DHARWAD:ನಕಲಿ ಕಾಂಗ್ರೆಸ್‌ನಲ್ಲಿ ನಕಲಿ ಗಾಂಧಿಗಳ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಗಾಂಧಿ ಭಾರತ ಸಮಾವೇಶ - ಕೇಂದ್ರ ಸಚಿವ ಜೋಶಿ.
ಧಾರವಾಡ : ನಕಲಿ ಕಾಂಗ್ರೆಸ್‌ನಲ್ಲಿ ನಕಲಿ ಗಾಂಧಿಗಳ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಗಾಂಧಿ ಭಾರತ ಸಮಾವೇಶ ನಡೆಸಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸ್ ವಿಸರ್ಜನೆ ಮಾಡಲು ಹೇಳಿದ್ದರು. ಅವರು ಹೇಳಿದಂತೆ ಇಂದು ಪಕ್ಷವೇ ಅಸ್ತಿತ್ವದಲ್ಲಿ ಇಲ್ಲ. ಕಾಂಗ್ರೆಸ್ ಪಕ್ಷದ್ದು ಎ ದಿಂದ ಝಡ್ ವರೆಗೆ ಮುಗಿದು ಹೋದ ಕಥೆಯಾಗಿದೆ.
ಇದು ನಿಜವಾದ ಕಾಂಗ್ರೆಸ್ ಅಲ್ಲವೇ ಅಲ್ಲ. ಡುಬ್ಲಿಕೇಟ್ ಕಾಂಗ್ರೆಸ್ ಆಗಿದೆ. ನಕಲಿ ಕಾಂಗ್ರೆಸ್ಸಿನ ನಕಲಿ ಗಾಂಧಿಗಳ ನೇತೃತ್ವದಲ್ಲಿ ಸಮಾವೇಶ ಮಾಡುತ್ತಿದ್ದು, ಸರಕಾರದ ದುಡ್ಡಿನಲ್ಲಿ ಜಾತ್ರೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.