ನಮ್ಮ ರಾಜ್ಯದಿಂದಲೇ ಅತೀ ಹೆಚ್ಚು ಉದ್ಯೋಗ ಸೃಷ್ಟಿ ಆಗುತ್ತಿದೆ. ಅದಕ್ಕಾಗಿ ಕೇಂದ್ರದಿಂದ ಯಾವುದೇ ಸಹಕಾರ ಸಿಗುತ್ತಿಲ್ಲಾ.
ಬಜೆಟ್ ಕೆವಲ ರೈಲು ಬಿಡುವ ಪ್ರಚಾರ ಪಡೆಯುವ ತಂತ್ರದ ಬಜೆಟ್ ಆಗಿದೆ. ಇದರ ಮೇಲೆ ನನಗೆ ಯಾವುದೇ ನಿರೀಕ್ಷೆ ಇಲ್ಲಾ.
ಹಲವಾರು ವರ್ಷದಿಂದ ಕೇಂದ್ರದ ಬಜೆಟಗಳನ್ನು ನೋಡಿಕೊಂಡು ಬಂದಿದ್ದೇನೆ.
ದೇಶದಲ್ಲಿಯೇ ನಮ್ಮ ರಾಜ್ಯದಿಂದ ಅತಿ ಹೆಚ್ಚು ತೆರಿಗೆ ಸಂದಾಯ ಮಾಡುವ ನಮ್ಮ ಕರ್ನಾಟಕ ಮಂಚೂಣಿಯಲ್ಲಿದೆ.
ನಾವು ಕಳೆದ ಬಾರಿ ಕೇಳಿದ
ಅನುದಾನ ಇದುವರೆಗೂ ಬಂದಿಲ್ಲ.
ನಾವು ನಮ್ಮ ಹಕ್ಕಿಗಾಗಿ ಪ್ರತಿಭಟನೆ ಮಾಡಿದ್ದೇವೆ. ಆದರೂ ಕೂಡ ಕೇಂದ್ರದವರು ಕೊಡಲ್ಲ ಅಂದ್ರೆ ನಮಗೆ ಉಪಕಾರ ಮಾಡ್ತಾ ಇದ್ದಾರಾ ಎನ್ನುವುದು ಕೇಳಬೇಕಾಗಿದೆ.
ಬಜೆಟ ಘೋಷಣೆ ನೋಡಿದ್ರೆ,
ಮಧ್ಯಮ ವರ್ಗದ ಜನರಿಗೆ ಮೂಗಿಗೆ ತುಪ್ಪ ವರೆಸೋ ಕೆಲಸ ಮಾತ್ರ ಇಲ್ಲಿ ಆಗಿದೆ.
ಮೋದಿಯವರ ಮಾಸ್ಟರ್ ಸ್ಟ್ರೋಕ್ ನಿಂದ ನಿರುದ್ಯೋಗ ತಾಂಡವ ಆಡ್ತಾ ಇದೆ. ಮಧ್ಯಮ ವರ್ಗ ಇಂದು ಏನಾಗಿದೆ ಎಲ್ಲರಿಗೂ ಗೊತ್ತಿದೆ.
ಕರ್ನಾಟಕದಲ್ಲಿ
ನಾವು 100 ರೂಪಾಯಿ ಟ್ಯಾಕ್ಸ್ ಕಟ್ಟಿದ್ರೆ 12 ರೂಪಾಯಿ ಕೊಡುಟ್ಟಿದ್ದು ಆದರೆ ಯುಪಿ ಅವರಿಗೆ ಮಾತ್ರ 120, ಬಿಹಾರ 178 ರೂಪಾಯಿ ಹೋಗ್ತಾ ಇದೆ. ಇಡೀ ಭಾರತ ದೇಶವನ್ನು ನಾವು ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಿದ್ದೇವೆ ಎನ್ನುತ್ತಲೆ ದೇಶದ ಜನತೆಯ ಅದರಲ್ಲೂ ಕರ್ನಾಟಕದ ಜನರ ಕಿವಿಗೆ ಹೂ ಇಡುವುದೇ ಇವರ ಕೆಲಸವಾಗಿದೆ. ಆದ್ದರಿಂದ ಈ ಬಜೆಟ ನಿರಾಶಾದಾಯಕ ಬಜೆಟ್ ಆಗಿದೆ.
ವಿನಯ ಕುಲಕರ್ಣಿ
(ಮಾಜಿ ಸಚಿವ, ಶಾಸಕ ಹಾಗೂ ನಿಗಮ ಮಂಡಳಿ ಅಧ್ಯಕ್ಷರು, ಕೆಪಿಸಿಸಿ ಕಾರ್ಯಾಧ್ಯಕ್ಷರು)