ಗುತ್ತಿಗೆದಾರರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿಭಟನೆ
ಧಾರವಾಡ : ಗುತ್ತಿಗೆದಾರರ ಸಮಸ್ಯೆಗಳನ್ನು ಪರಿಹರಿಸುವಂತೆ ಮುಖ್ಯಮಂತ್ರಿ ಯನ್ನು ಒತ್ತಾಯಿಸಿ ಧಾರವಾಡ ಜಿಲ್ಲೆ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಸುಭಾಸ ಪಾಟೀಲ್ ನೇತೃತ್ವದಲ್ಲಿ ನವಲಗುಂದದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶಿಲ್ದಾರರಿಗೆ ಮನವಿ ಅರ್ಪಿಸಿದರು.
ಈಗ ಸುಮಾರು 4 ವರ್ಷದಿಂದ ಸಮಸ್ಯೆಗಳಿಂದ ನರಳುತ್ತಿದ್ದಾರೆ . ವಿಶೇಷವಾಗಿ ನವಲಗುಂದ ತಾಲೂಕಿನಲ್ಲಿ ಎಲ್ಲಾ ಕಾಮಗಾರಿಗಳನ್ನು ಲ್ಯಾಂಡ್ ಆರ್ಮಿ ಗೆ KRIDL ( Land Army ) ಹಸ್ತಾಂತರಿಸುತ್ತಿದ್ದಾರೆ ಹೀಗಾಗಿ ಸಣ್ಣ ಗುತ್ತಿಗೆದಾರರು ಕೆಲಸವಿಲ್ಲದೇ ಖಾಲಿ ಕುಳಿತಿದ್ದಾರೆ . ಅಲ್ಲದೇ ಸರ್ಕಾರ ಗಮನಹರಿಸಿ ಗುತ್ತಿಗೆದಾರರನ್ನು ಈ ಸಮಸ್ಯೆಗಳಿಂದ ಪಾರುಮಾಡಬೇಕೆಂದು ಸಂಘವು ಆಗ್ರಹಿಸಿದೆ.
ಪ್ರತಿಭಟನೆಯಲ್ಲಿ ಧಾರವಾಡ ಜಿಲ್ಲೆ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಸುಭಾಷ್ ಪಾಟೀಲ್, ಎಮ್.ಎಸ್.ದಿಂಡಿ ಚವ್ಹಾಣ , ವೆಂಕಣ್ಣ ಬಂಡಿವಡ್ಡರ , ಜಿ.ವಾಯ್.ಪಾಟೀಲ , ಜಹಾಗೀರದಾರ , ಮಂಜುನಾಥ ಕಾಲವಾಡ , ಯಲ್ಲಪ್ಪಾ ದುಂದು , ಎಮ್.ಎಸ್.ಮನಗೂಳಿ , ಆನಂದ ಚವಡಿ , ಬಿ.ಎಲ್.ಪಾಟೀಲ್ , ಎಸ್.ಕೆ.ಹಿರೇಮಠ , ಶಿವು ಹಾಲದೋಟರ ಮುಂತಾದವರು ಭಾಗವಹಿಸಿದ್ದರು.