DHಮಕ್ಕಳ ಅಕಾಡಮಿಗೆ ರಜತ ಮಹೋತ್ಸವ ಸಂಭ್ರಮ : 25 ಸಾವಿರ ಮಕ್ಕಳನ್ನು ಆರೋಗ್ಯವಂತರಾಗಿ ಮಾಡಲು ಚಿಂತನೆ - ಡಾ ರಾಜನ್ ದೇಶಪಾಂಡೆ.
ಧಾರವಾಡ 14 : ನಗರದ ಮಕ್ಕಳ ಅಕಾಡಮಿಯು ರಜತ ಮಹೋತ್ಸವದ ಸಂಭ್ರಮಾಚರಣೆ ಆಚರಿಸುತ್ತಿದ್ದು 25,000 ಮಕ್ಕಳನ್ನು ಆರೋಗ್ಯವಂತರಾಗಿ ಮಾಡಲು ಚಿಂತನೆಯನ್ನು ಮತ್ತು ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಹಲವಾರು ಯೋಜನೆಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಕಾಡಮಿ ಅಧ್ಯಕ್ಷರಾದ ಖ್ಯಾತ ಮಕ್ಕಳ ವೈದ್ಯರಾದ ಡಾ . ರಾಜನ್ ದೇಶಪಾಂಡೆ ತಿಳಿಸಿದರು.
ಅವರು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಸಮಾಜಮುಖಿ ಮಿತ್ರರ ಸಹಾಯದೊಂದಿಗೆ ಈ ಅಕಾಡೆಮಿಯನ್ನು ಸ್ಥಾಪಿಸಿ ಇದರ ಸಂಸ್ಥಾಪಕ , ಅಧ್ಯಕ್ಷರಾಗಿ ಮುನ್ನಡೆಸುತ್ತಿದ್ದೆನೆ. ಮಕ್ಕಳ ಅಕಾಡೆಮಿಯಲ್ಲಿ ಖ್ಯಾತ ಮಕ್ಕಳ ತಜ್ಞರು , ಮನೋವೈದ್ಯರು , ಶಿಕ್ಷಣ ತಜ್ಞರು , ಮಾನವ ಸಂಪನ್ಮೂಲ ಪರಿಣಿತರು . ಕಲಾಕಾರರು , ಸಾಹಿತಿಗಳು , ಲೇಖಕರು , ನಿವೃತ್ತ ಅಧಿಕಾರಿಗಳು ಸದಸ್ಯರಾಗಿರುತ್ತಾರೆ ಎಂದು ತಿಳಿಸಲು ಹೆಮ್ಮೆ ಎನಿಸುತ್ತದೆ ಎಂದರು.
ರಜತ ಮಹೋತ್ಸವದ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ . ವರ್ಷಪೂರ್ತಿ 25000 ವಿದ್ಯಾರ್ಥಿಗಳಿಗೆ ಆರೋಗ್ಯದಂತೆ ಶಿಬಿರ ಹಾಗೂ ಪೌಷ್ಟಿಕ ಆಹಾರದ ಬಗ್ಗೆ ತಿಳುವಳಿಕೆ ಹಾಗೂ ಚರ್ಚೆ . ಸಣ್ಣ ಮಕ್ಕಳಿಗಾಗಿ ಬರೆದ 25 ಕಿರುಪುಸ್ತಕಗಳು ಪುಕಟಿಸಲಾಗುವುದು . ಅಳ್ಳಾವರ ಸಮೀಪದ ಮಡಕಿಕೊಪ್ಪ ಹಿಂದುಳಿದ ಗ್ರಾಮವನ್ನು ದತ್ತಿ ತೆಗೆದುಕೊಳ್ಳುವುದು . ಗ್ರಾಮದ ಸರ್ವತೋಮುಖ ಬೆಳವಣಿಗೆಗೆ ಕಾರ್ಯಕ್ರಮಗಳನ್ನು ಸಂಘಟಿಸುವುದು ಎಂದರು.
25 ಅಸಾಮಾನ್ಯ ಸಾಧಕರನ್ನು ಸನ್ಮಾನಿಸಲಾಗುವುದು . ಮಕ್ಕಳಿಗೆ ಮಾನಸಿಕ ದೈಹಿಕ , ಸಮಗ್ರ ಬೆಳವಣಿಗೆಗೆ ಸಂಬಂಧಿಸಿದ 25 ಸಂಚಿಕೆಯ ಆಕಾಶವಾಣಿ ಕಾರ್ಯಕ್ರಮಗಳ ಪ್ರಸಾರ , ಮಕ್ಕಳಿಗಾಗಿ ಮತ್ತು ಪಾಲಕರಿಗಾಗಿ ಕ್ರಿಜ್ ಮತ್ತು ಸಾಮಾನ್ಯ ಜ್ಞಾನ ಕುರಿತು ಸ್ಪರ್ಧೆ ಏರ್ಪಡಿಸುವುದು ಎಂದರು.
ಶಾಲೆಗಳಲ್ಲಿ ಮಕ್ಕಳ ವೈದ್ಯರು ಕಾರ್ಯಕ್ರಮಗಳು , ಸ್ಮರಣ ಸಂಚಿಕೆ ಪ್ರಕಟಿಸುವುದು . ಮಕ್ಕಳಿಗಾಗಿ ಧಾರವಾಡ ಆದರ್ಶ ಸ್ಪರ್ಧೆ ಆಯೋಜನೆ , ಪರೀಕ್ಷಾ ಭಯ ನಿವಾರಣೆ ಶಾಲೆಗಳು ಮತ್ತು ಕಾಲೇಜುಗಳಿಗೆ ಕುರಿತು ಕಾರ್ಯಗಾರ , STEM ವಿಜ್ಞಾನ ಪ್ರದರ್ಶನ ಆಯೋಜಿಸುವದು ಸೇರಿದಂತೆ ಹಲವಾರು ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲಾಗುವದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿಯ ಎಮ್.ವಾಯ್.ಸಾವಂತ, ಡಾ.ಆನಂದ ಪಾಂಡುರಂಗಿ, ಸಿ.ಯು.ಬೆಳ್ಳಕ್ಕಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.