ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು , ಸಂಸ್ಥಾಪಕರು ,
ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು , ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ , ಸುತ್ತೂರು ಕ್ಷೇತ್ರ, ಪೂಜ್ಯರ ದರ್ಶನವನ್ನು ಧಾರವಾಡದ ಜೆಎಸ್ಎಸ್ ವಿಧ್ಯಾಪೀಠ, ಕೆಲಗೇರಿ ಆವರಣದಲ್ಲಿ ಪಡೆಯಲಾಯಿತು. ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕ ಶರಣ ಸಾಹಿತ್ಯ ಪರಿಷತ್ತು ಸಮ್ಮೇಳನ ನಡೆಸುವ ಕುರಿತು ಪೂಜ್ಯರೊಂದಿಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ.ಸಂಗಮನಾಥ ಲೋಕಾಪೂರ, ಹಿರಿಯ ವಕೀಲರಾದ ಫಿ.ಎಚ್. ನೀರಲಕೇರಿ, ಶಿದ್ದಣ್ಣ ಕಂಬಾರ, ವರದಿಗಾರ ಎಸ್. ಸಂಜೀವಕುಮಾರ ಪ್ರೊ,ಎಸ್. ಜಿ.ಹಿರೇಮಠ, ಕು,ಅನುಶ್ರೀನೀರಲಕೇರಿ,ಅಣ್ಣಿಗೇರಿ ತಾಲೂಕ ಘಟಕದ ಅಧ್ಯಕ್ಷ ನಬಿಸಾಬ ಯಲಬುರ್ಗಿ, ಮುಂತಾದವರು ಉಪಸ್ತಿತರಿದ್ದರು.