DHARWAD:ಅವಳಿ ನಗರದ ಕಾನೂನು ಸುವ್ಯವಸ್ಥೆ ಕಾಪಾಡಲು, ಮಾದಕ ವಸ್ತುಗಳ ಮುಕ್ತ, ಮಹಿಳೆ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಕ್ರಮ ಕೈಕೊಂಡಿದ್ದು 45 ಜನ ಗಡಿಪಾರು ಮಾಡಿದ ಆಯುಕ್ತ ಎನ್ ಶಿಕುಮಾರ.
ಧಾರವಾಡ 15 : ಹುಬ್ಬಳ್ಳಿ ಧಾರವಾಡ ಅವಳನಗರದಲ್ಲಿ ನಡೆದಿರುವ, ಕೊಲೆ, ಸುಲಿಗೆ, ಕೊಲೆಗೆ ಪ್ರಯತ್ನ, ಸರಗಳ್ಳತನ, ಮಾದಕ ವಸ್ತು ಮಾರಾಟ/ಸೇವನೆ, ಭೂ ಮಾಫಿಯಾ, ಮಹಿಳೆ ಮತ್ತು ವಿದ್ಯಾರ್ಥಿನಿಯರ ಅಪಹರಣ, ಚುಡಾಯಿಸುವುದು
ಅಲ್ಲದೆ ಸಂಘಟಿತ ಅಪರಾಧಗಳಾದ, ಮಟಕಾ, ಗ್ಯಾಂಬ್ಲಿಂಗ್, ಕ್ರಿಕೇಟ ಬೆಟ್ಟಿಂಗ್ ಹಾಗೂ ಇತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿ, ಸಮಾಜದ ಸ್ವಾಸ್ಥ್ಯ ಹಾಳುಮಾಡುವ, ಮುಂಡ ಹುಡುಗರ/ರೌಡಿ ಜನರ ಗುಂಪು ಕಟ್ಟಕೊಂಡು ತಿರುಗಾಡುತ್ತಾ ಸಾರ್ವಜನಿಕರಲ್ಲಿ ಭಯ ಮತ್ತು ಭೀತಿಯನ್ನು ಹುಟ್ಟು ಹಾಕಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಮಾಡಬಲ್ಲ ಅಪಾಯಕಾರಿ ಮನುಷ್ಯರಾಗಿ ಸಮಾಜಕ್ಕೆ ಗಂಡಾಂತರಕಾರಿಯಾಗಿರುವ ಇವರ ವಿರುದ್ಧ ಮುಂಜಾಗ್ರತಾ ಕ್ರಮದ ಅವಶ್ಯಕತೆ ಇರುತ್ತದೆ.
ಈ ಹಿನ್ನೆಲೆಯಲ್ಲಿ ಸುಮಾರು 2-3 ತಿಂಗಳುಗಳಿಂದ ಸ್ಥಳೀಯ ಅಧಿಕಾರಿಗಳೊಂದಿಗೆ ಇವರ ವಿರುದ್ಧ ಇರುವ ಪ್ರಕರಣಗಳನ್ನು ವಿಮರ್ಶೆ (ರಿವೀವ್) ಮಾಡಿದ್ದು ಈ ಆರೋಪಿತರ ಮೇಲೆ ಗಡಿಪಾರು ಮಾಡುವ ಅವಶ್ಯಕತೆ ಕಂಡುಬಂದಿದ್ದರಿಂದ,
ಕರ್ನಾಟಕ ಪೊಲೀಸ್ ಕಾಯ್ದೆ-1963 ಕಲಂ 55 ಮತ್ತು 56 ರ ಅಡಿಯಲ್ಲಿ ಕ್ರಮ ಕೈಕೊಂಡಿದ್ದು ಇರುತ್ತದೆ. ಮುಂದುವರೆದು ಕಾನೂನು ಸುವ್ಯವಸ್ಥೆ ಕಾಪಾಡಲು, ಮಾದಕ ವಸ್ತುಗಳ ಮುಕ್ತ, ಮಹಿಳೆ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಕ್ರಮ ಕೈಕೊಂಡಿದ್ದು ಈ ಪ್ರಕ್ರಿಯೇ (ಗಡಿಪಾರು) ಮುಂದುವರೆಯುತ್ತದೆ.
ಈ ಗಡಿಪಾರು ವ್ಯಕ್ತಿಗಳ ನಿರ್ದಿಷ್ಟ ಅವಧಿವರೆಗೆ ಇದ್ದು, ಗಡಿಪಾರು ವ್ಯಕ್ತಿಗಳ ಚಲನವಲನಗಳ ಮತ್ತು ಇವರ ಕಾರ್ಯಚಟುವಟಿಕೆಗಳ ಮೇಲೆ ಸೂಕ್ತ ನಿಗಾವಹಿಸಿ ಈ ಕಛೇರಿಗೆ ಮಾಹಿತಿ ತಿಳಿಸುವಂತೆ "ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ.”
ಗಡಿಪಾರಾದ ವ್ಯಕ್ತಿಗಳು ನಗರದಲ್ಲಿ ಕಂಡುಬಂದಲ್ಲಿ, ಸಾರ್ವಜನಿಕರು ಹಾಗೂ ಮನೆಯ ಅಕ್ಕ-ಪಕ್ಕದ ಜನರು, ಸ್ಥಳೀಯ ಪೊಲೀಸ್ ಠಾಣೆಗಳಿಗೆ, ನಗರ ನಿಸ್ತಂತು ಕೊಠಡಿ (ಪೋನ ನಂ.100, 2233555) ಹಾಗೂ “112 ವಾಹನಕ್ಕೆ” ತಿಳಿಸುವ ಜವಾಬ್ದಾರಿ ಆಗಿರುತ್ತದೆ, ಈ ಪ್ರಕ್ರಿಯೆಗೆ ನಿಮ್ಮ ಸಹಕಾರ ಕೂಡ ಅವಶ್ಯ ವಿರುತ್ತದೆ.