ಖಾಸಗಿ ಶಾಲೆಗಳನ್ನು ನಾಚಿಸುವಂತಹ ಸರಕಾರಿ ಶಾಲೆ
ಧಾರವಾಡ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುರಕಟ್ಟಿಯಲ್ಲಿ ಶಾಲಾ ವಾರ್ಷಿಕೋತ್ಸವ ಅದ್ದೂರಿಯಾಗಿ ಜರುಗಿತು ಕ್ಷೇತ್ರ ಸಮನ್ವಾಯಾಧಿಕಾರಿಗಳಾದ ಕುಮಾರ ಕೆ ಎಫ್ ಸರ ರವರು ಮಾತನಾಡುತ್ತಾ ಖಾಸಗಿ ಶಾಲೆಗಳಿಗೆ ಏನು ಕಡಿಮೆ ಇಲ್ಲ ಈ ಸರಕಾರಿ ಶಾಲೆ ಹಬ್ಬದೋಪಾದಿಯಲ್ಲಿ ಈ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ ಸುಮಾರು 57 ನೃತ್ಯ 3 ನಾಟಕಗಳು ನನ್ನನ್ನು ಹುಬ್ಬೇರುವಂತೆ ಮಾಡಿಸಿತು ಮಕ್ಕಳ ಉತ್ಸಾಹ ಶಿಕ್ಷಕರ ಹುಮಸ್ಸು ಊರಿನವರ ಪ್ರೋತ್ಸಾಹ ನೋಡಲು ಎರಡು ಕಣ್ಣುಗಳು ಸಾಲುತ್ತಿರಲಿಲ್ಲ ಎಂದು ಕಾರ್ಯಕ್ರಮದ ಕುರಿತು ಮಾತನಾಡಿದರು ಈ ಒಂದು ಸಂದರ್ಭದಲ್ಲಿ ಅಧ್ಯಕ್ಷರಾದ ರಾಘವೇಂದ್ರ ಪರಸಪ್ಪನವರ ಸರಕಾರಿ ಶಾಲೆಗಳ ಸಬಲತೆಗಾಗಿ ಹಾಗೂ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಇಂತಹ ವೇದಿಕೆಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ ಇವರನ್ನು ಅಣಿಗೊಳಿಸಿದ ಶಿಕ್ಷಕರಿಗೆ ಧನ್ಯವಾದಗಳನ್ನು ಸಲ್ಲಿಸಿದರು ಕಾರ್ಯಕ್ರಮದಲ್ಲಿ ಊರಿನ ಗುರು ಹಿರಿಯರು ಚುನಾಯಿತ ಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿ ಎಲ್ ಆಯ ಲಕ್ಕಮ್ಮನವರ ಹಾಗೂ ಎಸ್ ಬಿ ಕೇಸರಿಯವರು ಪಾಲ್ಗೊಂಡಿದರು ಪ್ರಭಾರಿ ಪ್ರಧಾನ ಗುರುಗಳಾದ ಸೈಯದ ಕುಪ್ಪೇಲೂರ ಸ್ವಾಗತಿಸಿದರು ಹಾಗೂ ವೆಂಕಟಾಚಲ ಬಿ ಕೆ ವಂದಿಸಿದರು.