DHARWAD:ಭಕ್ತರ ಇಷ್ಠಾರ್ಥ ಸಿದ್ದಿಗಾಗಿ ಅಯ್ಯಪ್ಪನ ಪೂಜೆ, ಅಂಬಾರಿ ಮೆರವಣಿಗೆ

ಭಕ್ತರ ಇಷ್ಠಾರ್ಥ ಸಿದ್ದಿಗಾಗಿ ಅಯ್ಯಪ್ಪನ ಪೂಜೆ, ಅಂಬಾರಿ ಮೆರವಣಿಗೆ.
ಧಾರವಾಡ 19 : ಸಕಲ ಜೀವರಾಶಿಗೆ ಲೇಸ ಬಯಸುವ ನಿಟ್ಟಿನಲ್ಲಿ ಲೋಕಕಲ್ಯಾಣಕ್ಕಾಗಿ ವರ್ಷದ 365 ದಿವಸಗಳ ಕಾಲ ನಿತ್ಯ ನಿರಂತರವಾಗಿ ಕಳೆದ 29 ವರ್ಷದಿಂದ ಶ್ರೀ ಅಯ್ಯಪ್ಪನ ಪೂಜೆ ನೆರವೇರಿಸಿಕೊಂಡು ಬರುತ್ತಿರುವ ಶ್ರೀ ಧರ್ಮಶಾಸ್ತ ಸೇವಾ ಸಮಿತಿಯು ಪ್ರತಿ ವರ್ಷದಂತೆ ಈ ವರ್ಷವು ಕೂಡ ಅಯ್ಯಪ್ಪನ ಅಂಬಾರಿ ಮೆರವಣಿಗೆ ಡಿ 22 ರಂದು  ಏರ್ಪಡಿಸಿದೆ ಎಂದು ಸಮಿತಿ ಸಂಸ್ಥಾಪಕ ರಮೇಶ ಪಾತ್ರೋಟ ಗುರುಸ್ವಾಮಿಗಳು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ  ಅಂದು ಬೆಳಗ್ಗೆ 5 :30 ಕ್ಕೆ ಪೂರ್ಣ ನವಗ್ರಹ ಶಾಂತಿ, ಹೋಮ, ಶ್ರೀಲಕ್ಷ್ಮೀ ಶಾಂತಿ ಹೋಮ ಹಾಗೂ ಗಣ ಹೋಮ, ಶ್ರೀ ಅಯ್ಯಪ್ಪ ಸ್ವಾಮಿಗೆ ಅಭಿಷೇಕ, ಪಂಚಾಮೃತ ಅಭಿಷೇಕ, ಘೃತ ಅಭಿಷೇಕ, ಅಲಂಕಾರ ಮಹಾ ಪೂಜೆ, ಮಹಾ ಮಂಗಳಾರತಿ ನಡೆಯಲಿದೆ.   ಮದ್ಯಾಹ್ನ 12 ಕ್ಕೆ ಜ್ಯೂ ರಾಜಕುಮಾರ ಹಾಗೂ ಜ್ಯೂ. ಪುನಿತ ರಾಜಕುಮಾರ ಅವರಿಂದ ಅಯ್ಯಪ್ಪನ ಭಕ್ತಿಗೀತೆ ಮನರಂಜನೆ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3 ಕ್ಕೆ   ಆನೆ ಮೇಲೆ ಶ್ರೀ ಅಯ್ಯಪ್ಪ ಸ್ವಾಮಿ ಅಂಬಾರಿ ಮೆರವಣಿಗೆಯು ಕಂದಾಯ ನಗರದಿಂದ ಹೊರಟು ಶಹರದ ವಿವಿಧ ಬಡಾವಣೆ ಹಾಗೂ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ನಂತರ ಶ್ರೀ ಸಾಯಿ ಮಂದಿರಕ್ಕೆ ಆಗಮಿಸಲಿದೆ ಎಂದರು.

ಮದ್ಯಾಹ್ನ 3:30 ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಮುಕ್ತಿಮಠದ ಶ್ರೀ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಸ್ವಾಮಿಜಿ, ಸಿದ್ದಾರೂಢಮಠದ ಶ್ರೀ ಮಾದವಾನಂದ ಸ್ವಾಮಿಜಿ, ಶ್ರೀ ಶಿವಪುತ್ರ ಸ್ವಾಮಿಜಿ, ಸಾನಿಧ್ಯವಹಿಸಲಿದ್ದಾರೆ. ಕೇಂದ್ರ ಸಚಿವ ಶ್ರೀ ಪಲ್ಹಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಸಮಾರಂಭ ಉದ್ಘಾಟಿಸಲಿದ್ದಾರೆ. ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹಾಗೂ ಶಾಸಕ ಎನ್.ಎಚ್.ಕೋನರಡ್ಡಿ ಅಂಬಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದು ರಮೇಶ ಪಾತ್ರೋಟ ಗುರುಸ್ವಾಮಿಜಿಗಳು ಅಧ್ಯಕ್ಷತೆವಹಿಸಲಿದ್ದಾರೆ. ಅಲ್ಟಾçಟೆಕ್ ಸಿಮೆಂಟ ಸಂಸ್ಥೆ ಸಲಹೆಗಾರ ಕೇದಾರಿನಾಥ ಮುದ್ದಾ ಜ್ಯೋತಿ ಬೆಳಗಿಸಲಿದ್ದು ಪೊಲೀಸ ಉಪ ಆಯುಕ್ತ ರವೀಶ ಸಿ.ಆರ್. ಕೆ.ವಿ.ಜಿ.ಬ್ಯಾಂಕ ಮಹಾಪ್ರಭಂದಕ ಸತ್ಯ ಪ್ರಸಾದ, ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಶಾಕೀರ ಸನದಿ, ನಗರ ಪೋಲಿಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ, ಶ್ರೀ ಸಾಯಿ ಮಂದಿರ ಅಧ್ಯಕ್ಷ ಮಹೇಶ ಶೆಟ್ಟಿ ಪಡಿ ಪೂಜೆ ನೆರವೇರಿಸುವರು. ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ ಹಾಗೂ ಮಂಜು ಬಟ್ಟಣ್ಣವರ ಕಳಸ ಪೂಜೆ ನೆರವೇರಿಸುವರು. ರಾಹುಸಾಹೇಬ ಪಾಟೀಲ, ಶಿವಾಜಿ ಪಡಕೆ ಕುಂಭ ಪೂಜೆ ನೆರವೇರಿಸುವರು.  ಈ ಸಮಾರಂಭದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಪತ್ರಿಕಾಗೋಷ್ಟಿಯಲ್ಲಿ  ಆರ್ ಬಿ ಪಾಟೀಲ್ ಗಿರೀಶ್ ಮoಗೋಡ್ ಮಹಾಂತೇಶ್ ಪಾಟೀಲ್ ಇದ್ದರು.

ನವೀನ ಹಳೆಯದು

نموذج الاتصال