ಮುರುಘೇಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ,
ಧಾರವಾಡ- ಶ್ರೀ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳ ೯೫ ನೇ ಜಾತ್ರಾ ಮಹೋತ್ಸವ, ಶ್ರೀ ಮೃತ್ಯುಂಜಯ ಮಹಾಂತ ಪ್ರಶಸ್ತಿ ಪ್ರಧಾನ, ಶಿವಾನುಭ ಚಿಂತನ, ವಚನ ನೃತ್ಯ ಹಾಗೂ ಗಾಯನವು ಜ.೩೦ ರಿಂದ ಫೆ.೦೩ ರವರೆಗೆ ಶ್ರೀ ಮುರಘಾಮಠದಲ್ಲಿ ಜರುಗಲಿವೆ ಎಂದು ಮುರಘಮಠದ ಶ್ರೀ ಡಾ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ.. ಬಸವ” ಮಾರ್ಗದಲ್ಲಿಯೇ ನಡೆದು, “ಬಸವ” ಮಾರ್ಗದಲ್ಲಿಯೇ ದುಡಿದು, ಬಸವಾದರ್ಶದ ಪರಿಭಾಷೆಯಲ್ಲಿಯೇ ಸತ್ವಪೂರ್ಣ ಬದುಕು ಸವೆಸಿದ ಪೂಜ್ಯ ಲಿಂ. ಅಥಣಿ ಮುರುಘೇಂದ್ರ ಮಹಾಶಿವಯೋಗೀಶ್ವರರ ಜಾತ್ರೆ ಮುರುಘಾಮಠದ ಅತೀ ಮುಖ್ಯ ವಾರ್ಷಿಕ ಸಮಾರಂಭ. ಇದನ್ನು ಪ್ರತಿವರ್ಷ ಅತ್ಯಂತ ವೈಭವದಿಂದ ನಡೆಸುತ್ತ ಬಂದಿದೆ. ಜ.೩೦ ರ ಬೆಳಗ್ಗೆ ೯ ಕ್ಕೆ ಪ್ರಬುಸ್ವಾಮಿ ಮಠದ ಶ್ರೀ ಗುರುಸಿದ್ದ ಸ್ವಾಮಿಜಿ ನೇತೃತ್ವದಲ್ಲಿ ಷಟಸ್ಥಲ ಧ್ವಜಾರೋಹಣ ನೆರವೇರಲಿದ್ದು ಪಾಲಿಕೆ ಸದಸ್ಯ ರಾಜಶೇಖರ ಕಮತಿ, ನಿತೀನ ಇಂಡಿ, ಕೆ.ಎಂ.ಎಫ್ ಅಧ್ಯಕ್ಷ ಶಂಕರ ಮುಗದ. ಸಿ.ಕೆ.ಹರಕಲ್ ಅತಿಥಿಯಾಗಿ ಪಾಲ್ಗೊಳ್ಳುವರು ಎಂದರು.
ಸಂಜೆ ೭ ಕ್ಕೆ ಜಾತ್ರಾ ಮಹೋತ್ಸವ ಉದ್ಘಾಟನೆಯಲ್ಲಿ ಮೂರಸಾವಿಮಠದ ಶ್ರೀ ಗುರುಸಿದ್ದ ರಾಜಯೋಗೀಂದ್ರ ಸ್ವಾಮಿಜಿ ಸಾನಿಧ್ಯವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಜಾತ್ರಾ ಮಹೋತ್ಸವ ಸಮಾರಂಭ ಉದ್ಘಾಟಿಸುವರು. ಗುಳೇದಗುಡ್ಡ ಬೃಹನ್ಮಠದ ಶ್ರೀ ಗುರುಸಿದ್ದ ಪಟ್ಟದರ‍್ಯ ಸ್ವಾಮಿಜಿಗೆ ಗುರುವಂದನಾ ಕಾರ್ಯಕ್ರಮ ಜರುಗಲಿದೆ. ವೈಶುದೀಪ ಫೌಂಡೇಶನ್ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಅಧ್ಯಕ್ಷತೆವಹಿಸಲಿದ್ದು ಸಭಾಪತಿ ಬಸವರಾಜ ಹೊರಟ್ಟಿ, ಉದ್ಯಮಿ ವಿಜಯ ಸಂಕೇಶ್ವರ, ಶಾಸಕ ಎನ್.ಎಚ್.ಕೋನರಡ್ಡಿ, ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಅತಿಥಿಯಾಗಿ ಭಾಗವಹಿಸುವರು ಎಂದರು.
೩೧ ರ ಸಂಜೆ ೬ ಕ್ಕೆ ಶಿವಾನುಭವ ಚಿಂಥನ-೧ ಸಾನಿಧ್ಯವನ್ನು ಶ್ರೀ ಫಕೀರೇಶ್ವರ ಮಠದ ಫಕೀರಸಿದ್ದರಾಮ ಸ್ವಾಮಿಜಿ ವಹಿಸಲಿದ್ದು ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಜಿ ಅಧ್ಯಕ್ಷತೆವಹಿಸುವರು. ಶ್ರೀ ಪ್ರಭುಚನ್ನಬಸವ ಸ್ವಾಮಿಜಿ ಉಪನ್ಯಾಸ ನೀಡುವರು, ಶಾಸಕರಾದ ಜಗದೀಶ ಗುಡಗುಂಟಿಮಠ, ಎಂ.ಆರ್.ಪಾಟೀಲ, ಪ್ರಸಾದ ಅಬ್ಬಯ್ಯ, ಜಿಲ್ಲಾಧಿಕಾರಿ ದಿವ್ಯಪ್ರಭು, ಶಿಕ್ಷಣ ಇಲಾಖೆ ಆಯುಕ್ತ ಜಯಶ್ರೀ ಸಿಂತ್ರಿ, ಶಂಕರಣ್ಣ ಮುನವಳ್ಳಿ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಪತ್ರಕರ್ತರಾದ ನಿಜಗುಣಿ ದಿಂಡಲಕೊಪ್ಪ, ಮಂಜುನಾಥ ಅಂಗಡಿ ಅವರನ್ನು ಸನ್ಮಾನಿಸಲಾಗುವದು ಎಂದು ತಿಳಿಸಿದರು.
ಫೆ.೦೧ ಸಂಜೆ ೦೭ ಕ್ಕೆ ಅಖಿಲ ಭಾರತ ಶಿವಾನುಭವ ಸಂಸ್ಥೆಯ ೮೩ ನೇ ಸಮ್ಮೇಳನದಲ್ಲಿ ನಿಡಸೂಸಿ ಮಠದ ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮಿಜಿ ಸಾನಿಧ್ಯದಲ್ಲಿ ಮಹಾಂತ ಸಿದ್ದೇಶ್ವರ ಸ್ವಾಮಿಜಿ ಅವರಿಗೆ ಗುರುವಂದನೆ ನಡೆಯಲಿದೆ. ಬಾಬು ಮಹಾರಾಜರು ಉಪನ್ಯಾಸ ನೀಡಲಿದ್ದು ಸಂಸದ ಜಗದೀಶ ಶೆಟ್ಟರ, ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ನಾಗರಾಜ ಗೌರಿ, ಸವಿತಾ ಅಮರಶೆಟ್ಟಿ ಅತಿಥಿಯಾಗಿ ಪಾಲ್ಗೊಳ್ಳುವರು. ಪತ್ರಕರ್ತರಾದ ಮಹಾಂತೇಶ ಕಣವಿ, ರವೀಶ ಪವಾರ ಅವರನ್ನು ಸನ್ಮಾನಿಸಲಾಗುವುದು. ಎಂದು ಹೇಳಿದರು
೦೨ ರ ಸಂಜೆ ೭ ಕ್ಕೆ ಇಂಗಳೇಶ್ವರ ಮಠದ ಶ್ರೀ ಚನ್ನಬಸವ ಸ್ವಾಮಿಜಿ ಅವರಿಗೆ 25 ಸಾವಿರ ನಗದು ಹಾಗೂ ಒಂದು ತೊಲೆ ಚಿನ್ನದ ಪದಕದೊಂದಿಗೆ ಶ್ರೀ ಮೃತ್ಯುಂಜಯ-ಮಹಾAತ ಪ್ರಶಸ್ತಿ ಪ್ರಧಾನ ಮಾಡಲಿದೆ. ಡಾ.ಶ್ರೀ ತೋಂಟದ ಸಿದ್ದರಾಮ ಸ್ವಾಮಿಜಿ ಸಾನಿಧ್ಯವಹಿಸಲಿದ್ದು ಶ್ರೀ ಗುರುಮಹಾಂತ ಸ್ವಾಮಿಜಿ, ಡಾ.ಮಹಾಂತಪ್ರಭು ಸ್ವಾಮಿಜಿ ಸಮ್ಮುಖವಹಿಸುವರು. ಶಾಸಕ ವಿನಯ ಕುಲಕರ್ಣಿ ಅಧ್ಯಕ್ಷತೆವಹಿಸಲಿದ್ದು ಸಂಸದ ಬಸವರಾಜ ಬೊಮ್ಮಾಯಿ, ಶಾಸಕರಾದ ಅರವಿಂದ ಬೆಲ್ಲದ, ಮಾಜಿ ಶಾಸಕ ಮಹಾಂತೇಶ ಕವಟಗಿಮಠ ಅತಿಥಿಯಾಗಿ ಪಾಲ್ಗೊಳ್ಳುವರು. ಮಾದ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ರವಿಕುಮಾರ ಕಗ್ಗಣ್ಣವರ ಹಾಗೂ ಜರ್ನಲಿಸ್ಟ ಗಿಲ್ಡ ಅಧ್ಯಕ್ಷ ಡಾ.ಬಸವರಾಜ ಹೊಂಗಲ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಫೆ.೦೩ ರಂದು ಬೆಳಿಗ್ಗೆ ೦೪ ಗಂಟೆಗೆ ಲಿಂಗದೀಕ್ಷೆ ಕಾರ್ಯಕ್ರಮದಲ್ಲಿ ಶ್ರೀ ಅಭಿನವ ಶಾಂತಲಿAಗ ಶಿವಾಚಾರ್ಯ ಸ್ವಾಮಿಜಿ ನೇತೃತ್ವದಲ್ಲಿ ವಿವಿಧ ಮಠಾಧೀಶರು ಉಪಸ್ಥಿತರಿರುವರು. ಸಂಜೆ ೪ ಕ್ಕೆ ಶ್ರೀ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳವರ ರಥೋತ್ಸವವು ನಡೆಯಲಿದ್ದು ಚಂದ್ರಶೇಖರ ಶಿವಯೋಗಿ ರಾಜೇಂದ್ರ ಸ್ವಾಮಿಜಿ ಸಮ್ಮುಖದಲ್ಲಿ ನಾಡಿನ ವಿವಿಧ ಮಠಾಧೀಶರು ಸಮ್ಮುಖವಹಿಸುವರು. ಈ ಸಮಾರಂಭದಲ್ಲಿ ಶ್ರದ್ಧಾಭಕ್ತಿಯಿಂದ ಸಕಲ ಸದ್ಭಕ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದರು.
* ಡಾ.ಶ್ರೀ ಮಲ್ಲಿಕಾರ್ಜುನ ಸ್ವಾಮಿಜಿ, ಆಗ್ರಹ.
ಕೋಟ್ಯಾಂತರ ಜನರಿಗೆ ಶಿಕ್ಷಣ, ಸಂಸ್ಕಾರ, ಅನ್ನವನ್ನ ನೀಡಿ ತ್ರಿವಿಧ ದಾಸೋಹ ಕೊಡುಗೆ ನೀಡಿದ ಶ್ರೀ ಮೃತ್ಯುಂಜಯಪ್ಪಗಳ ಹೆಸರನ್ನು ಧಾರವಾಡ ರೇಲ್ವೇ ನಿಲ್ದಾಣಕ್ಕೆ ನೇಮಕ ಮಾಡಬೇಕು ಎಂದು ಕರ್ನಾಟಕ ಹಾಗೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಶತಮಾನೋತ್ಸವ ಆಚರಿಸಿಕೊಂಡಿರುವ ಶ್ರೀ ಮುರಘಾಮಠಕ್ಕೆ ನಿತ್ಯ ಸಾವಿರಾರು ಜನರು ದರ್ಶನ ಪಡೆಯುತ್ತಾರೆ. ಶ್ರೀ ಮೃತ್ಯುಂಜಯಪ್ಪಗಳು ಈ ನಾಡಿಗೆ ಕೊಟ್ಟ ಕೊಡುಗೆಯನ್ನು ಎಲ್ಲರೂ ಸ್ಮರಿಸುತ್ತಲೇ ಇದ್ದಾರೆ. ಅವರ ನೆನೆಪಿಗೊಂದು ಈ ಮಹತ್ಕಾರ್ಯ ಮಾಡಲು ಧಾರವಾಡ ಜನತೆ ಹಾಗೂ ಶ್ರೀ ಮಠದಲ್ಲಿ ಶಿಕ್ಷಣ ಪಡೆದ ಲಕ್ಷಾಂತರ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ. ಮುಂಬರುವ ದಿನದಲ್ಲಿ ಶ್ರೀ ಮಠದ ಭಕ್ತರ ಸಮಿತಿ ರಚಿಸಿ ಧಾರವಾಡ ರೇಲ್ವೇ ನಿಲ್ದಾಣಕ್ಕೆ ಶ್ರೀ ಮೃತ್ಯುಂಜಯಪ್ಪಗಳ ಹೆಸರ ನೇಮಕ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಲಿದೆ.
ಪತ್ರಿಕಾಗೋಷ್ಠಿಯಲ್ಲಿ. ಶ್ರೀ ಮಠದ ಆಡಳಿತ ಮಂಡಳಿಯ ಉಪಾಧ್ಯಕ್ಷ ನಾಗರಾಜ ಪಟ್ಟಣಶೆಟ್ಟಿ. ಕಾರ್ಯದರ್ಶಿ ಡಿ ಬಿ ಲಕಮನಹಳ್ಳಿ. ವಿ. ಎಸ್ ಕಟಗಿ. ಸಿ ಎಸ್ ಪಾಟೀಲ್. ಎಸ್ ಎಸ್ ಲಕ್ಷ್ಮಶ್ವರ. ಎಪ್ ಟಿ ಭಾವಿಕಟ್ಟಿ. ಶಿವಣ್ಣ ಹೊಸೂರ್ ಇದ್ದರು.