DHARWAD:15 ಕ್ಕೆ ಬೃಹತ್ ಮಹಿಳಾ ಉದ್ಯೋಗ ಮೇಳ .

15 ಕ್ಕೆ ಬೃಹತ್ ಮಹಿಳಾ ಉದ್ಯೋಗ ಮೇಳ .

    ಧಾರವಾಡ 11 : ಜನತಾ ಶಿಕ್ಷಣ ಸಮಿತಿ ಹಾಗೂ ರ‍್ಯಾಪಿಡ್ ಸಂಸ್ಥೆ ಸಹಯೋಗದಲ್ಲಿ 'ಬೃಹತ್ ಮಹಿಳಾ ಉದ್ಯೋಗ ಮೇಳ' ಡಿ.೧೫ ರಂದು ಜೆಎಸ್ಸೆಸ್ ಆವರಣದಲ್ಲಿ ಹಮ್ಮಿಕೊಂಡಿದೆ ಎಂದು  ಜೆ.ಎಸ್.ಎಸ್ ಕಾರ್ಯದರ್ಶಿ ಡಾ.ಅಜಿತ ಪ್ರಸಾದ ಮಾಹಿತಿ ನೀಡಿದರು. 
     ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಉಭಯ ಸಂಸ್ಥೆಗಳು ಜಂಟಿಯಾಗಿ ನಡೆಸಿರುವ ಮೂರು ಉದ್ಯೋಗ ಮೇಳ ಯಶಸ್ವಿಯಾಗಿವೆ. ಈ ಮೇಳದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಮಹಿಳೆಯರು ಉದ್ಯೋಗ ಪಡೆದಿದ್ದಾಗಿ ತಿಳಿಸಿದರು. 
 ‌‌‌ ಇದೀಗ ನಾಲ್ಕನೇ ಉದ್ಯೋಗ ಮೇಳಕ್ಕೆ ಅಣಿಯಾಗಿದ್ದು, ಬೆಂಗಳೂರು, ಹುಬ್ಬಳ್ಳಿ, ಧಾರವಾಡ ಸೇರಿ ವಿವಿಧ ಭಾಗಗಳಿಂದ ಸುಮಾರು ೪೦ಕ್ಕೂ ಅಧಿಕ ಕಂಪನಿಗಳು ಪಾಲ್ಗೊಂಡು ಅಂದಾಜು 5000 ಕ್ಕೂ ಹೆಚ್ಚು ಹುದ್ದೆಗಳಿಗೆ ಸಂದರ್ಶನ ನಡೆಸಲಿವೆ ಎಂದರು. 
    ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಡಿಪ್ಲೋಮಾ, ಸ್ನಾತಕೋತ್ತರ ಪದವಿ ಮುಗಿಸಿದ 18 ರಿಂದ 45 ವರ್ಷದೊಳಗಿನ ಮಹಿಳೆಯರು ಮೇಳದಲ್ಲಿ ಪಾಲ್ಗೊಳ್ಳಬಹುದು. ಈಗಾಗಲೇ 500 ಜನ ಮಹಿಳೆಯರು ಆನ್‌ಲೈನ್ ನೋಂದಣಿ ಮಾಡಿಸಿದ್ದಾಗಿ ತಿಳಿಸಿದರು.
     ರ‍್ಯಾಪಿಡ್ ಸಂಸ್ಥೆಯ ಸಿಇಓ ಮಾಳವಿಕಾ ಕಡಕೋಳ ಮಾತನಾಡಿ, ಪ್ರಸಕ್ತ ಮೇಳದಲ್ಲಿ ವಿಕಲಚೇತನರಿಗೆ ಉದ್ಯೋಗ ಉಂಟು. ಅವರಿಗಾಗಿ 12 ಕಂಪನಿ ಸಂದರ್ಶನ ನಡೆಸಲಿವೆ. ಈ ಮೇಳವನ್ನು ಸದ್ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 
   ‍ಉತ್ಸವ ಸಭಾಂಗಣದಲ್ಲಿ ಡಿ.15 ರಂದು ಬೆಳಿಗ್ಗೆ 8:30 ಕ್ಕೆ ಮೇಳಕ್ಕೆ ಕಾರ್ಯದರ್ಶಿ ಡಾ.ಅಜಿತ ಪ್ರಸಾದ ಉದ್ಘಾಟಿಸಲಿದ್ದು, ಕಾನೂನು ವಿವಿ ಕುಲಸಚಿವೆ ಅನುರಾಧಾ ವಸ್ತ್ರದ, ‌‌ ನಬಾರ್ಡ್ನ ಮಯೂರ ಕಾಂಬಳೆ ಅತಿಥಿಗಳಾಗಿ ಪಾಲ್ಗೊಳ್ಳುವುದಾಗಿ ತಿಳಿಸಿದರು. 
   ರ‍್ಯಾಪಿಡ್ ಸಂಸ್ಥೆಯ ಕಾರ್ಯದರ್ಶಿ ವಾಣಿಶ್ರೀ ಪುರೋಹಿತ ಅಧ್ಯಕ್ಷತೆ ವಹಿಸಲಿದ್ದು, ಜೆಎಸ್ಸೆಸ್ ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾದ್ಯೆ ಸೇರಿ  ಅನೇಕರು ಪಾಲ್ಗೊಳ್ಳುವರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದರು.
   ‌ಪತ್ರಿಕಾಗೋಷ್ಟಿಯಲ್ಲಿ ಜೆ.ಎಸ್.ಎಸ್ ಐ.ಟಿ
ಐ ಪ್ರಾಚಾರ್ಯರಾದ ಮಹಾವೀರ ಉಪಾದ್ಯ,  ರ‍್ಯಾಪಿಡ್ ಸಂಸ್ಥೆಯ ಸಿಇಓ ಮಾಳವಿಕಾ ಕಡಕೋಳ ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال