ವೀರಭದ್ರೇಶ್ವರ ರಥೋತ್ಸವ. ಧಾರವಾಡ : ಧಾರವಾಡ ಮೃತ್ಯುಂಜಯ ನಗರದ ಕೊಟ್ಟಣದ ಓಣಿಯ ಶ್ರೀ ವೀರಭದ್ರೇಶ್ವರ ರಥೋತ್ಸವವು
ವಿಜೃಂಭನೆಯಿಂದ ಜರುಗಿತು.ಶಿರಕೋಳ ಶ್ರೀಗಳಾದ ಗುರುಶಿದ್ದೇಶ್ವರ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು.
ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥವು ಕೊಟ್ಟಣದ ಓಣಿ, ಸವದತ್ತಿ ಮುಖ್ಯರಸ್ತೆಯಲ್ಲಿ ವಿವಿಧ ವಾದ್ಯ ಮೇಳಗಳೊಂದಿಗೆ ಯುವಕರು ಹಿರಿಯರು ಜಯಘೋಷ ಹಾಕುತ್ತ ಸಾಗಿದರು.
ಮುತೈದೆಯರು ಶ್ರೀ ವೀರಭದ್ರ ದೇವರನ್ನು ಹೊತ್ತ ರಥಕ್ಕೆ ಆರತಿ ಬೆಳಗಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಈ ಸಂಧರ್ಭದಲ್ಲಿ ವೀರಭದ್ರೇಶ್ವರ ಅಧ್ಯಕ್ಷರಾದ ಅರವಿಂದ ಏಗನಗೌಡರ ಮೃತ್ಯುಂಜಯ ಸಿದ್ನಾಳ, ದೀಪಕ ಇಂಡಿ, ಸಿದ್ದಪ್ಪ ಕರಡಿಗುಡ್ಡ, ಈಶ್ವರ ಮಾಲಗಾರ, ಮಹಾಂತೇಶ ಕುರಟ್ಟಿದೇಸಾಯಿ,ಸುರೇಶ ಅರಕೇರಿ,ಮಹಾಂತೇಶ ಗೊರವನಕೊಳ್ಳ, ಸೋಮಣ್ಣ ಗೋಡಿಕಟ್ಟಿ, ಶಿವಯೋಗಿ ಹಂಚಿನಾಳ,ಶಿವನಗೌಡ ಪಾಟೀಲ, ಗುರುಸಿದ್ದಪ್ಪ ಭಾವಿಕಟ್ಟಿ, ಪ್ರಭು ಕಲ್ಲಾಪುರ, ಬಸವರಾಜ ಹಡಗಲಿ, ಸದಾನಂದ ಗೋಡಿ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು. ಪ್ರಸಾದ ವ್ಯವಸ್ಥೆಯ ಜವಾಬ್ದಾರಿಯನ್ನು ಮೃತ್ಯುಂಜಯ ಯುವಕ ಮಂಡಳದ ಸದಸ್ಯರು ವಹಿಸಿಕೊಂಡಿದ್ದರು. ಇದೆ ಸಂಧರ್ಭದಲ್ಲಿ ಅರವಿಂದ ಏಗನಗೌಡರ ಹಾಗೂ ಕಮಿಟಿಯ ಸದಸ್ಯರುಗಳು ರಥೋತ್ಸವದ ಬಂದೋಬಸ್ತಿಗೆ ಆಗಮಿಸಿ ಶಾಂತಿ ಸುವ್ಯವಸ್ಥೆ ಕಾಪಾಡಿದ ಪೊಲೀಸ್ ಸಿಬ್ಬಂದಿಗೆ ಸನ್ಮಾನಿಸಿದರು.