಸಕ್ಕಾಗಿ ನೀಡಲಾಗಿದ್ದು ಇವರ ಸರಳ ಸಾಹಿತ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಅಷ್ಟೆ ಅಲ್ಲದೆ 1999 ರಲ್ಲಿ ನಾಲ್ಕನೆಯ ತರಗತಿ ಮಕ್ಕಳ ಓದಿಗಾಗಿ ಚಂದಪ್ಪನ ಶಾಲೆ ಎಂಬ ಪಧ್ಯ ನೀಡಿದ್ದು ಅದನ್ನು ಇಲ್ಲಿ ಸ್ಮರಣೆ ಮಾಡಬಹುದಾಗಿದೆ ಅಲ್ಲದೆ ಇವರ ಸಾಧನೆ ಗುರುತಿಸಿ ರಂಗಪರಿಸರ ಪ್ರಶಸ್ತಿ , ಸಿಕ್ಕೆಂದುರ ನಾಟಕ ಅಭಿನಯಕ್ಕಾಗಿ ರಂಗನಕ್ಷತ್ರ ಪ್ರಶಸ್ತಿ , ಡೆಪೂಟಿ ಚನಬಸಪ್ಪ ಪ್ರಶಸ್ತಿ , ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ದೀಮಂತ ನಾಗರಿಕ ಪ್ರಶಸ್ತಿ ಒಳಗೊಂಡಂತೆ ಇನ್ನು ಹಲವಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ ಇಂತಹ ಮಕ್ಕಳ ಸಾಹಿತಿಗಳು ಅಲಗಿಲವಾಡ ಶಾಲೆಗೆ ಆಗಮಿಸಿ ಅವರ ವೃತ್ತಿ ಜೀವನದ ಅನುಭವದ ನುಡಿಗಳನ್ನು ಮಾತನಾಡಿದ ಸಾಹಿತಿಗಳಿಗೆ ಪ್ರಧಾನಗುರುಗಳಾದ ಹಾಲೇಶ ಎಸ್ ಜಕ್ಕಲಿ ಶಿಕ್ಷಕರಾದ ನೇಮೇಶ ಯರಗುಪ್ಪಿ ಗ್ರಾಮದ ಗುರುಹಿರಿಯರು ಮಕ್ಕಳು ಅಭಿನಂದನೆ ಸಲ್ಲಿಸಿದ್ದಾರೆ