DHARWAD:ರಾಷ್ಟ್ರನಿಮಾ೯ ಣಕ್ಕೆ ಆರೋಗ್ಯವಂತ ಮಕ್ಕಳು ಅವಶ್ಯ

ರಾಷ್ಟ್ರನಿಮಾ೯ ಣಕ್ಕೆ ಆರೋಗ್ಯವಂತ ಮಕ್ಕಳು ಅವಶ್ಯ -  ಡಾ.ನಿರಂಜನಕುಮಾರ.       
        ವಿಠ್ಠಲ್ ಚಿಕ್ಕ ಮಕ್ಕಳ ಆರೋಗ್ಯ ಸಂಸ್ಥೆಯ 46 ನೇ  ವಾರ್ಷಿಕೋತ್ಸವ.        ಧಾರವಾಡ : ನಗರದ ವಿಠ್ಠಲ್ ಚಿಕ್ಕ ಮಕ್ಕಳ ಆರೋಗ್ಯ ಸಂಸ್ಥೆಯ 46 ನೇ  ವಾರ್ಷಿಕೋತ್ಸವ ಮತ್ತು ಮಕ್ಕಳ ಅಕಾಡೆಮಿಯ 24 ನೇ ವಾರ್ಷಿಕೋತ್ಸವ ಸಮಾರಂಭ ಆಸ್ಪತ್ರೆಯ ಸಭಾಂಗಣದಲ್ಲಿ ಜರುಗಿತು.
ವಿಠ್ಠಲ್ ಮಕ್ಕಳ ಸ್ಪೇಷಾಲಿಟಿ ಆಸ್ಪತ್ರೆ ಮತ್ತು ಚಿಕ್ಕ ಮಕ್ಕಳ ಆರೋಗ್ಯ ಸಂಸ್ಥೆಯ ಮತ್ತು  ಚಿಕ್ಕಮಕ್ಕಳ ಅಕ್ಯಾಡೆಮಿಯ ವಾರ್ಷಿಕೋತ್ಸವದ ಸಮಾರಂಭದಲ್ಲಿ  ಎಸ.ಡಿ.ಎಮ್ ವಿಶ್ವವಿದ್ಯಾಲಯದ  ಕುಲಪತಿಗಳಾದ ಡಾ.ನಿರಂಜನಕುಮಾರ ಮಾತನಾಡಿ ವ್ರತ್ತಿಯಲ್ಲಿರುವವರೆಲ್ಲರೂ ರಾಷ್ಟ್ರ ಕಟ್ಟುವ  ಕಾರ್ಯದಲ್ಲಿ  ನಿರತರಾಗಬೇಕೆಂದರು , ರಾಷ್ಟ್ರನಿಮಾ೯ ಣಕ್ಕೆ ಆರೋಗ್ಯವಂತ ಮಕ್ಕಳು ಅವಶ್ಯ ಅವರೇ ಮುಂಬರುವ ವರ್ಷಗಳಲ್ಲಿ ಈ ರಾಷ್ಟ್ರವನ್ನು ಕಟ್ಟುವವರು ಎಂದು ಅಭಿಪ್ರಾಯಪಟ್ಟರು.
ಡಾ.ರಾಜನ್ ದೇಶಪಾಂಡೆಯವರು ಸಮಾಜಮುಖಿ ಕಾಯ೯ಕ್ರಮಗಳನ್ನು ಮುಕ್ತ ಕಂಠದಿಂದ ಪ್ರಶಂಸಿದರು. ಡಾ.ರಾಜನ್ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ವಿಠ್ಠಲ್ ಮಕ್ಕಳಸ್ಪೇಷಾಲಿಟಿ ಆಸ್ಪತ್ರೆ  ಮತ್ತು ಚಿಕ್ಕ ಮಕ್ಕಳ  ಅಕ್ಯಾಡೆಮಿ ಬೆಳೆದು ಬಂದ ದಾರಿಯನ್ನು ವಿವರಿಸಿದರು
ವಿಠ್ಠಲ್ ಆಸ್ಪತ್ರೆಯ ಸಿಬ್ಬಂದಿಯ ಪ್ರಾರ್ಥನೆಯೊಂದಿಗೆ ಸಮಾರಂಭ ಪ್ರಾರಂಭವಾಯಿತು. ಡಾ.ಕವನ ದೇಶಪಾಂಡೆ ಅತಿಥಿಗಳನ್ನು ಮತ್ತು ಅಮಂತ್ರಿತರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳನ್ನು ಡಾ. ಪಲ್ಲವಿ ದೇಶಪಾಂಡೆ ಪರಿಚಯಿಸಿದರು. ಇನ್ನೋರ್ವ ಅತಿಥಿ ಪದ್ಮಲತಾ ನಿರಂಜನಕುಮಾರ್ ಅವರನ್ನು ಡಾ.ವಾಯ್ ಪಿ  ಕಲ್ಲನಗೌಡರ್ ಪರಿಚಯಿಸಿದರು. ಶ್ರೀಮತಿ ಕವಿತಾ ದೇಶಪಾಂಡೆ ಮಾಲಾರ್ಪಣೆ ನೆರವೇರಿಸಿದರು. ಪ್ರೊ ಎಮ್. ವೈ . ಸಾವಂತ್, ಕಾರ್ಯದರ್ಶಿ .ಮಕ್ಕಳ ಅಕಾಡೆಮಿಯ ವಾರ್ಷಿಕ ವರದಿ ಸಾದರ ಪಡಿಸಿದರು.
ದಾಂಡೇಲಿಯ ಪ್ರಸಿದ್ಧ ವೈದ್ಯರಾದ ಡಾ.ಮುಕುಂದ ಕಾಮತ್ ಅವರಿಗೆ "ಮೆಡಿಕಲ್ ಎಕ್ಸೆಲೆನ್ಸ್" ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಾರ್ಷಿಕೋತ್ಸವದ ನಿಮಿತ್ತ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರನ್ನು ಡಾ. ಆಯ್. ಎಸ್. ಮಾಯಕರ್ ಸಾದರ ಪಡಿಸಿದರು. ಇದೇ ಸಂದರ್ಭದಲ್ಲಿ "ರಾಜ್ಯ ಮಟ್ಟದ ಅತ್ಯುತ್ತಮ ಸಂಗೀತ ಕಲಾಕಾರ" ಪ್ರಶಸ್ತಿಯನ್ನು ಕು.ಅಥರ್ವ ಗಂಟೆಣ್ಣವರ್ ಹೆಸರನ್ನು ಆಕಾಶವಾಣಿಯ ವಿಶ್ರಾಂತ ನಿರ್ದೇಶಕ ಮತ್ತು ಮಕ್ಕಳ ಅಕಾಡೆಮಿಯ ಉಪಾಧ್ಯಕ್ಷ  ಸಿ. ಯು .ಬೆಳ್ಳಕ್ಕಿ ಘೋಷಿಸಿದರು. ಡಾ ಎಸ್ ಜಿ ಹಿರೇಮಠ್ ಮತ್ತು ಡಾ ನಲತವಾಡ ಕಾರ್ಯಕ್ರಮ ನಿರೂಪಿಸಿದರು.
ನವೀನ ಹಳೆಯದು

نموذج الاتصال