ನಿವೃತ್ತ ಯೋಧನಿಗೆ ತವರಿನಿಂದ ಅದ್ಧೂರಿ ಸ್ವಾಗತ
ಈ ದೇಶದಲ್ಲಿ ನಮ್ಮನ್ನು ರಕ್ಷಣೆ ಮಾಡುವವರು ರೈತ ಹಾಗೂ ಸೈನಿಕರು ಇಬ್ಬರು. ರೈತ ಅನ್ನ ಕೊಟ್ಟರೆ, ಸೈನಿಕ ನಮಗೆ ರಕ್ಷಣೆ ಕೊಡುತ್ತಾರೆ. ನಿವೃತ್ತ ಯೋಧರು
ನಮ್ಮೂರಿಗೆ, ನಮ್ಮ ನಾಡಿಗೆ , ನಮ್ಮ ಓಣಿಗೆ, ನಮ್ಮ ಮಹಿಳೆಯರ ರಕ್ಷಣೆ ಮಾಡಿದ ಹಬ್ಬದ ದಿನವಾಗಿ ಆಚರಣೆ ಮಾಡಲಾಗುತ್ತಿದೆ. ಈ ಸುಸಂದರ್ಭದಲ್ಲಿ ಸುಮಾರು 24 ವರ್ಷ 1 ತಿಂಗಳು ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಬಂದಿರುವ ವೀರ ಯೋಧನ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರುವುದು ನನಗೆ ತುಂಬ ಸಂತೋಷವಾಗುತ್ತದೆ ಎಂದು ಕವಿವಿ ನಿವೃತ್ತ ಸಿಂಡಿಕೇಟ್ ಸದಸ್ಯ ಕಲ್ಮೇಶ ಹಾವೇರಿ ಪೇಟೆ ಹೇಳಿದರು.
ಧಾರವಾಡದ ಮಟ್ಟಿ ಪ್ಲಾಟನಲ್ಲಿ,
ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಬಂದ ಸೈನಿಕ ರಮೇಶ.ಬಾಬು ಜಟ್ಟಿಂಗನವರ್ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತೊಟ್ಟಿಲು ತೂಗುವ ಕೈ ಈ ದೇಶಕ್ಕೆ ಮಾದರಿ ಆಗುತ್ತಾರೆ. ರಮೇಶ ಅವರ ಕಾರ್ಯ ಇನ್ನಷ್ಟು ದೇಶಕ್ಕೆ ಸಿಗಲಿ ಎಂದರು.
ಬೆಳಿಗ್ಗೆ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ರಮೇಶ.ಬಾಳಪ್ಪಾ ಜಟ್ಟಿಂಗನವರ ಅವರಿಗೆ, ಕುಟುಂಬಸ್ಥರು, ಹಾಗೂ ನಿವೃತ್ತ ಜಿಲ್ಲಾ ಸೈನಿಕರ ಸಂಘದವರು ಸನ್ಮಾನಿಸಿ ಗೌರವಸಿದರು.
ನಂತರ ಶಿವಾಜಿ ವೃತ್ತದಲ್ಲಿ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಿವೃತ್ತ ಸೈನಿಕ ತಂದೆ ಬಾಬು ಅವರಿಗೆ ಕಾಲಿಗೆ ನಮಸ್ಕರಿಸಿ ಆರ್ಶಿವಾದ ಪಡೆದರು.
ಇದೇ ಸಂದರ್ಭದಲ್ಲಿ ತೆರೆದ ಜೀಪನಲ್ಲಿ ಅದ್ದೂರಿಯಾಗಿ ನಿವೃತ್ತ ಸೈನಿಕ ರಮೇಶ ಅವರ ಕುಟುಂಬಸ್ಥರನ್ನು ಮೆರವಣಿಗೆ ಮೂಲಕ ಮನೆಗೆ ಕರೆತರಲಾಯಿತು.
ಮನೆ ಮುಂದೆ ಆಯೋಜನೆ ಮಾಡಿದ್ದ ಕಾರ್ಯಕ್ರಮ, ರಾಷ್ಟ್ರಗೀತೆ ಹಾಡುವ ಮೂಲಕ ಪ್ರಾರಂಭವಾಯಿತು. ಕಾರ್ಯಕ್ರಮದಲ್ಲಿ
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಸೈನಿಕ ರಮೇಶ ಜಂಟಿಗನ್ನವರ್, ದೇಶ ಸೇವೆ ಮಾಡಿ ಬಂದಿರುವ ನನಗೆ ಅದ್ಧೂರಿಯಾಗಿ ತವರು
ನೆಲದಲ್ಲಿ ಸ್ವಾಗತ ಕೊಡಲಾಗಿದೆ.
ನಾನು ನೀಜಕ್ಕೂ ಚಿರ ಋಣಿಯಾಗಿರುವೆ.
ನಮ್ಮ ಇಬ್ಬರು ಮಕ್ಕಳನ್ನು ಸೈನಕ್ಕೆ ಕಳುಹಿಸುವ ಕೆಲಸವನ್ನು ನಾನು ಮಾಡುತ್ತೇನೆ. ಯುವಜನತೆ ಮಾದಕ ವಸ್ತುಗಳಿಂದ ದುಶ್ಚಟಗಳಿಂದ ದೂರ ಇರುವಂತೆ ಜಾಗೃತಿ ಮೂಡಿಸಿ ದೇಶ ಸೇವಕ್ಕೆ ಅಣಿಯಾಗುವಂತೆ ನೋಡಿಕೊಳ್ಳುವೆ ಎಂದರು.
ಈ ಸಂದರ್ಭದಲ್ಲಿ
ಧಾರವಾಡದ ಮಟ್ಟಿ ಪ್ಲಾಟ್ ನಿವಾಸಿಗಳು, ಧಾರವಾಡ ಜಿಲ್ಲಾ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು , ಬೆಳಗಾವಿ ಜಿಲ್ಲಾ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು
ಉಪಸ್ಥಿತರಿದ್ದರು.