ಅಥ್ಲೆಟಿಕ್ಸ್ ಕ್ರೀಡಾಕೂಟ -- ಎಂಟು ಪದಕ ಗಳಿಸಿ ಅತ್ಯುತ್ತಮ ಸಾಧನೆಗೈದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು.
ಧಾರವಾಡ 18 : ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯಗಳ 71ನೇ ಅಥ್ಲೆಟಿಕ್ಸ್
ಕ್ರೀಡಾಕೂಟದಲ್ಲಿ ಮರಾಠ ವಿದ್ಯಾಪ್ರಸಾರಕ ಮಂಡಳದ ಛತ್ರಿಪತಿ ಶಿವಾಜಿ ಮಹಾರಾಜ ಪದವಿ ಕಾಲೇಜಿನ ಕ್ರೀಡಾಪಟುಗಳು ಎಂಟು ಪದಕ ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಬರ್ಚಿ ಎಸೆತದಲ್ಲಿ ಸಂಗಪ್ಪ ಡಾಂಗೆ ಪ್ರಥಮ, ಪ್ರತಾಪ್ ಛಲವಾದಿ ಮೂರು ಸಾವಿರ ಮೀಟರ್ ಟ್ರಪಲ್ ಚೆಸ್ ಓಟ ಹಾಗೂ ಐದು ಸಾವಿರ ಮೀಟರ್ ಓಟದಲ್ಲಿ ದ್ವಿತೀಯ, ಅಭಿಷೇಕ ಅಡೆತಡೆ ಓಟದಲ್ಲಿ ದ್ವಿತೀಯ, 4100 ಮೀಟರ್ ರಿಲೇ ಓಟದಲ್ಲಿ ಶಿವಾಜಿ ಜಾದವ್ ಹಾಗೂ ಚೇತನ್ ಜೋಡಳ್ಳಿ ತೃತೀಯ ಸ್ಥಾನ ಪಡೆದಿದ್ದಾರೆ.
ಕೊಟದಲ್ಲಿ ಒಟ್ಟು ಒಂದು ಚಿನ್ನ, ಮೂರು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕ ಗಳಿಸುವ ಮೂಲಕ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಇದಲ್ಲದೇ, ಸಂಗಪ್ಪ ಡಾಂಗೆ ಹಾಗೂ ಪ್ರತಾಪ್ ಛಲವಾದಿ ಯುನಿವರ್ಸಿಟಿ ಬ್ಲೂ ಕೂಡ ಆಗಿ ಹೊರಹೊಮ್ಮಿದ್ದಾರೆ
ಸಾಧನೆಗೈದ ಕ್ರೀಡಾಪಟುಗಳಿಗೆ ಕಾಲೇಜಿನ ಆಡಳಿತ ಮಂಡಳದ ಅಧ್ಯಕ್ಷ ಎಂ.ಎನ್.ಮೋರೆ, ಉಪಾಧ್ಯಕ್ಷ ಯಲ್ಲಪ್ಪ ಚವ್ಹಾಣ, ಕಾರ್ಯಾಧ್ಯಕ್ಷ ಸುಭಾಷ ಶಿಂಧೆ, ಗೌರವ ಕಾರ್ಯದರ್ಶಿ ರಾಜು ಬಿರಜೆನವರ, ಸಹ ಕಾರ್ಯದರ್ಶಿ ಮಲ್ಲೇಶಪ್ಪ ಶಿಂಧೆ, ಕಾಲೇಜು ಸುಧಾರಣಾ ಸಮಿತಿ ಅಧ್ಯಕ್ಷ ಶಿವಾಜಿ ಸೂರ್ವವಂಶಿ ಹಾಗೂ ಮಂಡಳದ ನಿರ್ದೇಶಕರು, ಪ್ರಾಚಾರ್ಯರು, ದೈಹಿಕ ನಿರ್ದೇಶಕರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.