DHARWAD :8 ಕ್ಕೆ. ಪ್ರಥಮ ಕಥಾ ಸಂಕಲನ ಸತ್ಯಂ ಶಿವಂ ಸೌಂದರ್ಯಂ ಬಿಡುಗಡೆಯ ಸಮಾರಂಭ.

8 ಕ್ಕೆ. ಪ್ರಥಮ ಕಥಾ ಸಂಕಲನ ಸತ್ಯಂ ಶಿವಂ ಸೌಂದರ್ಯಂ ಬಿಡುಗಡೆಯ ಸಮಾರಂಭ.
ಧಾರವಾಡ 06 : 
 ಕಥಾ ಸಂಕಲನ ದಿ 8 ರವಿವಾರದಂದು ಸಂಜೆ 05 ಗಂಟೆಗೆ ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾ ಭವನದಲ್ಲಿ ಬಿಡುಗಡೆಯಾಗಲಿದೆ.   ಶ್ರೀನಿವಾಸ ವಾಡಪ್ಪಿ ಪುಸ್ತಕ ಬಿಡುಗಡೆ ಮಾಡುವರು, ಮಾಲತಿ ಮುದಕವಿ ಮತ್ತು
 ಎಂ ಎಸ್ ಕೃಷ್ಣಮೂರ್ತಿ ಪುಸ್ತಕ ಪರಿಚಯ ,  ಡಾ.ಕೃಷ್ಣ ಕಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸುತ್ತಾರೆ ಎಂದು         ಧಾರವಾಡದ ಹೊಸ ಕಥೆಗಾರ   ಅನಂತ ಕೊಟಬಾಗಿ ತಿಳಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 
ಬಾಲ್ಯದಿಂದ ವೈದಿಕ ಪರಂಪರೆಯಲ್ಲಿ ಬೆಳೆದು ಬಂದ ನಾನು, ಹಳೆ ಧಾರವಾಡದಲ್ಲಿ ಹುಟ್ಟಿ ಬೆಳೆದು ಬಂದವನು ಹಿಗಾಗಿ ಧಾರವಾಡದ ಜನಜೀವನ, ಸಂಸ್ಕೃತಿಯನ್ನು ಕಂಡುಂಡ ವ್ಯಕ್ತಿ.  ಮನೆತನದ ಬಳುವಳಿಯಾದ ವೇದಾಧ್ಯಯನ ಮಾಡಿ, ಪೌರೋಹಿತ್ಯವನ್ನು ಪ್ರವೃತ್ತಿಯನ್ನಾಗಿ ಮಾಡಿಕೊಂಡು, ಅದರಲ್ಲಿರುವ ಅತ್ಯುತ್ತಮ ಅಂಶಗಳನ್ನು ಕಥೆಗಳಲ್ಲಿ ಬಳಸಿಕೊಂಡಿದ್ದೇನೆ.  ಕನ್ನಡ ಷಟ್ಪದಿಗಳ ಓದು, ರಚನೆಗೆ ಒತ್ತು ಕೊಟ್ಟು, ಅದನ್ನು ಪರಂಪರೆಯಿಂದ ಬಿಡಿಸಲು ಪ್ರಯೋಗ ಮತ್ತು ಪ್ರಯತ್ನ ಮಾಡುತ್ತಿದ್ದೇನೆ.  ಹಿಂದಿ ಚಿತ್ರಗೀತೆಗಳ ಮುಖಾಂತರ ಉರ್ದೂ ಸಾಹಿತ್ಯದ ಪರಿಚಯವಾದ ನನಗೆ ಗಝಲ್ ಬರೆಯುವ ಹವ್ಯಾಸವೂ ಇದೆ ಸಾಧ್ಯವಿದ್ದಲ್ಲೆಲ್ಲಾ ಕಥೆಗಳಲ್ಲಿ ಸೂಕ್ತವಾಗಿ ಅವುಗಳನ್ನು ಬಳಿಸಿದ್ದೇನೆ ಎಂದರು.      ಪದವಿ ನಂತರ ಮೆಡಿಕಲ್ ಟ್ರಾನ್ಸಕ್ರಿಪಶನ್  ಉದ್ಯೋಗದಲ್ಲಿ ತೊಡಗಿಕೊಂಡಿದ್ದೇನೆ.
ನನ್ನ ಜೀವನದಲ್ಲಿ ಆಗಿಹೋದ, ನೋಡಿದ, ಕೇಳಿದ ಘಟನೆಗಳನ್ನು ಕಥೆಗಳಲ್ಲಿ ಬಳಸಿಕೊಂಡಿದ್ದೇನೆ.  ಕಥೆಗಳು 'ಹಳೆ ಬೇರು ಹೊಸ ಚಿಗುರಿನ' ರೂಪಗಳಾಗಿವೆ ಎಂದರು.       ನಮ್ಮ ಸಮಾಜದಲ್ಲಿಯ ಸಮಸ್ಯೆಗಳನ್ನು ಆಯ್ಕೆ ಮಾಡಿಕೊಂಡು ಅವಕ್ಕೆ ಪರಿಹಾರ ಸೂಚಿಸುವ ಘಟನೆಗಳು ಕಥೆಯಲ್ಲಿ ಅಡಕವಾಗಿವೆ.

ಉತ್ತರ ಕರ್ನಾಟಕದ ಬ್ರಾಹ್ಮಣರ ಆಡು ಭಾಷೆಯನ್ನು ಕಥೆಗಳಲ್ಲಿ ಪರಿಪೂರ್ಣವಾಗಿ ಬಳಸಿಕೊಂಡಿದ್ದೇನೆ.  ಕಥೆಗಳಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿ, ಜನಜೀವನ ಅಡಕವಾಗಿವೆ.  ವಂಶಿ ಪ್ರಕಾಶನ ನನ್ನ ಮೊದಲ ಕಥಾ ಸಂಕಲನ ಪ್ರಕಟಿಸಿದೆ.  ಇದರಲ್ಲಿ ಆರು ಕಥೆಗಳಿವೆ.  ನನ್ನ ವೃತ್ತಿ ಜೀವನದ ಅನುಭವ ಕಥೆಗಳಲ್ಲಿ ಬಹಳ ಕಡೆ ಇದೆ ಎಂದು ತಿಳಸಿದರು.
ನವೀನ ಹಳೆಯದು

نموذج الاتصال