DHARWAD: ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದರು ಡಾ.ಮಾತೆ ಮಾದೇವಿಯವರು .ಡಾ.ಲತಾ ಎಸ್ ಮುಳ್ಳೂರ.

ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದರು ಡಾ.ಮಾತೆ ಮಾದೇವಿಯವರು .ಡಾ.ಲತಾ ಎಸ್ ಮುಳ್ಳೂರ.   
   ಧಾರವಾಡ : ಪೂಜ್ಯ ಮಹಾಜಗದ್ಗುರು ಡಾ,ಮಾತೆ ಮಹಾದೇವಿಯವರು.ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕವಾಗಿ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದರು. ಬಸವತತ್ತಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು ಎಂದು  ಡಾ.ಲತಾ ಎಸ್ ಮುಳ್ಳೂರ.ರಾಷ್ಟ್ರೀಯ ಅಧ್ಯಕ್ಷರು ಸಾವಿತ್ರಿಬಾಯಿ ಪುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ ರಿ. ನವದೆಹಲಿ ಹೇಳಿದರು.ಅವರು ಧಾರವಾಡದಲ್ಲಿ ರಾಷ್ಟ್ರೀಯ ಬಸವದಳ ಜಿಲ್ಲಾ ಘಟಕ ಹಮ್ಮಿಕೊಂಡ  ವಿಶ್ವದ ಪ್ರಥಮ ಮಹಿಳಾ ಮಹಾ ಜಗದ್ಗುರು ಪರಮಪೂಜ್ಯ ಲಿಂಗೈಕ್ಯ ಡಾ.ಮಾತೆ ಮಾದೇವಿಯವರ 79 ನೇ ವರ್ಧಂತಿ ಹಾಗೂ ಆರನೆಯ ಲಿಂಗೈಕ್ಯ  ಸಂಸ್ಮರಣೆ ಕಾರ್ಯಕ್ರಮವನ್ನು  ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮಹಿಳಾ ಜಗದ್ಗುರುಗಳಾಗಿ ಸಾಮಾಜಿಕವಾಗಿ ಅನೇಕ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿದವರು ಮಾತಾಜಿ.
ಚಿನ್ಮೂಲಾದ್ರಿಯ ಚಿತ್ಕಳೆಯಾದ ಪೂಜ್ಯ ಶ್ರೀ ಮಹಾಜಗದ್ಗುರು ಡಾ. ಮಾತೆ ಮಹಾದೇವಿಯವರು ಜನಿಸಿದ್ದು ಚಿತ್ರದುರ್ಗದ ಸಾಸಲಟ್ಟಿಯ ಶರಣೆ ಗಂಗಮ್ಮ ಡಾ. ಎಸ್.ಆರ್ ಬಸಪ್ಪನವರ ಚಿದ್ಗರ್ಭದಲ್ಲಿ ದಿ 13-03-1946 ರಂದು ಅವರ ಜನ್ಮ  ಚಿಕ್ಕ ವಯಸ್ಸಿನಲ್ಲಿ ಮಹಾಜಗದ್ಗುರು ಲಿಂಗಾನಂದ ಮಹಾಸ್ವಾಮೀಜಿಯವರಿಂದ ಲಿಂಗದೀಕ್ಷೆ ಮತ್ತು ಜಂಗಮ ದೀಕ್ಷೆ ಪಡೆದು ಮಾತೆ ಮಹಾದೇವಿ ಎಂಬ ನಾಮದೊಂದಿಗೆ ವಿಶ್ವಕ್ಕೆ ಪರಿಚಿತರಾದರು.
ಮಾತಾಜಿ . ಪೂಜ್ಯ ಶ್ರೀ ಮಾತಾಜಿಯವರು ಶ್ರೇಷ್ಠ ಸಾಹಿತಿ, ಸಂಶೋಧಕಿ, ಕವಿಯತ್ರಿ, ಲೇಖಕರಲ್ಲದೆ, ಉತ್ತಮ ವಾಗ್ಮಿಗಳಾಗಿದ್ದರು. ಅವರು ಹುಟ್ಟು ಹೋರಾಟಗಾರರಾಗಿದ್ದ ಅವರು, 12ನೇ ಶತಮಾನದಲ್ಲಿ ಧರ್ಮ ಗುರು ಬಸವಣ್ಣನವರು ಸಂಸ್ಥಾಪಿಸಿ ಕೊಟ್ಟ ಲಿಂಗಾಯತ ಧರ್ಮದ ಪುನುರುತ್ಥಾನಕ್ಕಾಗಿ ವಚನ ಸಾಹಿತ್ಯವನ್ನ ಆಳವಾಗಿ ಆಧ್ಯಯನಿಸಿ ಸಮಾಜದಲ್ಲಿ ಬಸವತತ್ತ್ವ ಜಾರಿಗೆ ತರಲು ಪ್ರಯತ್ನಿಸಿದವರು ಎಂದರು.ಈ ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯಶ್ರೀ ಜಗದ್ಗುರು ಮಾತೇ ಜ್ಞಾನೇಶ್ವರಿ ಯವರು.ಈ ಸಂದರ್ಭದಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ಶ್ರೀ ಜಗದ್ಗುರು ಮಾತೆ ಮಾದೇವಿಯವರ  ಭಾವಚಿತ್ರದ ಪೂಜೆ ಸಲ್ಲಿಸಿ ನಮನ ಸಲ್ಲಿಸಲಾಯಿತು. ನಂತರ ಬಸವ ಧರ್ಮದ 
ಧ್ವಜಾರೋಹಣವನ್ನು ರಾಜಶೇಖರ್ ಸೌವದತ್ತಿ ಹಿರಿಯ ನ್ಯಾಯವಾದಿಗಳು ನೆರವೇರಿಸಿ ಮಾತನಾಡಿದರು. ಧಾರವಾಡ ವಕೀಲರ ಸಂಘದ ಅಧ್ಯಕ್ಷರಾದ ಅಶೋಕ ಏಣಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.  ಪೂಜಾ ಸವದತ್ತಿ. ಜಿಲ್ಲಾಧ್ಯಕ್ಷರು ರಾಷ್ಟ್ರೀಯ ಬಸವ ದಳ  ಅಧ್ಯಕ್ಷತೆವಹಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷರಾದ ಬಸವರಾಜ ಆನೆಗುಂದಿ. ಪ್ರಧಾನ ಕಾರ್ಯದರ್ಶಿ ಅಜಯ್ ಆರ್ ಚೌಹಾನ್, ಉಪಾಧ್ಯಕ್ಷರಾದ ಪರಮೇಶ್ವರ್ ಕೆಂಗಾರ್. ಸಂತೋಷ್ ಬಡಿಗೇರ್ ಕೋಶಾಧ್ಯಕ್ಷರು  ಜಿಲ್ಲಾ ಘಟಕದ ಪದಾಧಿಕಾರಿಗಳಾದ ಪದ್ಮಾವತಿ ಕಮ್ಮಾರ್. ಪಾಟೀಲ್ ರಮಾನಂದ ಕಮ್ಮಾರ್ ಬಸವರಾಜ್ ಸತ್ಯಣ್ಣನವರ್.ಅಶೋಕ್ ಶೆಟ್ಟರ್ ಚಂದ್ರಶೇಖರ್ ಹಿರೇಮಠ. ರಾಜಶೇಖರ್ ಸಂಗಣ್ಣನವರ್ ಭಾಗವಹಿಸಿದ್ದರು .
ನವೀನ ಹಳೆಯದು

نموذج الاتصال