ಪರಿಸರಸ್ನೇಹಿ ಉದ್ಯಮ ಕಟ್ಟಲು ಮಹಿಳೆಯರಿಗೆ ಸಲಹೆ - ಸವಿತಾ. ಎಸ್. ಮೇಟಿ

ಪರಿಸರಸ್ನೇಹಿ ಉದ್ಯಮ ಕಟ್ಟಲು ಮಹಿಳೆಯರಿಗೆ ಸಲಹೆ - ಸವಿತಾ. ಎಸ್. ಮೇಟಿ
ಧಾರವಾಡ  13 : 
ಸೌರಶಕ್ತಿಯಂತಹ ಪರಿಸರ ಸ್ನೇಹಿ ಇಂಧನನವನ್ನು ಬಳಸಿಕೊಂಡು, ಕೆವಿಜಿಬಿಯಂತಹ ಸ್ಥಳೀಯ ಹಣಕಾಸು ಸಂಸ್ಥೆಗಳ ಬೆಂಬಲದೊಂದಿಗೆ ಮಹಿಳೆಯರು ಉದ್ಯಮಗಳನ್ನು ಕಟ್ಟುವ ಮೂಲಕ ಸ್ವಾವಲಂಬಿಗಳಾಗಬೇಕೆಂದು ಕ್ರೆಡಲ್ ನ ಎ ಜಿ ಎಂ ಸವಿತಾ. ಎಸ್. ಮೇಟಿ ಸಲಹೆ ನೀಡಿದರು.

ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ, ಧಾರವಾಡದ ಗಾಂಧೀ ನಗರದ ಸ (SELCO) ಇಂಡಿಯಾದ ಪ್ರಾದೇಶಿಕ ಕಚೇರಿಯಲ್ಲಿ, ಉದ್ಯಮಶೀಲ ಮಹಿಳೆಯರ ಯಶಸ್ಸನ್ನು ಸಂಭ್ರಮಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕವಿಜಿಬಿಯ ಐಟಿ ವಿಭಾಗದ ಚೀಫ್ ಮ್ಯಾನೇಜರ್ ಕೆ.ಎಸ್. ಅನುರಾಧ ಮಾತನಾಡಿ, ಹೆಣ್ಣು ಮಕ್ಕಳ ಜೀವನದಲ್ಲಿ ಶಿಕ್ಷಣ ಮುಖ್ಯವಾಗಿದ್ದು ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ಆಯ್ಕೆಗಳನ್ನು ಮಾಡಿಕೊಳ್ಳುವ ಧೈರ್ಯವನ್ನು ಕೊಡುತ್ತದೆ ಎಂದರು.

ಮತ್ತೊಬ್ಬ ಮುಖ್ಯ ಅತಿಥಿ, ಪ್ರಜಾವಾಣಿಯ ಹಿರಿಯ ಉಪ ಸಂಪಾದಕಿ ಕೃಷ್ಣ ಶಿರೂರ್ ಮಾತನಾಡಿ, ಸಾಧನೆಯ ಹಾದಿಯಲ್ಲಿ ಆರೋಗ್ಯ ಮುಖ್ಯ ಪಾತ್ರ ವಹಿಸುತ್ತದೆ. ಅದ್ದರಿಂದ ಹೆಣ್ಣು ಮಕ್ಕಳು ಆರೋಗ್ಯದ ಕಾಳಜಿ ವಹಿಸಬೇಕೆಂದ ಅವರು, ತಾವು ಕ್ಯಾನ್ಸರ್ ರೋಗವನ್ನು ಗೆದ್ದು ಬಂದ ಅನುಭವವನ್ನು ಹಂಚಿಕೊಂಡರು. ಕೆವಿಜಿಬಿಯ ಹಿರಿಯ ವ್ಯವಸ್ಥಾಪಕಿ ಕದಂಬಿನಿ ಅವರು, ಬ್ಯಾಂಕಿಂಗ್ ಕ್ಷೇತ್ರದ ಎಲ್ಲಾ ವಿಭಾಗಗಳಲ್ಲಿಯೂ ಮಹಿಳೆಯರಿಗೆ ಆದ್ಯತೆಯ ಮೇಲೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆಯಬೇಕೆಂದು ಹೇಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಕ್ಕೋದ ಡೆಪ್ಯುಟಿ ಜನರಲ್ ಮ್ಯಾನೇಜರ್ ಪ್ರಸನ್ನ ಹೆಗಡೆ, ಜೀವನೋಪಾಯ ಕ್ಷೇತ್ರದಲ್ಲಿ ಮಹಿಳೆಯರ ಬದುಕು ಸ್ಥಿರತೆಯಿಂದ ಸುಸ್ಥಿರತೆಯೆಡೆಗೆ ಸಾಗಲು ಬೇಕಾದ ಸೌರಶಕ್ತಿಚಾಲಿತ ವ್ಯವಸ್ಥೆಗಳನ್ನು ಸೆಲ್ಲೋ ಕಳೆದ ಮೂವತ್ತು ವರ್ಷಗಳಿಂದ ಒದಗಿಸುತ್ತಾ ಬಂದಿದೆ ಎಂದರು. ಇದೇ ಸಂದರ್ಭದಲ್ಲಿ, ಕೆವಿಜಿಬಿ ಕಚೇರಿಯ ಸಿಬ್ಬಂದಿ, ಸಾಲ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಕಿರು ದೃಶ್ಯ ರೂಪಕವನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ, ಸೆಲ್ಕೂದ ಸಿಬ್ಬಂದಿ, ಬಿಸಿನೆಸ್‌ ಅಸೋಸಿಯೇಟ್ಸ್, ಮಹಿಳಾ ಉದ್ಯಮಿಗಳು, ಧಾರವಾಡ ಜಿಲ್ಲಾ ವ್ಯಾಪ್ತಿಯ ಬೆಳಕು ಮಹಿಳಾ ಸಂಘ ಮತ್ತು ಪರಿಪೂರ್ಣ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪ್ರತಿನಿಧಿಗಳು, ಹ್ಯಾಂಡ್ಸ್ ಆನ್ ಹ್ಯಾಂಡ್ ಮತ್ತು ಬಿಡಿಎಸಸ್ ಎನ್ ಜಿಒ ಹಾಗೂ ಕವಿಜಿಬಿ ಹತ್ತು ವಿವಿಧ ಶಾಖೆಗಳ ಮಹಿಳಾ ವ್ಯವಸ್ಥಾಪಕರು ಭಾಗವಹಿಸಿದ್ದು ವಿಶೇಷವಾಗಿತ್ತು. ಸೆಲ್ಯೂ ಶಾಖಾ ವ್ಯವಸ್ಥಾಪಕಿ ಶೋಭಾ ಸಾಲಿಮ‌ ಸ್ವಾಗತಿಸಿದರು. ಕ್ಷೇತ್ರ ವ್ಯವಸ್ಥಾಪಕಿ ಉಮಾ ಪಾಟೀಲ್‌ ಸಮಾರೋಪ ಭಾಷಣ ಮಾಡಿದರು. ಚಂದ್ರಕಲಾ ವಂದಿಸಿ, ಸ್ಮಿತಾ ಮುಧೋಳ್‌ ನಿರೂಪಿಸಿದರು.
ನವೀನ ಹಳೆಯದು

نموذج الاتصال