DHARWAD:ಕಲೋಪಾಸಕನಿಗೆ ಶ್ರದ್ಧೆ-ತಾಳ್ಮೆ ಅಗತ್ಯ : ಡಾ. ಗೋವಿಂದ ಮಣ್ಣುರ.

ಕಲೋಪಾಸಕನಿಗೆ ಶ್ರದ್ಧೆ-ತಾಳ್ಮೆ ಅಗತ್ಯ : ಡಾ. ಗೋವಿಂದ  ಮಣ್ಣುರ. 
ಧಾರವಾಡ 25 :
 ರಂಗಭೂಮಿ ಕಲಾವಿದರಾಗ ಬಯಸುವವರಿಗೆ ಶ್ರದ್ಧೆ ಹಾಗೂ ತಾಳ್ಮೆ ಅತ್ಯಗತ್ಯ, ಕಲೋಪಾಸಕ ಅತ್ಯುತ್ತಮ ಕಲಾವಿದನಾಗಬೇಕೆಂದರೆ ಹದ್ದಿನ ಕಣ್ಣಾಗಿ ತನ್ನ ಪಾತ್ರ ಮತ್ತು ಪರಿಸರದಲ್ಲಿನ ಘಟನಾವಳಿಗಳನ್ನು ತೀಷ್ಣ ವಾಗಿ ಗ್ರಹಿಸಬೇಕು, ಕುದುರೆಯಂತೆ ದೃಢವಾಗಿ ನಿಲ್ಲುವ ತಾಕತ್ತು , ಸಿಂಹದಂಥ ಧೈರ್ಯ, ಆತ್ಮವಿಶ್ವಾಸ ಹೊಂದಬೇಕೆಂದು ಹಿರಿಯ ಸಾಹಿತಿ ಹಾಗೂ ನಾಟಕಕಾರಾದ ಡಾ. ಗೋವಿಂದ ಮಣ್ಣುರ ಅವರು ಉತ್ಸಾಹಿ ಹವ್ಯಾಸಿ ಕಲಾವಿದರಿಗೆ ಕಿವಿಮಾತು ಹೇಳಿದರು. 
ಅವರು, ನಗರದ ಉದಯನಗರದಲ್ಲಿನ ಶ್ರೀ ಲಕ್ಷ್ಮೀ ನಾರಾಯಣ ಸಭಾಗೃಹದಲ್ಲಿ ಸುನಿಧಿ ಕಲಾ ಸೌರಭದಿಂದ ಹವ್ಯಾಸಿ ಕಲಾವಿದರಿಗಾಗಿ ಏರ್ಪಡಿಸಲಾದ ಹತ್ತು ದಿನಗಳ ಅಭಿನಯ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ರಂಗತಜ್ಞ ಹಾಗೂ ವಾಗ್ಮಿ ಡಾ. ಶಶಿಧರ ನರೇಂದ್ರ ಅವರು ಕನ್ನಡ ರಂಗಭೂಮಿ ಬೆಳೆದುಬಂದ ಇತಿಹಾಸವನ್ನು ಎಳೆ ಎಳೆಯಾಗಿ ವಿವರಿಸಿದರು. ಅಧ್ಯಕ್ಷತೆವಹಿಸಿದ್ದ ಧಾರವಾಡ ರಂಗಾಯಣದ ಮಾಜಿ ನಿರ್ದೇಶಕ ಹಾಗೂ ಸುನಿಧಿ ಕಲಾ ಸೌರಭದ ಅಧ್ಯಕ್ಷ  ಸುಭಾಸ ನರೇಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 15 ವರ್ಷಗಳಿಂದ ತಮ್ಮ ಕಲಾ ಸೌರಭ ಮಕ್ಕಳು, ಮಹಿಳೆಯರು ಮತ್ತು ಯುವಕರಿಗಾಗಿ ನಡೆಸಿದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಹುಬ್ಬಳ್ಳಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ  ವಂಟಮೂರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. 50 ಹವ್ಯಾಸಿ ಕಲಾವಿದರು. ಪಾಲ್ಗೊಂಡಿದ್ದರು. ಕಲಾ ಸೌರಭದ ಕಾರ್ಯದರ್ಶಿ  ವೀಣಾ ಅಠವಲೆ ಕಾರ್ಯಕ್ರಮ ಆರಂಭದಲ್ಲಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ನವೀನ ಹಳೆಯದು

نموذج الاتصال