ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಘೋಷಣೆಯಾದ ಹಿನ್ನೆಲೆಯಲ್ಲಿ, ಧಾರವಾಡ ಜನತೆಯ ದಿಕ್ಕು ತಪ್ಪಿಸುತ್ತಿರುವ ಬಿಜೆಪಿ ನಡೆ ಖಂಡನೀಯ .
ಧಾರವಾಡ 08 :
ಬಿಜೆಪಿ ಜನಪ್ರತಿನಿದಿಗಳ ಇಚ್ಚಾಶಕ್ತಿ ಕೊರತೆಯ ಕಾರಣದಿಂದ ಮರೀಚಿಕೆಯಾಗಿಯೇ ಉಳಿದಿದ್ದ ಧಾರವಾಡ ಪ್ರತ್ಯೇಕ ಪಾಲಿಕೆಯ ಘೋಷನೆಯಾಗಲು ಶಾಸಕ ವಿನಯ ಕುಲಕರ್ಣಿಯವರ ಛಲಬಿಡದ ಪ್ರಯತ್ನ ಹಾಗೂ ಉಸ್ತುವಾರಿ ಸಚಿವರಾದ ಸಂತೋಷ ಲಾಡ್, ಶಾಸಕ ಪ್ರಸಾದ ಅಬ್ಬಯ್ಯ, ಹಾಗೂ ಶಾಸಕ ಎನ್ ಎಚ್ ಕೊಣರಡ್ಡಿಯವರ ಸಹಕಾರದಿಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ರವರು ಧಾರವಾಡದ ಜನತೆಯ ಬೇಡಿಕೆಯನ್ನು ಈಡೇರಿಸಿದ್ದು ಶ್ಲಾಘನೀಯ. ಎಂದು ಅರವಿಂದ ಎಗನಗೌಡರ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ಆದರೆ ಕೇಂದ್ರ ಸಚಿವರಾದ ಪ್ರಲ್ಲಾದ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದವರು ಧಾರವಾಡ ಜನತೆಯ ದಿಕ್ಕು ತಪ್ಪಿಸುವ ಸಲುವಾಗಿ ಬ್ಯಾನರಗಳನ್ನು ಅಳವಡಿಸಿಕೊಂಡಿದ್ದು ನೋಡಿದರೆ, ಧಾರವಾಡದ ಜನತೆ ಮುಸಿ ಮುಸಿ ನಗುತ್ತಿದ್ದಾರೆ. ತಮ್ಮ ಸರಕಾರ ಇದ್ದಾಗ ಮಾಡದವರು, ಕಾಂಗ್ರೆಸ್ ಸರಕಾರದ ಆದೇಶವನ್ನು ನಾವು ಮಾಡಿದ್ದೇವೆ ಎಂದು ತಮ್ಮ ಬೆನ್ನು ತಾವೇ ಚಪ್ಪರಿಸಿಕೊಳ್ಳುತ್ತಿರುವದನ್ನು ನೋಡಿದರೆ ಪಾಪ ಎನಿಸುತ್ತಿದೆ ಎಂದರು.
ಈ ಹಿಂದೆ ಡಬ್ಬಲ್ ಎಂಜಿನ ಸರಕಾರ ಎಂದು ಬೊಬ್ಬೆ ಹೊಡೆಯುತ್ತಿದ್ದ ಇವರು, ಪ್ರತ್ಯೇಕ ಪಾಲಿಕೆ ಹೋರಾಟಗಾರರು ಅವರ ಹತ್ತಿರ ಹೋದಾಗ ಸೌಜನ್ಯಕ್ಕು ಪ್ರೇಯತ್ನಿಸದೆ ಹಾರಿಕೆ ಉತ್ತರ ನೀಡಿದ್ದು ಧಾರವಾಡ ಜನತೆ ಮರೆತಿಲ್ಲ. ಕೊಟ್ಟ ಕುದುರೆ ಏರದವರು ವೀರರು ಅಲ್ಲಾ ಶೂರರು ಅಲ್ಲ ಎಂದು ಇಂತವರನ್ನು ನೋಡಿಯೇ ಹಿಂದಿನ ಹಿರಿಯರು ಹೇಳಿರಬೇಕು.ಆವರಿಗೇನಾದರೂ ನೈತಿಕತೆ ಇದ್ದರೆ ಕೂಡಲೇ ತಮ್ಮ ಪ್ಲೇಕ್ಸಗಳನ್ನು ಕೆಳಗಿಳಿಸಿ ಸರಕಾರಕ್ಕೆ ಅಭಿನಂದನೆ ಸಲ್ಲಿಸಲಿ, ಧಾರವಾಡದ ಜನತೆಯನ್ನು ಹಗುರವಾಗಿ ತಿಳಿಯಬೇಡಿ ನಿಮ್ಮ ಎಲ್ಲಾ ಆಟಗಳು, ಸುಳ್ಳುಗಳು ಅವರಿಗೆ ಗೊತ್ತು.ಶಾಸಕರಾದ ವಿನಯ ಕುಲಕರ್ಣಿಯವರ ಪ್ರಯತ್ನದ ಫಲ ಈ ಧಾರವಾಡ ಮಹಾನಗರ ಪಾಲಿಕೆ, ಎಂದು ಧಾರವಾಡ ಜನತೆಗೆ ಚೆನ್ನಾಗಿ ಗೊತ್ತು, ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ ವೇದಿಕೆಯ ಸದಸ್ಯರೊಡಗೂಡಿ,ಪಾಲಿಕೆಯ ಘೋಷಣೆಗೆ ಬೇಕಾಗುವ, ಜನಸಂಖ್ಯೆ, ಟ್ಯಾಕ್ಸ್, ಹಾಗೂ ವಿಸ್ತೀರ್ಣದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು, ಆಯುಕ್ತರು ಹಾಗೂ ಮಹಾನಗರ ಪಾಲಿಕೆ ಸದಸ್ಯರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಅಧಿಕಾರಿಗಳಿಂದ ರಿಪೋರ್ಟ್ ತಯಾರಿಸಿ ಸರಕಾರಕ್ಕೆ ಸಲ್ಲಿಸುವ ವ್ಯವಸ್ಥೆ ಮಾಡಿಸಿ, ನಗರಾಭಿವೃದ್ಧಿ ಸಚಿವರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಇವರುಗಳಿಗೆ, ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಯಾಗುವುದರಿಂದ, ಧಾರವಾಡ ಸಮಗ್ರ ಅಭಿವೃದ್ಧಿಗೆ ಯಾವ ರೀತಿ ಸಹಾಯವಾಗುವದು ಎಂಬುದನ್ನು ಮನದಟ್ಟು ಮಾಡಿಸಿ, ಆದೇಶ ಮಾಡಿಸುವಲ್ಲಿ ಶಾಸಕ ವಿನಯ ಕುಲಕರ್ಣಿ ಪ್ರಯತ್ನ ಬಹು ದೊಡ್ಡದು.
ಧಾರವಾಡ ಪ್ರತ್ಯೇಕ ಪಾಲಿಕೆ ರಚನೆಯಾಗಲು, ಹೋರಾಟ ಮಾಡಿದ ಎಲ್ಲಾ ಹೋರಾಟಗಾರರಿಗೂ, ರಾಜ್ಯ ಕಾಂಗ್ರೆಸ್ ಸರಕಾರಕ್ಕೂ ಧಾರವಾಡ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆಯ ಸದಸ್ಯ ರಾಜು ಕಮತಿ ,ಕವಿತಾ ಕಭ್ಭೇರ,ಸೂರವ್ವಾ ಪಾಟೀಲ,ವೀರೇಶ ಶಟ್ಟರ ಇದ್ದರು.