DHARWAD:ಡಾ ಲತಾ ಎಸ್ ಮುಳ್ಳೂರ 2025 ಯುನಿವಸ೯ಲ್ ಐಕಾನ ಮಹಿಳಾ ಸಾಧಕಿ ಪ್ರಶಸ್ತಿ.
ಧಾರವಾಡ 25 : ಯೂನಿವರ್ಸಲ್ ಫಿಲ್ಮ್ ಮೇಕರ ಕೌನ್ಸಿಲ್ ಆಂಡ್ ನವ ಕರ್ನಾಟಕ ಫಿಲ್ಮ್ ಅಕ್ಯಾಡಮಿ
ವತಿಯಿಂದ ಸಿಲ್ವರ್ ಸ್ಕ್ರಿನ್ ಉಮನ್ಸ ಅಚೀವರ ಅವಾಡ೯ 2025
ಆಂಡ್ ಯೂನಿವರ್ಸಲ್ ಐಕೋನ್ ಉಮನ್ ಅಚೀವರ ಅವಾಡ೯ 2025
ಕಾರ್ಯಕ್ರಮವು ಬೆಂಗಳೂರಿನ
ಬಸವೇಶ್ವರನಗರ ಪ್ರಭಾತ ಹಾಲ, ನೆರವೇರಿತು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ .ಲತಾ.ಎಸ್.ಮುಳ್ಳೂರ ರಾಷ್ಟ್ರೀಯ ಅಧ್ಯಕ್ಷರು ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ (ರಿ) ನವದೆಹಲಿ ಹಾಗೂ ಸಂಸ್ಥಾಪಕ ರಾಜ್ಯಾಧ್ಯಕ್ಷರು ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ ಇವರಿಗೆ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಗಾಗಿ ಮಹಿಳಾ ಸಬಲೀಕರಣ.ಮಹಿಳಾ ಸಮಾನತೆಯ ಹೋರಾಟಕ್ಕಾಗಿ ಇವರ ಸಾಧನೆಗೆ "ಮಹಿಳಾ ಸಾಧಕಿ 2025 " ಪ್ರಶಸ್ತಿ ನೀಡಿ ಗೌರವಿಸಿದರು ,ಡಾ . ಲತಾ . ಎಸ್.ಮುಳ್ಳೂರ ಅವರಿಗೆ ಮಹಿಳಾ ಸಾಧಕಿ ಪ್ರಶಸ್ತಿ ಪ್ರದಾನ ಈ ಪ್ರಶಸ್ತಿ ಸಮಸ್ತ ಶಿಕ್ಷಕಿಯರಿಗೆ ಹಾಗೂ ನಮ್ಮ ಸಂಘದ ಪದಾಧಿಕಾರಿಗಳಿಗೆ ಅರ್ಪಣೆ ಮಾಡಿದ್ದಾರೆ. ಈ ಸಮಾರಂಭದಲ್ಲಿ ಡಾ ಎಮ್ ಎ ಮುಮ್ಮಿಗಟ್ಟಿ,
ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜನಪ್ರಿಯ ನಟಿ ಭವ್ಯಾ ಹಿರಿಯ ಕಲಾವಿದೆ ರಾಧಾ ರಾಮಚಂದ್ರ ನಟಿ ಸುನೇತ್ರಾ ಪಂಡಿತ್ ಹಾಗೂ ಅನೇಕ ಬೆಳ್ಳಿ ತೆರೆಯ ಹಾಗೂ ಕಿರುತೆರೆಯ ಕಲಾವಿದರು ಭಾಗವಹಿಸಿದ್ದರು ಡಾ .ಲತಾ. ಎಸ್. ಮುಳ್ಳೂರ ಪ್ರಶಸ್ತಿಯನ್ನು ನೀಡಿ ಗೌರವಿಸಿ ಸನ್ಮಾನಿಸಿದ ಕಾರ್ಯಕ್ರಮದ ಆಯೋಜಕರಿಗೆ ಧನ್ಯವಾದಗಳನ್ನು ತಿಳಿಸಿದರು.