*ಪೋಷಕರ ಮಗುವಿನ ಪತ್ತೆಗೆ ಮನವಿ*
*ಧಾರವಾಡ (ಕರ್ನಾಟಕ ವಾರ್ತೆ) ಜ.29:* ದಿನಾಂಕ: 27-12-2024 ರಂದು ಶಭಾನಾ ಕೋಂ. ಪಾಪಣ್ಣ ಪೂಜಾರ, ವಾಸ: ತೆಜಸ್ವಿನ ನಗರ ಧಾರವಾಡ, ರವರು ವಾಸ್ಕೋದಿಂದ ಧಾರವಾಡಗೆ ವಾಸ್ಕೋ-ಹೌರಾ ಎಕ್ಸಪ್ರೇಸ್ ರೈಲಿನ ಜನರಲ್ ಬೋಗಿಯಲ್ಲಿ ಪ್ರಯಾಣ ಮಾಡಿಕೊಂಡು ಬರುವಾಗ ಸದರಿ ರೈಲುಗಾಡಿ ಧಾರವಾಡ ರೈಲ್ವೆ ನಿಲ್ದಾಣಕ್ಕೆ ಮದ್ಯಾಹ್ನ ಸುಮಾರು 1 ಗಂಟೆಗೆ ಬಂದಾಗ ಶಭಾನಾ ರವರು ಸುಮಾರು ಒಂದೊವರೆ ವರ್ಷದ ಹೆಣ್ಣು ಮಗು ಅಳುತ್ತಾ ಅಂಬೆಗಾಲ ಹಾಕುತ್ತಾ ಬರುತ್ತಿರುವಾಗ್ಗೆ ಅವರು ರೈಲಿನಲ್ಲಿ ಕುಳಿತವರಿಗೆ ಈ ಬಾಲಕಿ ಯಾರದು ಅಂತಾ ಕೇಳಿದ್ದು, ಯಾರು ನಮ್ಮದು ಅಲ್ಲಾ ಅಂತಾ ತಿಳಿಸಿರುತ್ತಾರೆ.
ರೈಲುಗಾಡಿಯು ಹೊರಡುವ ಸಮಯವಾಗಿದ್ದರಿಂದ ಅವರು ಆ ಮಗುವನ್ನು ತಗೆದುಕೊಂಡು ಧಾರವಾಡ ರೈಲ್ವೆ ನಿಲ್ದಾಣದಲ್ಲಿ ಇಳಿದು ಸುಮಾರು 2-3 ಗಂಟೆ ಧಾರವಾಡ ರೈಲ್ವೆ ನಿಲ್ದಾಣದ ವೇದಿಕೆಯಲ್ಲಿ ಕುಳಿತು ಎಲ್ಲರಿಗೆ ಮಗುವಿನ ಬಗ್ಗೆ ಕೇಳಿದ್ದು. ಯಾರು ನಮ್ಮದು ಅಂತಾ ಹೇಳಲಿಲ್ಲ. ನಂತರ ಪಾಲಕರ ಇಲ್ಲದೆ ಇರುವ ಮಗವನ್ನು ವಿಧ್ಯಾಗಿರಿ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದು. ಮಕ್ಕಳ ಸಹಾಯವಾಣಿ ಇವರುಗಳು ಸದರಿ ಮಗವನ್ನು ಅಮೂಲ್ಯ (ಜಿ) ಶಿಶುಗೃಹ ಗಂಟಿಕೇರಿ ಹುಬ್ಬಳ್ಳಿ ಸಂಸ್ಥೆಗೆ ಬಿಟ್ಟಿರುತ್ತಾರೆ.
ಸದರಿ ಮಗುವಿನ ಪಾಲಕರು ಬರಬಹುದೆಂದು ಇಲ್ಲಿಯವರೆಗೆ ನೋಡಿದ್ದು ಆದರೆ ಇಲ್ಲಿಯವರೆಗೆ ಯಾರು ಮಗುವಿನ ವಾರಸ್ಸುದಾರರು ಬಂದಿರುವದಿಲ್ಲ. ಸದರಿ ಮಗುವಿನ ತಂದೆ ಅಥವಾ ಆ ಮಗುವಿನ ರಕ್ಷಣೆಯ ಹೊಣೆ ಹೊತ್ತಿರುವ ವ್ಯಕ್ತಿಯು ಆ ಮಗುವನ್ನು ಅಪಾಯಕೊಡ್ಡುವ ಉದ್ದೇಶದಿಂದ ಸಂಪೂರ್ಣವಾಗಿ ತೊರೆದುಬಿಡುವ ಉದ್ದೇಶದಿಂದ ಬಿಟ್ಟು ಹೋಗಿರುವವರ ಮೇಲೆ ಕಾನೂನ ರಿತ್ಯಾ ಕ್ರಮ ಕೈಗೊಳ್ಳಲು ಪ್ರಕಾಶ ಕೊಡ್ಲಿವಾಡ, ಸಿ.ಡಬ್ಲೂ.ಸಿ. ಸದಸ್ಯರು ನೀಡಿದ ದೂರಿನ ಮೇರೆಗೆ ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 02/2025 ಕಲಂ 93 ಬಿ.ಎನ್.ಎಸ್ ರಿತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
ಮಗುವಿನ ವಯಸ್ಸು ಸುಮಾರು 01 ವರ್ಷ 06 ತಿಂಗಳು, ಕಪ್ಪು ಮೈಬಣ್ಣ, ದುಂಡು ಮುಖ, ನಿಟಾದ ಮೂಗು, ಸ್ಕ್ಯಾ ನೀಲಿ ಬಣ್ಣದ ಟಿ ಶರ್ಟ ಧರಿಸಿದ್ದು, ಅದರ ಮೇಲೆ ಓಖಿS Pಂಖಖಿಙ ಇರುತ್ತದೆ. ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ. ಈ ಮಗುವಿನ ವಾರಸುದಾರರು ಪತ್ತೆಯಾದಲ್ಲಿ ಪೊಲೀಸ್ ಉಪ ನಿರೀಕ್ಷಕರು, ರೇಲ್ವೆ ಪೊಲೀಸ್ ಠಾಣೆ ಹುಬ್ಬಳ್ಳಿ ದೂರವಾಣಿ ಸಂಖ್ಯೆ :0836-2364751, ಮೊಬೈಲ್ ನಂ-9480802126 ನೇದ್ದಕ್ಕೆ ಸಂಪರ್ಕಿಸಲು ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ :080-22871291 ಗೆ ಮಾಹಿತಿ ನೀಡಲು ಪ್ರಕಟಣೆ ತಿಳಿಸಿದೆ.