DHARWAD:ರಾಷ್ಟçಪಿತ ಮಹಾತ್ಮಾ ಗಾಂಧಿಜಿ ಅಧ್ಯಕ್ಷತೆಯ ಬೆಳಗಾವಿ ಅಖಿಲ ಭಾರತ ಕಾಂಗ್ರೇಸ್ ಅಧಿವೇಶನದ ಶತಮಾನೋತ್ಸವ ಸಂಭ್ರಾಚರಣೆ

ಕಾಂಗ್ರೇಸ್ ಅಧಿವೇಶನದ ಶತಮಾನೋತ್ಸವ ಸಂಭ್ರಾಚರಣೆ
ಧಾರವಾಡ 24 :
ರಾಷ್ಟçಪಿತ ಮಹಾತ್ಮಾ ಗಾಂಧಿಜಿ ಅಧ್ಯಕ್ಷತೆಯ ಬೆಳಗಾವಿ ಅಖಿಲ ಭಾರತ ಕಾಂಗ್ರೇಸ್ ಅಧಿವೇಶನದ ಶತಮಾನೋತ್ಸವ ಸಂಭ್ರಾಚರಣೆ ಸಭೆ ಡಿ.26 ರ ಸಂಜೆ 5 ಕ್ಕೆ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಏರ್ಪಡಿಸಿದೆ ಎಂದು  ಭಾರತ ಏಕತಾ ಆಂದೋಲನ ಕಾರ್ಯಾಧ್ಯಕ್ಷ ಮಹಾದೇವ ಹೊರಟ್ಟಿ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕರ್ನಾಟಕ ವಿದ್ಯಾವರ್ಧಕ ಸಂಘ, ಗಾಂಧಿ ಪ್ರತಿಷ್ಠಾನ ಕೇಂದ್ರ, ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ವಿಭಾಗ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮತ್ತು ಭಾರತ ಏಕತಾ ಆಂದೋಲನ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಈ ಸಭೆಯನ್ನು ಏರ್ಪಡಿಸಿದೆ. ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ವಿಭಾಗ ಮುಖ್ಯಸ್ಥೆ ಡಾ.ಜಯಶ್ರೀ ಎಸ್. ಕಾರ್ಯಕ್ರಮ ಉದ್ಘಾಟಿಸಲಿದ್ದು ಗಾಂಧಿವಾದಿ ಚಿಂತಕ ಪ್ರೊ.ಶಿವಾನಂದ ಶೆಟ್ಟರ ಅಧ್ಯಕ್ಷತೆವಹಿಸುವರು ಎಂದರು.
ಗಾಂಧಿ ಪ್ರತಿಷ್ಠಾನ ಕೇಂದ್ರ ಅಧ್ಯಕ್ಷ ಡಾ.ಸಜೀವ ಕುಲಕರ್ಣಿ, ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಹಿರಿಯ ಪತ್ರಕರ್ತ ಮನೋಜ ಪಾಟೀಲ, ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ವಿದ್ಯಾರಣ್ಯ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ.ಶರಣಮ್ಮ ಗೊರೆಬಾಳ, ಸಿ.ಎಸ್.ಐ ಮಹಾವಿದ್ಯಾಲಯದ ಡಾ.ಶಂಭು ಹೆಗಡಾಳ, ಮೃತ್ಯುಂಜಯ ಮಹಾವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥೆ ಡಾ.ವೀಣಾ ಯಲಿಗಾರ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಭಾರತ ಏಕತಾ ಆಂದೋಲನ ಕಾರ್ಯಾಧ್ಯಕ್ಷ ಮಹಾದೇವ ಹೊರಟ್ಟಿ ಉಪಸ್ಥಿತರಿರುತ್ತಾರೆ ಎಂದರು.

ಕರ್ನಾಟಕ ವಿಶ್ವವಿದ್ಯಾಲಯ ಸಂಗೀತ ಮಹಾವಿದ್ಯಾಲಯ, ಬಾಲ ಬಳಗ ವಿದ್ಯಾರ್ಥಿಗಳು ಹಾಗೂ ರಾಮಕುಮಾರ ಶಿಂಧೆ, ಪ್ರೇಮಕ್ಕ ಹೊರಟ್ಟಿ, ಪ್ರೇಮಕ್ಕ ಹಲಕಿ, ಅಂಜಲೀನಾ ಗ್ರೇಗರಿ ಇವರಿಂದ ಗಾಂಧಿಜಿ ಭಜನೆ ಮತ್ತು ಗೀತೆಗಳು ಜರುಗಲಿವೆ. ಸಂಗೀತಾಸಕ್ತರು ಹಾಗೂ ಗಾಂಧಿಜಿಯವರ ಅಭಿಮಾನಿಗಳು ಈ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ  ಡಾ ಲಿಂಗರಾಜ್ ಅಂಗಡಿ  . ಪ್ರೋ ಕೆ ಎಸ್ ಕೌಜಲಗಿ ಮಂಜುನಾಥ್ ಮೊರೆ.  ಡಾ ಶ್ರೀಧರ್ ಕುಲಕರ್ಣಿ ಇದ್ದರು.
ನವೀನ ಹಳೆಯದು

نموذج الاتصال