ವಿಶ್ವವಾಣಿ ಪತ್ರಿಕೆ ಕೊಡಮಾಡುವ ಗ್ಲೋಬಲ್ ಅಚಿವರ್ಸ ಅವಾರ್ಡಗೆ
ಧಾರವಾಡ ಜಿಲ್ಲೆಯ ಹಿರಿಯ ವಕೀಲೆ ಶ್ರೀಮತಿ ಪೂಜಾ ಸವದತ್ತಿ ಆಯ್ಕೆ
ಹುಬ್ಬಳ್ಳಿ
ವಿಭಿನ್ನ ಕೆಲಸಗಳ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿರುವ ಹಲವಾರು ನಾಡಿನ ಸಾಧಕರನ್ನು ಗುರುತಿಸಿ, ಪ್ರೋತ್ಸಾಹಿಸಿ, ರಾಷ್ಟ್ರಮಟ್ಟದಲ್ಲಿ ಅವರು ಮಾಡುತ್ತಿರುವ ಕೆಲಸವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿರುವ ವಿಶ್ವವಾಣಿ ಪತ್ರಿಕೆಯ, ಗ್ಲೋಬಲ್ ಅಚಿವರ್ಸ ಅವಾರ್ಡಗೆ ಈ
ಬಾರಿ ಧಾರವಾಡ ಜಿಲ್ಲೆಯ ಹಿರಿಯ ಹೈಕೋರ್ಟ ಲಾಯರ್ ಶ್ರೀಮತಿ ಪೂಜಾ ಸವದತ್ತಿ ಆಯ್ಕೆಯಾಗಿದ್ದಾರೆ.
ಬೆಂಗಳೂರು ಹೈಕೋರ್ಟ, ಧಾರವಾಡ ಹೈಕೋರ್ಟನಲ್ಲಿ ಕಳೆದ 10 ವರ್ಷದಿಂದ ವಕೀಲಕೆ ವೃತ್ತಿಯಲ್ಲಿ ಇದ್ದು, ನೊಂದವರ ಬಾಳಿನಲ್ಲಿ ಹೊಸ ಆಶಾಕಿರಣವಾಗಿ, ನ್ಯಾಯ ಕೊಡಿಸುವ ಕೆಲಸವನ್ನು ಮಾಡಿದ್ದಾರೆ. ಧಾರವಾಡ ಹೈಕೋರ್ಟನ ಮಹಿಳಾ ವಕೀಲರ ಬಾರ್ ಅಸೋಸಿಯೇಶನ್ ಪ್ರತಿನಿಧಿಯಾಗಿ, ಬಿಜೆಪಿ ರಾಜ್ಯ ಘಟಕದ ಕಾನೂನು ವಿಭಾಗದ ವಕೀಲೆಯಾಗಿ, ಹಾಗೂ ಬಿಜೆಪಿ ವಕ್ತಾರರಾಗಿ ಕೆಲಸ ಮಾಡುತ್ತಿದ್ದಾರೆ. ಹಿಂದೂ ಲಿಂಗಾಯತ್ ಪಂಚಮಸಾಲಿ ಪಂಚಸೇನಾ ಕಿತ್ತೂರು ಕರ್ನಾಟಕ ವಿಭಾಗದ ಮಹಿಳಾ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. 5 ವರ್ಷಗಳ ಕಾಲ ಉಪನ್ಯಾಸಕಿಯಾಗಿ ಸೇವೆ ಮಾಡಿದ್ದಾರೆ ಪೂಜಾ
ಸವದತ್ತಿ .
ಸಮಾಜದಲ್ಲಿರುವ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಉದ್ಯೋಗಕ್ಕಾಗಿ, ತಳಮಟ್ಟದಿಂದ ರಾಜ್ಯಮಟ್ಟದವರೆಗೂ ಅವರನ್ನು ಗುರುತಿಸಿ ಬೆಳೆಸುವ ಕೆಲಸವನ್ನು ಪೂಜಾ ಸವದತ್ತಿ ಅವರು ಮಾಡಿ ತೋರಿಸಿದ್ದಾರೆ. ಇಂತಹ ಹಲವಾರು ಸಾಧನೆ ಮಾಡಿದ ಸಾಧಕಿಗೆ ಓಮನ್ ದೇಶದ ಮಸ್ಕತ್ನಲ್ಲಿ ನಡೆಯುತ್ತಿರುವ ವಿಶ್ವವಾಣಿ ಪತ್ರಿಕೆ ಗ್ಲೋಬಲ್ ಅಚಿವರ್ಸ ಅವಾರ್ಡಗೆ ಪ್ರದಾನ ಮಾಡುತ್ತಿದೆ.
ಇವರ ತಂದೆ ರಾಜಶೇಖರ ಸವದತ್ತಿ ಅವರು ಹಿರಿಯ ವಕೀಲರಾಗಿದ್ದು, ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ಆರಎಸ್ಎಸ್ ಗರಡಿಯಲ್ಲಿ ಬೆಳೆದವರು. ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಹಾಗೂ ಸುಶ್ಮಾಸ್ವರಾಜ ಮತ್ತು ಉಮಾ ಭಾರತಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದವರಾಗಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ,ನಡ್ಡಾ, ಮೂಡಾ ಭ್ರಷ್ಟಾಚಾರದ ಪ್ರಕರಣದಲ್ಲಿ ಕಾನೂನು ಸಲಹೆಗಾರರಾಗಿ, ಪಂಚಮಸಾಲಿ ಹೋರಾಟಗಾರರ ಕೇಸ್, ಪೂಜಾ ಅವರು ಹೈಕೋರ್ಟನಲ್ಲಿ ನಡೆಸುತ್ತಿರುವ ಪ್ರಮುಖ ಕೇಸಗಳು ಆಗಿವೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮುಂದೆ ಪಂಚಮಸಾಲಿ ಹೋರಾಟಗಾರ ಮೇಲೆ ಲಾಠಿ ಚಾರ್ಜ ಕೇಸಗಳನ್ನು ಪೂಜಾ ಅವರು ವಕಾಲತ್ತು ವಹಿಸಿಕೊಂಡಿದ್ದಾರೆ.
ವಿಶ್ವವಾಣಿ ಪತ್ರಿಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ನನ್ನ ಸಾಧನೆಯನ್ನು ಗುರುತಿಸಿ, ಪ್ರಶಸ್ತಿ ಕೊಡುತ್ತಿರುವುದು ನೀಜಕ್ಕೂ ಹೆಮ್ಮೆ ಎನಿಸುತ್ತಿದೆ. ಈ ಪ್ರಶಸ್ತಿ, ನಾನು ಇನ್ನಷ್ಟು ಸಮಾಜದಲ್ಲಿ ನೊಂದವರ ಪರವಾಗಿ ಕೆಲಸ ಮಾಡಲು ಪ್ರೋತ್ಸಾಹ ನೀಡುತ್ತಿದೆ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ ಪೂಜಾ ಸವದತ್ತಿ ಅವರು.