ವಿವಾದಾತ್ಮಕ ಅಂಶಗಳನ್ನು ಸೇರಿಸಿದ ಸಂಬಂಧಿತ ಅಧಿಕಾರಿಗಳನ್ನು ಅಮಾನತು ಮಾಡುವ ಕುರಿತು
ಧಾರವಾಡ 28 : ರಾಷ್ಟ್ರೀಯತೆಯ ಕುರಿತು ಹಗುರವಾದ ರೀತಿಯಲ್ಲಿ ರಚಿತವಾದ ಲೇಖನವನ್ನು ಕ ವಿ ವಿ ಯ ಬಿ ಎ ಪ್ರಥಮ ಸೆಮಿಸ್ಟರ್ ಪಠ್ಯ ಪುಸ್ತಕದಲ್ಲಿನ ವಿವಾದಾತ್ಮಕ ಅಂಶಗಳನ್ನು ಸೇರಿಸಿದ ಸಂಬಂಧಿತ ಅಧಿಕಾರಿಗಳನ್ನು ಅಮಾನತು ಮಾಡುವ ಬಗ್ಗೆ ಇಂದು ಡಾ ಮಂಜುನಾಥ ಹೂಂಗಲದ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು
ಇತ್ತೀಚೆಗೆ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಭಾಷೆಯ ಬೆಳಗು ಪಠ್ಯಪುಸ್ತಕದಲ್ಲಿ ಆಗಿರುವ ರಾಷ್ಟ್ರ ಹಾಗೂ ಸಂವಿಧಾನದ ಕುರಿತ ಅವಹೇಳನಕಾರಿ ಅಂಶಗಳನ್ನು ಕುರಿತಂತೆ ಈಗಾಗಲೇ ವಿಶ್ವವಿದ್ಯಾಲಯವು ಸದರಿ ಪಠ್ಯವನ್ನು ಹಿಂಪಡೆದಿದೆ. ಆದರೆ ಈ ಪ್ರಮಾದಕ್ಕೆ ಕಾರಣವಾದ BOSನ್ನು ಅಮಾನತುಗೊಳಿಸಿ ವಿಶ್ವವಿದ್ಯಾಲಯವು ಆದೇಶವನ್ನು Ref. No: ಕವಿವಿ/ಸಿಂಡಿಕೇಟ್/ಬಿಓಎಸ್/2024-25/ 2646(B) ಮುಖಾಂತರ ಜ 24 ರಂದು ಹೊರಡಿಸಿ ಅಪರಾಧಕ್ಕೆ ತೇಪೆ ಹಚ್ಚುವ ಕಾರ್ಯ ಮಾಡಿದೆ. ಈ ನಡೆಯು ಸದರಿ ಅಪರಾಧ ಕಾರ್ಯದಲ್ಲಿ ಮಾನ್ಯ ಕುಲಪತಿಗಳು ಹಾಗೂ ಕುಲಸಚಿವರ ಭಾಗವಹಿಸುವಿಕೆಯನ್ನು ಸಹ ಸೂಚಿಸುವಂತಿದೆ ಎಂದರು. ರಾಷ್ಟ್ರೀಯತೆಯ ಕುರಿತು ಹಗುರವಾದ ರೀತಿಯಲ್ಲಿ ರಚಿತವಾದ ಲೇಖನವನ್ನು ಪಠ್ಯಕ್ಕೆ ಅಳವಡಿಸಿದ ಎಲ್ಲಾ ಸಂಬಂಧಿತ ಸಿಬ್ಬಂದಿಗಳನ್ನು ಈ ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು ಹಾಗೂ ಸದರಿ ಪಠ್ಯವನ್ನು ರಚಿಸಲು ತಗುಲಿದ ವೆಚ್ಚವನ್ನು ಮರು ಭರಿಸಲು ಸೂಚಿಸಬೇಕು ಮತ್ತು ಪಠ್ಯಕ್ರಮ ರಚನೆಗೆ ಅಧಿಕಾರಿಗಳು ಪಡೆದ ಸಂಭಾವನೆಯನ್ನು ಸಹ ಮರು ಭರಣ ಮಾಡಿಸಿಕೊಳ್ಳಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯ ಸಂಶೋಧನಾ ಒಂದು ವೇಳೆ ಎರಡು ಅಥವಾ ಮೂರು ದಿನಗಳಲ್ಲಿ
ವಿದ್ಯಾರ್ಥಿಗಳ ಸಂಘವು ಆಗ್ರಹಿಸುತ್ತದೆ. ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಹೋದಲ್ಲಿ ವಿಶ್ವವಿದ್ಯಾಲಯವನ್ನು ಬಂದ್ ಮಾಡಿ ಮಾನ್ಯ ಕುಲಪತಿಗಳು ಹಾಗೂ ಕುಲಸಚಿವರ ಮೇಲೆ ಇದಕ್ಕೆ ಅವರೇ ಹೊಣೆ ಎಂದು ಮೊಕದ್ದಮೆ ದಾಖಲಿಸಿ ಹೋರಾಟ ಕೈಗೊಳ್ಳಲಾಗುವುದು ಎಂದು ಈ ಮೂಲಕ
ತಿಳಿಸಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮಲ್ಲಿಕಾರ್ಜುನ ಪರಮಣ್ಣವರ ಮುಂತಾದವರು ಇದ್ದರು.