DHARWAD:8 ರಂದು 2024 ರ-ವೈದ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ.

8 ರಂದು  2024 ರ-ವೈದ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ.



ಧಾರವಾಡ 05 :     ಕಲಾಸ್ಪಂದನ (ರಿ) ಹಾವೇರಿ, ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದೊಂದಿಗೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹಿರೇಬಾಸೂರು ಗ್ರಾಮದ ಕೃಷಿ ಕಾರ್ಮಿಕ ರೈತರು, ಸ್ನೇಹ ಜೀವಿ ದಿ. ಮೌನೇಶಪ್ಪ ಕತ್ತಿ ಅವರ ಹೆಸರಿನಲ್ಲಿ ಕೊಡಮಾಡುವ ವೈದ್ಯಶ್ರೀ -2024 ರ ಪ್ರಶಸ್ತಿ ಪ್ರದಾನ ಸಮಾರಂಭ  ಮತ್ತು ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು  ಬರುವ ದಿ.8 ರ  ಬೆಳಿಗ್ಗೆ 10:30 ಕ್ಕೆ ಹುಬ್ಬಳ್ಳಿಯ ರೇಲ್ವೆ ನಿಲ್ದಾಣದ ಹತ್ತಿರದ ಸ್ವರ್ಣ ಪ್ಯಾರಡೈಸ್ ಹೊಟೆಲ್ ನ ಮಂಥನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀವಿಜಯ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು ಹಾಗೂ  ವೈದ್ಯಶ್ರೀ ಪ್ರಶಸ್ತಿ ಸಂಸ್ಥಾಪಕರಾದ ಮಾರ್ತಾಂಡಪ್ಪ ಕತ್ತಿ ತಿಳಿಸಿದರು.
     ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, 
ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ  ಬಸವರಾಜ ಹೊರಟ್ಟಿ ಮಾಡುವರು. ಅಧ್ಯಕ್ಷತೆಯನ್ನು ಹಾವೇರಿಯ ಕಲಾ ಸ್ಪಂದನದ ಅಧ್ಯಕ್ಷ ಮತ್ತು ಸ್ವರ್ಣ ಗ್ರೂಪ್ ಆಫ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಚಿ. ವ್ಹಿ ಎಸ್ ವ್ಹಿ ಪ್ರಸಾದ್ ವಹಿಸುವರು. ಪ್ರಶಸ್ತಿ ಪ್ರದಾನವನ್ನು ಹು-ಧಾ ಸೆಂಟ್ರಲ್ ನ ಶಾಸಕರಾದ ಮಹೇಶ ಟೆಂಗಿನಕಾಯಿ ನೆರವೇರಿಸುವರು ಎಂದರು.
     ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಎಸ್ ವ್ಹಿ ಸಂಕನೂರ. ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ಮಾಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿನಿರ್ದೇಶಕರಾದ ಕೆ.ಎಚ್ ಚೆನ್ನೂರ, ಡಾ. ಪ್ರಕಾಶ ಸಂಕನೂರ, ಸ್ರೀರೋಗ ಮತ್ತು ಪ್ರಸೂತಿತಜ್ಞರಾದ ಡಾ. ಜಂಬುನಾಥ ಗೌಡ ಆಗಮಿಸುವರು.
2024 ನೇ ಸಾಲಿನ ವೈದ್ಯಶ್ರೀ ಪ್ರಶಸ್ತಿಯನ್ನು ಪುತ್ತೂರಿನ ಶಸ್ತ್ರಚಿಕಿತ್ಸಕರಾದ ಡಾ. ರವಿಶಂಕರ ಪರ್ವಾಜೆ ಹಾಗೂ ಹುಬ್ಬಳ್ಳಿಯ ಕಿಮ್ಸನ ಪ್ಯಾಥಾಲಜಿ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಕವಿತಾ ಏವೂರು ಅವರಿಗೆ 25 ಸಾವಿರ ರೂಪಾಯಿ ನಗದು, ಫಲಕ, ಪ್ರಮಾಣ ಪತ್ರ  ನೀಡಿ ಗೌರವಿಸಲಾಗುವುದು ಎಂದರು.
       ಕಾರ್ಯಕ್ರಮದಲ್ಲಿ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾ. ಸತ್ಯನಾರಾಯಣ ಮಾಸ್ತಮ್ಮನವರ, ಹುಬ್ಬಳ್ಳಿಯ ಕಿಮ್ಸನ ನಿರ್ದೇಶಕ ಡಾ. ಎಸ್ ಎಫ್ ಕಮ್ಮಾರ, ಐಎಮ್‌ಎ ಅಧ್ಯಕ್ಷ ಡಾ. ಪಿ ಎನ್ ಬಿರಾದಾರ, ಹುಬ್ಬಳ್ಳಿಯ ಇಂಜಿನೀಯರಿಂಗ್ ಅಸೋಸಿಯೇಶನ್‌ನ ಅಧ್ಯಕ್ಷ ಡಾ. ದೇವಕಿ ಯೋಗಾನಂದ, ಮಕ್ಕಳ ತಜ್ಞರಾದ ಡಾ ಕವನ ದೇಶಪಾಂಡೆ, ನ್ಯಾಯವಾದಿಗಳಾದ ಅರುಣ ಜೋಶಿ, ಪ್ರಕಾಶ ಉಡಕೇರಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆರ್ ವ್ಹಿ ಚಿನ್ನಿಕಟ್ಟಿ ಉಪಸ್ಥಿತರಿರುವರು ಎಂದರು.
     ಇದೇ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಹಿರಿಯ ವೈದ್ಯ ಡಾ.ವ್ಹಿ.ಬಿ ನಿಟಾಲಿ ಇವರಿಂದ ವೈದ್ಯಕೀಯ ಸಾಹಿತ್ಯ ಚಿಂತನೆಯ ಕುರಿತು ಉಪನ್ಯಾಸ ಮತ್ತು ಗಾಯಕ ಪ್ರೇಮಾನಂದ ಶಿಂಧೆ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ಹಾಗೂ ವಿವಿಧ ನೃತ್ಯ ಕಲಾ ತಂಡಗಳಿಂದ ನೃತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಅಲ್ಲದೇ ಸಾಧಕ ದಂಪತಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಗುವುದು ಎಂದು ತಿಳಿಸಿದರು.            ಪತ್ರಿಕಾಗೋಷ್ಠಿಯಲ್ಲಿ  ಪ್ರತಿಷ್ಠಾನದ ಅಧ್ಯಕ್ಷರಾದ ಎಮ್ ಎಸ್ ಫರಾಸ, ಉಪಾಧ್ಯಕ್ಷ ಸುರೇಶ ಬೆಟಗೇರಿ, ಗಾಯಕ, ಕೋಶಾಧ್ಯಕ್ಷರಾದ ಪ್ರೇಮಾನಂದ ಶಿಂಧೆ, ಕೃಷ್ಣಮೂರ್ತಿ ಗೊಲ್ಲರ ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال