DHARWAD:ಹಂಡೆಸಿರಿ ರಾಷ್ಟ್ರೀಯ ಪ್ರಶಸ್ತಿಗೆ- ಎಂ. ಎಸ್‌. ಚೌಧರಿ ಭಾಜನ.

ಹಂಡೆಸಿರಿ ರಾಷ್ಟ್ರೀಯ ಪ್ರಶಸ್ತಿಗೆ- ಎಂ. ಎಸ್‌. ಚೌಧರಿ ಭಾಜನ.
ಧಾರವಾಡ 30 :
ಧಾರವಾಡದ ಹಿರಿಯ ಸಾಹಿತಿ ಸಂಶೋಧಕ, ವಚನ ಸಾಹಿತ್ಯ ಚಿಂತಕ,  ಎಂ. ಎಸ್. ಚೌಧರಿಯವರಿಗೆ ಕಲಬುರ್ಗಿಯ ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠದಿಂದ ಅವರ ಜೀವಮಾನದ ಸಾಹಿತ್ಯ ಇತಿಹಾಸ, ಸಂಶೋಧನೆಯ ಸೇವೆಯನ್ನು ಗುರುತಿಸಿ 2025 ನೇ ಸಾಲಿನ ಪ್ರತಿಷ್ಟಿತ ರಾಷ್ಟ್ರೀಯ ಹಂಡೆಸಿರಿ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಇವರು 25 ಕ್ಕೂ ಹೆಚ್ಚು
 ಗ್ರಂಥಗಳನ್ನು ರಚಿಸಿದ್ದಾರೆ. ಫೇ 02  ರಂದು ಚಾಲುಕ್ಯ ಸಾಂಸ್ಕೃತಿ ಅಧ್ಯಯನ ಪೀಠದ ಬೃಹತ್ ಸಮಾವೇಶ ಕೂಡಲಸಂಗಮದಲ್ಲಿ ನಡೆಯುತ್ತಿದ್ದು ಆ ಸಂದರ್ಭದಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿಯು ರೂ. 25000/- ಗಳ ನಗದು, ಪ್ರಶಸ್ತಿ ಫಲಕವನ್ನು ಹೊಂದಿದೆ ಎಂದು ಪ್ರತಿಷ್ಠಾನದ ನಿರ್ದೇಶಕರಾದ ಪ್ರೊ. ಎಸ್‌. ಸಿ. ಪಾಟೀಲ್‌ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.ಎಂ. ಎಸ್. ಚೌಧರಿ ಗೋಷ್ಠಿಯಲ್ಲಿ ಇದ್ದರು.
ನವೀನ ಹಳೆಯದು

نموذج الاتصال