ಗ್ಯಾರಂಟಿ ಸಮಿತಿಯ ಪ್ರಗತಿ ಪರಿಶೀಲನ ಸಭೆ.
ಕಿತ್ತೂರ : ವಿನಯ ಕುಲಕರ್ಣಿ, ಅಧ್ಯಕ್ಷರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬೆಂಗಳೂರು ಹಾಗೂ ಶಾಸಕರು ಧಾರವಾಡ -71 ರವರ ನೇತೃತ್ವದಲ್ಲಿ ಧಾರವಾಡ ತಾಲೂಕ ಗ್ಯಾರಂಟಿ ಸಮಿತಿ ಸಭೆಯ ಅಧ್ಯಕ್ಷ ಅರವಿಂದ ಏಗನಗೌಡರ ಇವರ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಸಮಿತಿಯ ಪ್ರಗತಿ ಪರಿಶೀಲನ ಸಭೆಯನ್ನು ಕಿತ್ತೂರಿನ ದೊಂಬರಕೊಪ್ಪ ಐ ಬಿ ಯಲ್ಲಿ ಜರುಗಿಸಲಾಯಿತು.
ಐದೂ ಯೋಜನೆಗಳಿಗೆ ಸಂಬಂಧ ಪಟ್ಟ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಸಂಪೂರ್ಣ ಮಾಹಿತಿ ನೀಡಿದರು.
ಶಕ್ತಿ ಯೋಜನೆ
ಘಟಕ ವ್ಯವಸ್ಥಾಪಕರು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
ಶಕ್ತಿ ಯೋಜನೆಯಡಿಯಲ್ಲಿ ಒಟ್ಟು ಮಹಿಳಾ ಪ್ರಯಾಣಿಕರು ಮಾರ್ಚ-2025ನೇ ತಿಂಗಳಲ್ಲಿ ಒಟ್ಟು 443495 ರಷ್ಟು ಪ್ರಯಾಣಿಸಿರುತ್ತಾರೆ. ಸದರಿ ಮಹಿಳಾ ಪ್ರಯಾಣಿಕರಿಂದ ರೂ, 1,42,49,328/- ಗಳಷ್ಟು ಆದಾಯವಾಗಿರುತ್ತದೆ .
ಗೃಹ ಲಕ್ಷ್ಮೀ ಯೋಜನೆ
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಧಾರವಾಡ (ಗ್ರಾಮೀಣ) -71
ಗೃಹ ಲಕ್ಷ್ಮೀ ಯೋಜನೆಯಡಿಯಲ್ಲಿ ಇಂಧೀಕರಿಸಲಾದ ಪಡಿತರ ಚೀಟಿಗಳ ಸಂಖ್ಯೆ: 53543. ಯೋಜನೆಗೆ ನೋಂದಣಿಯಾದ ಫಲಾನುಭವಿಗಳ ಸಂಖ್ಯೆ: 53364 ಇದ್ದು, ಈ ಎಲ್ಲ ಅರ್ಹ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆ ಸೌಲಭ್ಯವನ್ನು ಪಡೆದುಕೊಂಡಿರುತ್ತಾರೆ. ಅದರಂತೆ ಸದರಿ ಫಲಾನುಭವಿಗಳಿಗೆ ಹಣ ಸಂದಾಯವಾಗಿರುತ್ತದೆ.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಧಾರವಾಡ (ಶಹರ) - 71
ಗೃಹ ಲಕ್ಷ್ಮೀ ಯೋಜನೆಯಡಿಯಲ್ಲಿ ಇಂಧೀಕರಿಸಲಾದ ಪಡಿತರ ಚೀಟಿಗಳ ಸಂಖ್ಯೆ: 40459 ಯೋಜನೆಗೆ ನೋಂದಣಿಯಾದ ಫಲಾನುಭವಿಗಳ ಸಂಖ್ಯೆ: 39902 ಇದ್ದು, ಈ ಎಲ್ಲ ಅರ್ಹ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆ ಸೌಲಭ್ಯವನ್ನು ಪಡೆದುಕೊಂಡಿರುತ್ತಾರೆ. ಅದರಂತೆ ಸದರಿ ಫಲಾನುಭವಿಗಳಿಗೆ ಹಣ ಸಂದಾಯವಾಗಿರುತ್ತದೆ.
ಅನ್ನಭಾಗ್ಯ ಯೋಜನೆ
ತಹಶೀಲ್ದಾರರು ಧಾರವಾಡ (ಆಹಾರ ವಿಭಾಗ)
ಅನ್ನಭಾಗ್ಯ ಯೋಜನೆಯಡಿಯಲ್ಲಿ ಒಟ್ಟು ಪಡಿತರ ಚೀಟಿಗಳ ಸಂಖ್ಯೆ: 53006 ಅದರಲ್ಲಿ ಮಂಜೂರಾದ ಪಡಿತರ ಚೀಟಿಗಳ ಸಂಖ್ಯೆ: 52026 ಆಧಾರ ಜೋಡನೆಯಿಂದ ವಿಫಲವಾದ ಪಡಿತರ ಚೀಟಿಗಳ ಸಂಖ್ಯೆ:800 NPCI ಲಿಂಕ್ ಆಗದೇ ಇರುವ ಪಡಿತರ ಚೀಟಿಗಳ ಸಂಖ್ಯೆ:180 ಇದ್ದು, ಅರ್ಹ ಫಲಾನುಭವಿಗಳಿಗೆ ಈ ತಿಂಗಳು 15 ಕೆ.ಜಿ ಅಕ್ಕಿ ವಿತರಿಸಲಾಗುತ್ತಿದೆ.
ಗೃಹಜ್ಯೋತಿ ಯೋಜನೆ
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹೆಸ್ಕಾಂ ಧಾರವಾಡ (ಶಹರ)
ಗೃಹಜ್ಯೋತಿ ಯೋಜನೆಯಡಿಯಲ್ಲಿ ಧಾರವಾಡ ಶಹರದ ವ್ಯಾಪ್ತಿಯಲ್ಲಿ ಒಟ್ಟು ಗೃಹ ಜ್ಯೋತಿ ಬಳಕೆದಾರರ ಅರ್ಹಫಲಾನುಭವಿಗಳ ಸಂಖ್ಯೆ: 20990 ಅಂತಾ ಇದ್ದು ಫೇಬ್ರುವರಿ-2025ರ ಅಂತ್ಯಕ್ಕೆ ರೂ,105.15 ಲಕ್ಷಗಳಷ್ಟು ಖರ್ಚಾಗಿರುತ್ತದೆ.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹೆಸ್ಕಾಂ ಧಾರವಾಡ (ಗ್ರಾಮೀಣ)
ಗೃಹಜ್ಯೋತಿ ಯೋಜನೆಯಡಿಯಲ್ಲಿ ಧಾರವಾಡ ಗ್ರಾಮೀಣ ವ್ಯಾಪ್ತಿಯಲ್ಲಿ ಒಟ್ಟು ಗೃಹ ಜ್ಯೋತಿ ಬಳಕೆದಾರರ ಅರ್ಹಫಲಾನುಭವಿಗಳ ಸಂಖ್ಯೆ: 55103 ಅಂತಾ ಇದ್ದು 01-07-2023 ರಿಂದ ಇಲ್ಲಿಯವರೆಗೆ 2903.86 ಲಕ್ಷಗಳಷ್ಟು ಖರ್ಚಾಗಿರುತ್ತದೆ.
ಯುವನಿಧಿ ಯೋಜನೆ
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹುಬ್ಬಳ್ಳಿ
ಯುವ ನಿಧಿ ಯೋಜನೆಯಡಿಯಲ್ಲಿ ಒಟ್ಟು ನೋಂದಣಿಯಾದ ಸಂಖ್ಯೆ: 2382 ಅದರಲ್ಲಿ ಧಾರವಾಡ ತಾಲೂಕಿನ ಒಟ್ಟು ಸಂಖ್ಯೆ: 1540 ಭಾಕಿ 842 ಪದವಿ ವಿದ್ಯಾರ್ಥಿಗಳಿಗೆ ಸಂದಾಯವಾದ ವೆಚ್ಚ ರೂ, 2,01,54,000/- ಡಿಪ್ಲೋಮಾ ವಿದ್ಯಾರ್ಥಿಗಳ ಸಂಖ್ಯೆ: 1,20,000/- ಸದರಿ ವಿದ್ಯಾರ್ಥಿಗಳಿಗೆ ನೀಡಲಾದ ಮೊತ್ತ ರೂ, 2,02,74,000/- ನೀಡಲಾಗಿದೆ.
ಮಾಹಿತಿ ಪಡೆದು ಮಾತನಾಡಿದ ಶಾಸಕರಾದ ಶ್ರೀ ವಿನಯ ಕುಲಕರ್ಣಿಯವರು, ಬಡವರು, ಮತ್ತು ಮಧ್ಯಮವರ್ಗದ ಜನರಿಗಾಗಿ ಈ ಯೋಜಗಳನ್ನು ಜಾರಿಗೆ ತರಲಾಗಿದ್ದು, ಅರ್ಹ ಪಲಾನುಭವಿಗಳಿಗೆ ದೊರಕುವಂತೆ, ಸಮಿತಿಯ ಸದಸ್ಯರೊಂದಿಗೆ ಸೇರಿ ಮಾಡಬೇಕು ಎಂದರು.
ಸಮಿತಿಯ ಅಧ್ಯಕ್ಷರಾದ ಅರವಿಂದ ಏಗನಗೌಡರ ಮಾತನಾಡಿ, ಈಗಾಗಲೇ ಸಂಭಂದ ಪಟ್ಟ ಅಧಿಕಾರಿಗಳು ಜನರಿಗೆ ಸ್ಪಂದನೆ ನೀಡುತ್ತಿರುವದು ಶ್ಲಾಗನಿಯ, ಇನ್ನೂ ಹೆಚ್ಚಿನ ಶ್ರಮವಹಿಸಬೇಕು ಎಂದರು. ಇದೆ ಸಮಯದಲ್ಲಿ ಗ್ಯಾರಂಟಿ ಸಮಿತಿಯ ಸದಸ್ಯರಿಂದ ಶಾಸಕರಾದ ವಿನಯ ಕುಲಕರ್ಣಿಯವರಿಗೆ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ, ಗ್ಯಾರಂಟಿ ಸಮಿತಿಯ ಸರ್ವ ಸದಸ್ಯರು,
ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಂಗಾಧರ ಕಂದಕೂರ ತಹಶೀಲ್ದಾರರಾದ ದೊಡ್ಡಪ್ಪ ಹೂಗಾರ ಸಹಾಯಕ ನಿರ್ದೇಶಕರಾದ ಚಂದ್ರು ಪೂಜಾರ ಮತ್ತು ಸಿ ಡಿ ಪಿ ಒ ಉಮಾ ಬಳ್ಳೊಳ್ಳಿ, ಗಿರೀಶ ಕೋರಿ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಹಾಜರಿದ್ದರು.