DHARWAD:ಪರಿವರ್ತನೆಯ ಭಾರತ ಮತ್ತು ಅಭಿವೃದ್ಧಿ ಎಂಬ ವಿಷಯದ ಕುರಿತು 2 ದಿನ ಸಮ್ಮೇಳನ.

ಪರಿವರ್ತನೆಯ ಭಾರತ ಮತ್ತು ಅಭಿವೃದ್ಧಿ  ಎಂಬ ವಿಷಯದ ಕುರಿತು 2 ದಿನ ಸಮ್ಮೇಳನ. 
ಧಾರವಾಡ  :
ಕರ್ನಾಟಕ ರಾಜ್ಯದ ಪ್ರಮುಖ ಯೋಜನೆಗಳು ಎಲ್ಲಾ ವಲಯಗಳಲ್ಲಿ ಮುಂಚೂಣಿಯಲ್ಲಿದ್ದು, ಸಮಗ್ರ ಅಭಿವೃದ್ಧಿಗೆ ಪೂರಕವಾಗಿವೆ ಎಂದು ರಾಜ್ಯ ಹಣಕಾಸು ಇಲಾಖೆ ಕಾರ್ಯದರ್ಶಿ ವಿಶಾಲ್. ಆರ್  ಹೇಳಿದರು.

ಅವರು ಸೆಂಟರ್ ಫಾರ್ ಮಲ್ಟಿಡಿಸಿಪ್ಲೇನರಿ ಡೆವಲಪ್ಮೆಂಟ್ ರಿಸರ್ಚ್ ಮತ್ತು ಬೆಂಗಳೂರಿನ ಸೆಂಟರ್ ಫಾರ್ ಏಜ್ಯುಕೇಶನಲ್ ಆಂಡ್ ಸೋಶಿಯಲ್ ಸೈನ್ಸ್ ಸ್ಟಡೀಸ್ ಸಹಯೋಗದಲ್ಲಿ ಓಸಿಯನ್ ಪರ್ಲ್ ದಲ್ಲಿ ಆಯೋಜಿಸಿದ ಎರಡು ದಿನಗಳ ಅಭಿವೃದ್ಧಿ ಸಮ್ಮೇಳನದ ಬದಲಾದ ಭಾರತ ಎಂಬ ವಿಷಯದ ಕುರಿತು ಆಯೋಜಿಸಿದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ರಾಜ್ಯವು ಉತ್ತಮ ತಲಾ ಆದಾಯ, ಜೀವನ ಶೈಲಿಯಿಂದ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದೆ ಎಂದ ಅವರು ಡಾ.ನಂಜುಂಡಪ್ಪ ಮತ್ತು ಪ್ರೊ.ಗೋವಿಂದರಾವ್ ಅವರ ನೀಡಿದ ವರದಿಗಳ ಅನುಗುಣವಾಗಿ ಪ್ರಾದೇಶಿಕ ಅಸಮತೋಲನ ತೊಡೆದುಹಾಕಲು ಅನೇಕ ಯೋಜನೆಗಳನ್ನು ರೂಪಿಸಲಾಗಿದೆ ಎಂದ ಅವರು ಜನರ ಕಲ್ಯಾಣಕ್ಕಾಗಿ ಉತ್ತಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುತ್ತದೆ. ಸ್ಥಿರವಾದ ಆರ್ಥಿಕತೆಯನ್ನು ಹೊಂದಲು ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. 
 
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಧಾರವಾಡ ಸಿ.ಎಂ.ಡಿ.ಆರ್ ಚೇರಮನ್ ಕೈಲಾಶಚಂದ್ರ ಶರ್ಮಾ ಮಾತನಾಡಿ ಕಳೆದ ದಶಕದಿಂದ ಶಿಕ್ಷಣ ವಲಯದಲ್ಲಿ ಕ್ರಾಂತಿಕಾರ ಬದಲಾವಣೆಗಳು ಆಗಿದ್ದು. ಪ್ರಮುಖವಾಗಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯಿಂದ ಕೌಶಲ್ಯಯುತವಾದ ಶಿಕ್ಷಣವು ಉದ್ಯಮದ ಜೊತೆಗೆ ಹೊಸ ರೂಪ ನೀಡಿದೆ ಎಂದ ಅವರು ಜ್ಞಾನ ಆಧಾರಿತ ಶಿಕ್ಷಣವನ್ನು ನೀಡಲು ಬಹು ಶಿಸ್ತಿಯ ವ್ಯವಸ್ಥೆ ಬಹಳ ಉಪಯುಕ್ತವಾಗಿದೆ ಎಂದರು. ವಸು ದೈವೀಕ ಕುಟುಂಬಂ ಎಂಬ ಪರಿಕಲ್ಪನೆಯಿಂದ ಭಾರತವು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳದಿದೆ ಎಂದರು.

ಇದೇ ಸಂದರ್ಭದಲ್ಲಿ ಸಿ.ಎಮ್.ಡಿ.ಆರ್. ವತಿಯಿಂದ ಹೊರತರಲಾದ ನಿಯತಕಾಲಿಕೆ ಬಿಡುಗಡೆ ಮಾಡಲಾಯಿತು. ಭಾರತ‌ ಜ್ಞಾನ ವ್ಯವಸ್ಥೆ ಎಂಬ ವಿಷಯದ ಕುರಿತು ಆಯೋಜಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. 

ಈ ಸಮಾವೇಶದಲ್ಲಿ ಐಐಎಂ ನಾಗ್ಪುರ ನಿರ್ದೇಶಕರಾದ ಪ್ರೊ. ಭೀಮರಾಯ ಮೇತ್ರಿ, ಟೋಯೊಟಾ ಕಂಪನಿ ಸಲಹೆಗಾರ ಪರಶುರಾಮನ್  ನಿಟ್ಟೆ ಶಿಕ್ಷಣ ಸಂಸ್ಥೆಯ ಡಾ. ಸಂದೀಪ್ ಶಾಸ್ತ್ರೀ, ಬೆಂಗಳೂರು ವಿಶ್ವವಿದ್ಯಾಲಯದ ಡಾ. ಎಸ್. ಆರ್. ಕೇಶವ, ಅರ್ಥಶಾಸ್ತ್ರಜ್ಞ ಡಾ. ಚರಣ್ ಸಿಂಗ್, ಗದಗ ಕೆ.ಎಸ್.ಅರ್.ಡಿ.ಪಿ ಕುಲಪತಿ ಪ್ರೊ. ವಿಷ್ಣುಕಾಂತ್ ಎಸ್. ಚಿಟಪಲ್ಲಿ, ಹೈದರಾಬಾದ್ ವಿಶ್ವವಿದ್ಯಾಲಯ ಕುಲಪತಿ ಡಾ. ಬಿ. ಜೆ ರಾವ್ ಸಂವಾದದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಚಾಮರಾಜನಗರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಎಂ. ಆರ್. ಗಂಗಾಧರ್, ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ. ಪ್ರಮೋದ್ ಗಾಯಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ. ಡಿ. ಬಿ. ನಾಯಕ್, ಗಿರಿಧರ್ ಕಿನ್ಹಾಲ್ ಸಿಎಂಡಿಆರ್ ಆಡಳಿತ ಮಂಡಳಿ ಸದಸ್ಯರಾದ  ಪ್ರೊ.ಜೈ ಪ್ರಭಾಕರ, ಪ್ರೊ. ಸಿ. ರಾಜು ಮತ್ತು ಪ್ರೊ. ವಿಜಯಲಕ್ಷ್ಮಿ ಅಮ್ಮಿನಭಾವಿ, ಪ್ರೊ. ಬಿ. ಎಚ್. ನಾಗೂರ್, ಪ್ರೊ. ಜಂಭುಲಿಂಗಪ್ಪ, ಪ್ರೊ. ಮುಗ್ದೂರ್, ಪ್ರೊ. ಮನೋಜ ಡೊಳ್ಳಿ,  ಸಿಎಂಡಿಆರ್ ರಿಜಿಸ್ಟ್ರಾರ್ ವೇದವ್ಯಾಸ್ ಹುನಗುಂದ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

                                --------------

ಫೋಟೊ ಶೀರ್ಷಿಕೆ-1

ಸೆಂಟರ್ ಫಾರ್ ಮಲ್ಟಿಡಿಸಿಪ್ಲೇನರಿ ಡೆವಲಪ್ಮೆಂಟ್ ರಿಸರ್ಚ್ ಮತ್ತು ಬೆಂಗಳೂರಿನ ಸೆಂಟರ್ ಫಾರ್ ಏಜ್ಯುಕೇಶನಲ್ ಆಂಡ್ ಸೋಶಿಯಲ್ ಸೈನ್ಸ್ ಸ್ಟಡೀಸ್ ಸಹಯೋಗದಲ್ಲಿ ಆಯೋಜಿಸಿದ ಪರಿವರ್ತನೆಯ ಭಾರತ ಮತ್ತು ಅಭಿವೃದ್ಧಿ  ಎಂಬ ವಿಷಯದ ಕುರಿತು ಆಯೋಜಿಸಿದ ಎರಡು ದಿನಗಳ ಸಮ್ಮೇಳನವನ್ನು ಹಣಕಾಸು ಇಲಾಖೆ ಕಾರ್ಯದರ್ಶಿ ವಿಶಾಲ್. ಆರ್. ಉದ್ಘಾಟಿಸಿದರು.


ಫೋಟೊ ಶೀರ್ಷಿಕೆ-2

ಸೆಂಟರ್ ಫಾರ್ ಮಲ್ಟಿಡಿಸಿಪ್ಲೇನರಿ ಡೆವಲಪ್ಮೆಂಟ್ ರಿಸರ್ಚ್ ಮತ್ತು ಬೆಂಗಳೂರಿನ ಸೆಂಟರ್ ಫಾರ್ ಏಜ್ಯುಕೇಶನಲ್ ಆಂಡ್ ಸೋಶಿಯಲ್ ಸೈನ್ಸ್ ಸ್ಟಡೀಸ್ ಸಹಯೋಗದಲ್ಲಿ ಆಯೋಜಿಸಿದ ಪರಿವರ್ತನೆಯ ಭಾರತ ಮತ್ತು ಅಭಿವೃದ್ಧಿ  ಎಂಬ ವಿಷಯದ ಕುರಿತು ಆಯೋಜಿಸಿದ ಎರಡು ದಿನಗಳ ಸಮ್ಮೇಳನವನ್ನು ಹಣಕಾಸು ಇಲಾಖೆ ಕಾರ್ಯದರ್ಶಿ ವಿಶಾಲ್. ಆರ್. ಉದ್ಘಾಟಿಸಿ ಮಾತನಾಡಿದರು.
ನವೀನ ಹಳೆಯದು

نموذج الاتصال