ಲಾರಿಯ ಚಕ್ರಗಳನ್ನೆ ಬಿಚ್ಚಿಕೊಂಡು ಹೋದ ಕಳ್ಳರು.

DHARWAD: ಲಾರಿಯ ಚಕ್ರಗಳನ್ನೆ ಬಿಚ್ಚಿಕೊಂಡು ಹೋದ ಕಳ್ಳರು.

   ಧಾರವಾಡ 22 : ರಸ್ತೆ ಪಕ್ಕ ಲಾರಿ ನಿಲ್ಲಿಸಿ ಚಾಲಕ ಮಲಗಿಕೊಂಡ ವೇಳೆ ಕಳ್ಳರು  ಆ ಲಾರಿಯ ಏಳು ಚಕ್ರಗಳನ್ನೇ ಬಿಚ್ಚಿಕೊಂಡು ಪರಾರಿಯಾಗಿರುವ ಘಟನೆ ಧಾರವಾಡದ ಬೈಪಾಸ್‌ನಲ್ಲಿರುವ ರಮ್ಯಾ ರೆಸಿಡೆನ್ಸಿ ಬಳಿ ನಡೆದಿದೆ. 
 ಹೊಸಪೇಟೆ ಮೂಲದ ಕಂಪನಿಯೊಂದು ಸಿಮೆಂಟ್ ಬ್ಲಾಕ್ ಡೆಲಿವರಿ ಕೊಡುವ ಕೆಲಸ ಮಾಡುತ್ತದೆ . ಅದೇ ರೀತಿ ಚಾಲಕ ಬ್ಲಾಕ್‌ಗಳನ್ನು ರಾತ್ರಿ ಡೆಲಿವರಿ ಕೊಟ್ಟು ಬೆಂಗಳೂರಿನತ್ತ ಹೋಗುತ್ತಿದ್ದ ಸಂದರ್ಭದಲ್ಲಿ ನಿದ್ದೆ  ಬಂದಿದೆ ಎಂದು ಲಾರಿಯನ್ನು ರಸ್ತೆ ಪಕ್ಕ ನಿಲ್ಲಿಸಿ ಮಲಗಿಕೊಂಡಿದ್ದ . ಈ ವೇಳೆ ಚಾಲಕನಿಗೆ ಗೊತ್ತಾಗದಂತೆ ಲಾರಿಯ ಹಿಂಬದಿಯ ಏಳು ಚಕ್ರಗಳನ್ನೇ ಖದೀಮರು ಬಿಚ್ಚಿಕೊಂಡು ಹೋಗಿದ್ದಾರೆ . ಏಳೂ ಚಕ್ರದ ಟೈರ್‌ಗಳು ಹೊಸದಾಗಿದ್ದವು . ಅವುಗಳನ್ನು ನೋಡಿಯೇ ಕಳ್ಳರು ಈ ಕೃತ್ಯ ಎಸಗಿದ್ದಾರೆ ಎಂದು ಚಾಲಕ ಆರೋಪಿಸಿದ್ದಾರೆ . 
   ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನವೀನ ಹಳೆಯದು

نموذج الاتصال