25 ರಂದು ಧಾರವಾಡ ತಾಲೂಕಿನ 11 ನೇ ಕನ್ನಡ ಸಾಹಿತ್ಯ ಸಮ್ಮೇಳನ .
ಧಾರವಾಡ : 11 ನೇ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಾರ್ಚ 25 ರಂದು ಕರ್ನಾಟಕ ಆಲೂರು ವೆಂಕಟರಾವ್ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಹಿರಿಯ ಕಾಮಣಿ ತಜ್ಞ ವೈದ್ಯ ಡಾ.ನಿತಿನ್ ಚಂದ್ರ ಹತ್ತಿಕಾಳ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದ್ದು, ಕಾರ್ಯಕ್ರಮ ದಂದು ಬೆಳಗ್ಗೆ 8 :30 ಕ್ಕೆ ಧ್ವಜಾರೋಹಣ, ಸರ್ವಾಧ್ಯಕ್ಷರ ಮೆರೆವಣಿಗೆ, ಕನ್ನಡಕ್ಕಾಗಿ ನಡಿಗೆ ಕಾರ್ಯಕ್ರಮ ನಡೆಯಲಿದೆ ಎಂದರು. ಬೆಳಗ್ಗೆ 10 :30 ಕ್ಕೆ ಹಿರಿಯ ಸಾಹಿತಿ ಡಾ.ವಿನಯ ವಕ್ಕುಂದ ಸಮ್ಮೇಳನಕ್ಕೆ ಚಾಲನೆ ನೀಡುವರು. ಹಿರಿಯ ಸಾಹಿತಿ ಡಾ.ರಾಘವೇಂದ್ರ ಪಾಟೀಲ ಆಶಯ ನುಡಿಗಳನ್ನಾರುವರು. ಕವಿವಿ ಕುಲಸಚಿವ ಡಾ.ಎ.ಚೆನ್ನಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಸಂತೋಷ ಹಾನಗಲ್ ಉಪಸ್ಥಿತರಿರುವರು ಎಂದರು.
ಮಧ್ಯಾಹ್ನ 12 :30 ಕ್ಕೆ ಡಾ.ಪಿ.ಎಸ್.ಹಳ್ಯಾಳ ಅಧ್ಯಕ್ಷತೆಯಲ್ಲಿ ನಡೆಯುವ ಸಂಕೀರ್ಣಗೋಷ್ಠಿಯಲ್ಲಿ ಆರೋಗ್ಯ ಮತ್ತು ಸಮಾಜ ಸ್ವಾಸ್ಥ ಕುರಿತು ಡಾರಾಜನ್ ದೇಶಪಾಂಡೆ, ಸುಸ್ಥಿರ ಕೃಷಿಯ ಭವಿಷ್ಯದ ಆಯಾಮಗಳು ಕುರಿತು ಡಾ.ಡಿ.ಎನ್.ಕಂಬ್ರೇಕರ ಮಾತನಾಡುವರು. ಮಧ್ಯಾಹ್ನ 2 ಕ್ಕೆ ಕನ್ನಡ ನಾಡು ನುಡಿಯ ಗೀತೆಗಳ ಪ್ರಸ್ತುತಿ ನಡೆಯಲಿದೆ.
ಮಧ್ಯಾಹ್ನ 2:30 ಕ್ಕೆ ಹಿರಿಯ ಕವಿ ನರಸಿಂಹ ಪರಾಂಜಪೆ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ ಎಂದರು. ಸಂಜೆ 4 ಕ್ಕೆ ಸರ್ವಾಧ್ಯಕ್ಷರೊಂದಿಗೆ ಸಂವಾದ ನಡೆಯಲಿದ್ದು, ಹಿರಿಯ ಚಿಂತಕರು ಭಗವಹಿಸುವರು. ಕಿಟೆಲ್ ಕಾಲೇಜು ಪ್ರಾಚಾರ್ಯೆ ರೇಖಾ ಜೋಗುಳ ಸಮಾರೋಪ ನುಡಿಗಳನ್ನಾಡುವರು. ಕವಿವಿಒ ಮೌಲ್ಯಮಾಪನ ಕುಲಸಚಿವ ಡಾ.ನಿಂಜಲಿಂಗಪ್ಪ ಮಟ್ಟಿಹಾಳ ಅಧ್ಯಕ್ಷತೆ ವಹಿಸುವವರು. ಸಂಜೆ 6 :00 ಗಂಟೆಗೆ ಸಾಂಸ್ಕೃತಿಕ ಸಮಾರಂಭ ನಡೆಯಲಿದೆ ಎಂದರು.
ಧಾರವಾಡ ತಾಲೂಕು ಅಧ್ಯಕ್ಷ ಮಹಾಂತೇಶ ನರೇಗಲ್, ಗೌರವ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ, ಪ್ರೊ. ಕೆ.ಎಸ್.ಕೌಜಲಗಿ, ಶಾಂತವೀರ ಬೆಟಗೇರಿ,ಅಜಿತಕುಮಾರ ದೇಸಾಯಿ ಇತರರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.