ಇತಿಹಾಸ ಪ್ರಸಿದ್ಧ ಹೆಬ್ಬಳ್ಳಿ ಶಾಲೆಗೆ ಬಣ್ಣದರ್ಪಣ ಮಾಡಿದ ಪರಿಸರಪ್ರೇಮ ತಂಡ.
ಧಾರವಾಡ :
1116 ರಲ್ಲಿ ಹುಟ್ಟಿದ ಊರು
ಮೂಲ ಹೆಸರು ಬ್ರಹ್ಮಪುರಿ
ಯಾದವ ಚಕ್ರವರ್ತಿಗಳು ಆಳುತ್ತಿದ್ದರು, ಯಾದವ ಚಕ್ರವರ್ತಿ ರಾಜಸಿಂಹನದೇವನ ಆಳ್ವಿಕೆಗೆ ಈ ಗ್ರಾಮ ಒಳಪಟ್ಟಿತ್ತು,
101 ಗುಡಿಗಳ
101 ಬಾವಿಗಳು ಈ ಗ್ರಾಮದಲ್ಲಿ ಇವೆ,
77 ಎಕರೆ ಮಾರುಕಟ್ಟೆ ಇತ್ತಂತೆ, 50 ಗ್ರಾಮಗಳು ಈ ಬ್ರಹ್ಮ ಪುರಿ ವ್ಯಾಪ್ತಿಯಲ್ಲಿ ಇದ್ದವು, 20 ಪೂಟ ಎತ್ತರದ ಕಾಂಪೌಂಡ್ ಗೋಡೆ ಗ್ರಾಮದ ಸುತ್ತಲೂ ಈ ಗೋಡೆಯ ಮೇಲೆ ಸ್ಥರಿಯಾ ಬಳ್ಳಿ (ಅದು ಒಂದು ವಿಷಕಾರಿ ಬಳ್ಳಿ) ಅದರಲ್ಲಿ ವಿಷ ಸರ್ಪಗಳು ಅವು ವೈರಿಗಳು ಒಳ ಬರದಂತೆ ತುಡಿಯುತ್ತಿದವು. ಕ್ರಮೇಣ ಯಾದವರ ಆಳ್ವಿಕೆ ಮುಗಿದ ಮೇಲೆ ಕಾಂಪೌಂಡ್ ಬೀಳಲು ಪ್ರಾರಂಭಿಸಿತು ಆಗ ದಾರಿ ಹೋಕರು ವಿಷಕಾರಿ ಬಳ್ಳಿ ನೋಡುತ್ತಾ ಹೇ ಬಳ್ಳಿ.., ಹೇ ಬಳ್ಳಿ..., ಎನ್ನುತ್ತಿದ್ದರು
ಆಗಿನಿಂದಲೇ ಈ ಊರಿಗೆ ಹೆಬಳ್ಳಿ ಎಂದು ಹೆಸರು ಬಂದಿತು, ಈ ಊರಿನಲ್ಲಿ ಬ್ರಿಟಿಷ್ ಕಾಲದ ಶಾಲೆ ಆ ಶಾಲೆಯ ಕಟ್ಟಡಕ್ಕೆ
ಹೆಬ್ಬಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಜುನಾಥ ಭೀಮಕ್ಕನವರ ಬಣ್ಣದರ್ಪಣಕ್ಕೆ ಚಾಲನೆ ನೀಡಿದರು, ಸದಸ್ಯರಾದ ಸುರೇಶ ಬನ್ನಿಗಿಡದ, ವಿಠ್ಠಲ ಭೋವಿ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಕೃಷ್ಣಾಜಿ ನಾಡಿಗೇರ, ಮೌಲಾಸಾಬ ಕೊಣ್ಣೂರ, ಈರಣ್ಣ ಉಮಣ್ಣವರ ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಕ್ಷರು ತಳವಾರ ಪರಿಸರ ಪ್ರೇಮ ತಂಡದ ಪ್ರಮುಖರು ಮಲ್ಲಿಕಾರ್ಜುನ ತೊದಲಬಾಗಿ ಸರ್ ಧಾರವಾಡ ಪರಿಸರ ಪ್ರೇಮ ತಂಡದ ಅಧ್ಯಕ್ಷರಾದ ಮಲ್ಲಿಕಾರ್ಜುನ ಉಪ್ಪಿನ, ಹುಬ್ಬಳ್ಳಿಯ ಈಶ್ವರಿ ಫೌಂಡೇಶನ್ ಅಧ್ಯಕ್ಷರಾದ ಸಂತೋಷ ವರ್ಣೇಕರ, ಪವರ್ ಆಫ್ ಯುಥ್ಸ ಫೌಂಡೇಷನ್ ಅಧ್ಯಕ್ಷರಾದ ರವಿಚಂದ್ರನ್ ದೊಡ್ಡಿಹಾಳ ಉಪಾಧ್ಯಕ್ಷರಾದ ಶ್ರೀನಿವಾಸ ವಾಲೀಕಾರ, ಮುಖ್ಯ ಶಿಕ್ಷಕಿ ನಾಗರತ್ನ ಅಂಚಟಗೇರಿ ಇವರ ಸಮ್ಮುಖದಲ್ಲಿ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ಹೆಬ್ಬಳ್ಳಿ ಬಣ್ಣದರ್ಪಣ ಮಾಡಲಾಯಿತು, ಇದಕ್ಕೂ ಮೊದಲು ಮಾಜಿ ಪ್ರಧಾನಿ ದಿವಂಗತ ಡಾ, ಮನಮೋಹನ್ ಸಿಂಗ್ ರವರಿಗೆ ಶೃದ್ದಾಂಜಲಿ ಅರ್ಪಿಸಿ, ಶಾಲೆಗೆ ಬಣ್ಣವನ್ನು ಹಚ್ಚಲಾಯಿತು, ಖ್ಯಾತ ಪರಿಸರವಾದಿ ಚಲನಚಿತ್ರ ನಟ ನಿರ್ದೇಶಕ ಸುರೇಶ ಹೆಬ್ಳೀಕರ್ ಕಲಿತ 150 ವರ್ಷಗಳ ಇತಿಹಾಸ ಹೊಂದಿದ ಈ ಶಾಲೆಗೆ ಪರಿಸರ ಪ್ರೇಮ ತಂಡದಿಂದ ಈ ದಿನ ಇಡೀ ದಿನ ಬಣ್ಣದರ್ಪಣ ಮಾಡಲಾಯಿತು,
ಧಾರವಾಡ ಪರಿಸರಪ್ರೇಮ ತಂಡದಿಂದ 20 ಲೀಟರ್
ದಯಾನಂದ ಆಯಟ್ಟಿ 10 ಲೀಟರ್
ಸಂತೋಷ ವರ್ಣೇಕರ 20 ಲೀಟರ ಬಣ್ಣವನ್ನು ಕೊಡಿಸಿದರು.