DHARWAD:29 ಕ್ಕೆ ಕಾಸ್ಮಸ್‌ ಕ್ಲಬ್ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ .

29 ಕ್ಕೆ  ಕಾಸ್ಮಸ್‌ ಕ್ಲಬ್ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ .
ಧಾರವಾಡ 26 : ನಗರದ ಪ್ರತಿಷ್ಠಿತ ಕಾಸ್ಮಸ್‌ ಕ್ಲಬ್  ನೂರು ವರ್ಷ ಪೊರೈಸಿದ್ದು ಹೆಮ್ಮೆಯ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ವನ್ನು ಆಯೋಜಿಸಲಾಗುತ್ತಿದೆ ಎಂದು ಕ್ಲಬ್ ಅಧ್ಯಕ್ಷರಾದ ನಿತಿನ ಟಗರಪುರ ತಿಳಿಸಿದರು.

   ಅವರು  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೇ ದಿ. 29 ರಂದು ಬೆಳಿಗ್ಗೆ 10 ಗಂಟೆಗೆ  ಧಾರವಾಡದ  ಜೆ.ಎಸ್.ಎಸ್ ಕಾಲೇಜಿನ ಆವರಣದಲ್ಲಿರುವ ಸನ್ನಿಧಿ ಕಲಾಕ್ಷೇತ್ರದಲ್ಲಿ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಿದೆ . ವಿಧಾನಸಭಾ ಉಪ ನಾಯಕರು , ಶಾಸಕರಾದ  ಅರವಿಂದ ಬೆಲ್ಲದ ಕಾರ್ಯಕ್ರಮ ಉದ್ಘಾಟಿಸುವರು . ಕ್ಲಬ್ ಅಧ್ಯಕ್ಷರಾದ ನಿತಿನ ಟಗರಪುರ ಅಧ್ಯಕ್ಷತೆ ವಹಿಸುವರು ಎಂದರು.

    ಕಲಕೇರಿ ಸಂಗೀತ ವಿದ್ಯಾಲಯದ ಮಕ್ಕಳಿಂದ ಸ್ವಾಗತ ಗೀತೆ ಪ್ರಸ್ತುತಿ ಪಡಿಸಲಿದ್ದು. ವೇದಿಕೆ ಕಾರ್ಯಕ್ರಮ ನಂತರ , ಖ್ಯಾತ ಗಾಯಕಿ ಶ್ರೀಮತಿ ಸಂಗೀತಾ ಕಟ್ಟಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದರು.

    ಯಾವುದೇ  ಒಂದು ಸಂಘ - ಸಂಸ್ಥೆ ನೂರು ವರ್ಷಗಳನ್ನು ಪೂರೈಸುವುದು ಸಾಮಾನ್ಯದ ಸಂಗತಿ ಏನಲ್ಲ . ಆಗು - ಹೋಗುಗಳ ಮಧ್ಯೆ  ನೂರು ವರ್ಷಗಳ ಕಾರ್ಯ ಉಳಿದು ಸಮಾಜದಲ್ಲಿ ತನ್ನದೇ ಬ್ರಾಂಡ್ ಬೆಳೆಸಿಕೊಂಡಿರುವ ಸಂಖ್ಯೆಗಳ ಪೈಕಿ ಶತಮಾನದ ಸಂಭ್ರಮದಲ್ಲಿರುವ ಕಾಸ್ಮಸ್ ಕ್ಲಬ್ ಮೊದಲ ಸಾಲಿನಲ್ಲಿ ನಿಲ್ಲುತ್ತದೆ.           

     ಸಾಮಾಜಿಕ , ಮನರಂಜನ ಮತ್ತು ಕ್ರೀಡಾ ತಾಣವಾಗಿರುವ ಕಾಸ್ಮಸ್‌ ಕ್ಲಬ್ ನೂರು ವಸಂತಗಳನ್ನು ಕಂಡಿದ್ದು ಸಂತಸದ ವಿಷಯವಾಗಿದೆ. ಶತಮಾನೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

     ರಾವ್ ಬಹಾದ್ದೂರ  ಗೋಪಾಲ ಅನಂತಗಿರಿ ಅವರ ಪ್ರೇರಣೆಯಿಂದ ಈ ಸಂಸ್ಥೆ 1924 ನೇ ಇಸ್ವಿಯಲ್ಲಿ ಆರಂಭವಾಗಿದೆ . ಭವಿಷ್ಯದಲ್ಲಿ ತನ್ನ ಸಾಮಾಜಿಕ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಕ್ಲಬ್ ಹೆಮ್ಮರವಾಗಿ ಬೆಳೆಯಲಿ ಎಂಬ ಆಶಯದೊಂದಿಗೆ ಅನಂತಗಿರಿ ಅವರು , ಹಳೆಯ ಬಿಲಿಯರ್ಡ್ಸ್ ಕಟ್ಟಡವನ್ನು ಕೊಡುಗೆಯಾಗಿ ನೀಡಿದ್ದಾರೆ . ಪ್ರಸ್ತುತ 123 ಜನ ಸದಸ್ಯರು ಇದು , ಬರೀ ಮನರಂಜನೆ ಮಾತ್ರವಲ್ಲದೇ ಕ್ಲಬ್ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ .

     ಕ್ಲಬ್ ಆವರಣದಲ್ಲಿ ಕ್ರೀಡಾ ಸಂಕಿರ್ಣವಿದ್ದು , ಟೇಬಲ್ ಟೆನ್ನಿಸ್ , ಸ್ನೂಕರ್, ಬಿಲಿಯಾರ್ಡ ಹಾಗೂ ಜಿಮ್ ಒಳಗೊಂಡಿದೆ . ನಿತ್ಯ ಹತ್ತಾರು ವಿದ್ಯಾರ್ಥಿಗಳು , ಸದಸ್ಯರು ಈ ಕ್ರೀಡಾ ಸಂಕೀರ್ಣದಲ್ಲಿ ತರಬೇತಿ ಪಡೆಯುತ್ತಿದ್ದಾರೆ . ಕ್ಲಬ್ ನಲ್ಲಿ ತರಬೇತಿ ಪಡೆದು ಆಟವಾಡಿ ಅನೇಕ ಆಟಗಾರರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಹೆಮ್ಮೆಯ ವಿಷಯವಾಗಿದೆ.

      ಪತ್ರಿಕಾಗೋಷ್ಠಿಯಲ್ಲಿ ಕ್ಲಬ್ ಉಪಾಧ್ಯಕ್ಷರಾದ ಎಮ್.ಎಮ್.ಹಿರೇಮಠ, ಗೌರವ ಕಾರ್ಯದರ್ಶಿ ಅಶೋಕ ಎಸ್.ಹಿರೇಮಠ, ಜಂಟಿ ಕಾರ್ಯದರ್ಶಿ ಎಸ್.ಎಮ್.ರುದ್ರಸ್ವಾಮಿ, ಖಂಜಾಂಚಿ ಎಸ್.ಬಿ.ಕಿತ್ತೂರ ಕಾರ್ಯಕಾರಿ ಸಮಿತಿಯ ಸದಸ್ಯರಾದ ವಿಜಯ ಸುಣಗಾರ, ಎಮ್.ಎಸ್.ಹಾಲಭಾವಿ, ಎ.ಎಸ್.ಗುಡ್ಡದಮಠ, ಸಿ.ಎಚ್.ಜೋಗಿಹಳ್ಳಿ, ಬಿ.ಎನ್.ಜಮಖಂಡಿ, ಎಚ್.ಎಫ್.ಹೆಬ್ಬಾಳ ಉಪಸ್ಥಿತರಿದ್ದರು.

ನವೀನ ಹಳೆಯದು

نموذج الاتصال