DHARWAD:ರವಿಕುಮಾರ ಕಗ್ಗಣ್ಣವರ ಇವರಿಗೆ ಕರ್ನಾಟಕ ಸರ್ಕಾರ ಮಾಧ್ಯಮ ಅಕಾಡೆಮಿ 2024 ನೇ ಸಾಲಿನ ಪ್ರಶಸ್ತಿ ಇಂದು ಘೋಷಣೆ


           ರವಿಕುಮಾರ ಕಗ್ಗಣ್ಣವರ  ಇವರಿಗೆ ಕರ್ನಾಟಕ ಸರ್ಕಾರ ಮಾಧ್ಯಮ ಅಕಾಡೆಮಿ 2024 ನೇ ಸಾಲಿನ ಪ್ರಶಸ್ತಿ ಇಂದು ಘೋಷಣೆ ಮಾಡಿದೆ. 
ರವಿಕುಮಾರ ಅವರ ಕಾರ್ಯವೈಖರಿ ನಿಮ್ಮ ಗಮನಕ್ಕಿರಲಿ ಸಮಯ ಬಿಡು ಮಾಡಿಕೊಂಡು ಒಂದ್ಸಲ ಓದ್ರಿ. ಪ್ರೋತ್ಸಾಹಿಸಿ 🙏

ಪತ್ರಕರ್ತರು ಸಾಮಾಜಿಕ ಸಮಸ್ಯೆಗಳ ಕುರಿತು ಪತ್ರಿಕೆಗೆ ಸುದ್ದಿ ಬರೆದು ಕಳುಹಿಸುದರೊಂದಿಗೆ ತಮ್ಮ ಕರ್ತವ್ಯದ ಜೊತೆಗೆ ಸಾಮಾಜಿಕವಾಗಿ ಬೆರೆಯುವ ಕೆಲಸದಲ್ಲಿ ಕೆಲವರು ಸಿಗಬಲ್ಲರು.    
         ಅಂಥಹದರಲ್ಲಿ ರವಿಕುಮಾರ ಕಗ್ಗಣ್ಣವರ ಅವರು ಕಳೆದ 23 ವರುಷಗಳ ಕಾಲ ದಿನಪತ್ರಿಕೆ ವರದಿಗಾರರಾಗಿ ಕಾರ್ಯ ನಿರ್ವಹಿಸಿದ ಸಹೃದಯಿ ಪತ್ರಕರ್ತರಾಗಿದ್ದು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ವಿಶೇಷ.  

              ಕವಿ ಕುಮಾರವ್ಯಾಸನ ಜನ್ಮಸ್ಥಳವಾದ ಕೋಳಿವಾಡ ಗ್ರಾಮದ ಬಡ ಹಾಗೂ ಕೃಷಿ ಕುಟುಂಬದಲ್ಲಿ ಜನಿಸಿದ ಇವರ ಶಿಕ್ಷಣ ಧಾರವಾಡದಲ್ಲಿ ಆರಂಭವಾಯಿತು. ಎಂ. ಎ ಪತ್ರಿಕೋದ್ಯಮ ಪದವಿ ಪಡೆದು ಪತ್ರಿಕೆಗೆ ಲೇಖನ ಬರೆಯುವ ಮೂಲಕ ಪತ್ರಕರ್ತರಾದರು. ವಿಜಯ ಸಂದೇಶ, ಕೆಂಪುಜಲ, ಅಮೋಘ ನ್ಯೂಜ್, ಉಷಾಕಿರಣ, ಇನ್ ನ್ಯೂಜ್, ಸೃಷ್ಠಿರಾಜ ಟೈಮ್ಸ್, ಹುಬ್ಬಳ್ಳಿ ಸಂಜೆ, ವಿಜಯ ಕರ್ನಾಟಕ ಇದೀಗ ಕನ್ನಡಮ್ಮ ದಿನ ಪತ್ರಿಕೆಯಲ್ಲಿ ಕಾರ್ಯನಿರತ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದು ಇವರು ಬರೆದ ಹಲವಾರು ಲೇಖನಗಳು ಫಲಶೃತಿ ಕೂಡಾ ಕಂಡಿವೆ.

       ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯದಲ್ಲೂ ಕಾಯಾ, ವಾಚಾ ಮನಸಾ ಶ್ರಮಿಸುತ್ತಿರುವ ಇವರು ಯಾವುದೇ ಆಸೆ ಆಮಿಷಕ್ಕೊಳಗಾಗದೆ ಸತ್ಯಾಧಾರಿತ ವರದಿ ಮಾಡುವ ಮೂಲಕ ಸಮಾಜದಲ್ಲಿನ ಕಷ್ಟ ಕಾರ್ಪಣ್ಯಕ್ಕೂ ಕೈ ಜೋಡಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಕಾಯಕದಿಂದ ಹಣದಿಂದ ಬಂದ ಲಾಭವನ್ನು ತಮ್ಮ ಕೈಲಾದಷ್ಟು ಹಣಕಾಸಿನ ನೆರವು ನೀಡುತ್ತಿದ್ದಾರೆ. ನೊಂದ ಜೀವಿಗಳ, ಅಂಧರ, ಅಂಗವಿಕಲರ, ನಿರ್ಗತಿಕರ, ಬಡ ಕುಟುಂಬದ ಮಕ್ಕಳ ಮತ್ತು ವೃದ್ದರ ಪರವಾಗಿ ಕಾಳಜಿ ವಹಿಸುತ್ತಿರುವ ಅನೇಕ ನಿದರ್ಶನಗಳನ್ನು ನೀವು ಅವರ ಫೇಸಬುಕ್‌ದಲ್ಲಿ ನೋಡಬಹುದು.                
               01 ಸಾವಿರ ಕ್ಕೂ ಹೆಚ್ಚು ನಿರ್ಗತಿಕ ಹಾಗೂ ಭಿಕ್ಷಕರನ್ನು ರಕ್ಷಣೆ ಮಾಡಿ ಅವರನ್ನು ನಿರ್ಮಿತಿ ಕೇಂದ್ರಕ್ಕೆ ದಾಖಲಿಸಿ ಜೀವನೋಪಾಯ ಕೊಡಿಸಿದ್ದಾರೆ. 02 ಸಾವಿರ ಮಕ್ಕಳಿಗೆ ಉಚಿತ ನೋಟ ಪುಸ್ತಕ, ಪಠ್ಯೇತರ ಚಟುವಟಿಕೆ ಸಲಕರಣೆ ಒದಗಿಸಿದ್ದಲ್ಲದೆ ಪೋಷಕರಿಲ್ಲದ 500 ಕ್ಕೂ ಹೆಚ್ಚು ಮಕ್ಕಳಿಗೆ ಬಟ್ಟೆ ಹಾಗೂ ಶಿಷ್ಯ ವೇತನ ನೀಡಿರುವರು. 01 ಸಾವಿರ ಕ್ಕೂ ಅಧಿಕ ಸಮಾರಂಭದಲ್ಲಿ ನಿರೂಪಣೆ 300 ಕ್ಕೂ ಹೆಚ್ಚು ಸಮಾರಂಭದಲ್ಲಿ ಉಪನ್ಯಾಸ 250 ಕ್ಕೂ ಹೆಚ್ಚು ವಿಶೇಷ ಲೇಖನ ಬರೆದಿರುವುದು ವಿಶೇಷತೆ. ಸದ್ಯ ನಿಜಗುಣಶ್ರೀ ಶೀರ್ಷಿಕೆ ಅಡಿ ಪುಸ್ತಕ ಕೂಡ ಬರೆಯುತ್ತಿರುವುದು ವಿಶೇಷ.

             ಇವರ ನಿಸ್ವಾರ್ಥ ಸೇವೆಯನ್ನು ಗಮನಿಸಿರುವ ಮಠಮಾನ್ಯಗಳು ಹಾಗೂ ಅನೇಕ ಸಂಘ ಸಂಸ್ಥೆಗಳು ಪುರಸ್ಕಾರ ನೀಡಿ ಸನ್ಮಾನಿಸಿವೆ. ಶರಣ ಕಾಯಕ ರತ್ನ, ಸುವರ್ಣ ಪುರಸ್ಕಾರ, ಕನ್ನಡ ರತ್ನ, ಮೌಲ್ಯ ಪತ್ರಿಕೋದ್ಯಮ ರತ್ನ, ಬಸವ ರತ್ನ, ಸಮಾಜರತ್ನ ಶ್ರಮಜೀವಿ, ಹೆಮ್ಮೆಯ ಧಾರವಾಡಿಗ, ಬಸವಪ್ರೀಯ, ವಿಶ್ವೇಶ್ವರಯ್ಯ ಪ್ರಶಸ್ತಿ,  ಹೆಮ್ಮೆಯ ಕನ್ನಡಿಗ,   
            ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ  ರಾಜ್ಯೋತ್ಸವದ ಧೀಮಂತ ಪ್ರಶಸ್ತಿ, 
               ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡಿದ ಅತ್ಯುತ್ತಮ ಲೇಖನ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿ ಗೌರವ ಸನ್ಮಾನ ಸ್ವೀಕರಿಸಿದ್ದಾರೆ.
           ಪತ್ರಕರ್ತ ಎನ್ನುವ ಮನೋಭಾವನೆಗಿಂತ ಮಾನವ ಜನ್ಮ ದೊಡ್ಡದಲ್ಲ ಮಾನವೀಯತೆ ದೊಡ್ಡದು ಎಂಬ ಉದ್ದೇಶ ರವಿಕುಮಾರ ಅವರದ್ದಾಗಿದೆ 👏
ಇದೀಗ ರವಿಕುಮಾರ ಅವರ ಕಾರ್ಯ ಪರಿಗಣಿಸಿ ಕರ್ನಾಟಕ ಸರ್ಕಾರ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಘೋಷಣೆ ಮಾಡಿದ್ದು 2025 ಜನೆವರಿ ತಿಂಗಳಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ನವೀನ ಹಳೆಯದು

نموذج الاتصال