ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಶಿರಸಿ ತಾಲೂಕಿನ ಗಣಪತಿ ಹೆಗಡೆ ಹಿರೆಕೈ ಬೆಳ್ಳಿ ಪದಕದೊಂದಿಗೆ
START 74NEWS:ಥೈಲ್ಯಾಂಡ್ ಯೂತ್ ಯೋಗ ಅಸೋಸಿಯೇಷನ್ ಮತ್ತು ವರ್ಲ್ಡ್ ಯೂಥ್ ಯೋಗ ಫೆಡರೇಶನ್ ಹಾಗೂ ವರ್ಷಿಣಿ ಯೋಗ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ರೀಡೆ ಟ್ರಸ್ಟ್ ಸಹಭಾಗಿತ್ವದಲ್ಲಿ ಥೈಲ್ಯಾಂಡ್ ದೇಶದ ಪಟ್ಟಾಯದಲ್ಲಿ ನಡೆದ ಆರನೇ ವರ್ಷದ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಶಿರಸಿ ತಾಲೂಕಿನ ಗಣಪತಿ ಹೆಗಡೆ ಹಿರೆಕೈ ಬೆಳ್ಳಿ ಪದಕದೊಂದಿಗೆ ದ್ವಿತೀಯ ಸ್ಥಾನ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ಶಿರಸಿಯ ಕೀರ್ತಿ ಪತಾಕೆಯನ್ನು ಹಾರುವಂತೆ ಮಾಡವಲ್ಲಿ ಯಶಸ್ವಿಯಾಗಿದ್ದಾರೆ. ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಶ್ರೀಲಂಕಾ ಮಲೇಷ್ಯಾ ಸಿಂಗಾಪುರ ಥೈಲ್ಯಾಂಡ್ ಸೇರಿದಂತೆ ಹಲವಾರು ದೇಶಗಳಿಂದ ಸುಮಾರು 500 ಕ್ಕೂ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸಿದ್ದರು.