ಸರ್ಕಾರಿ ಶಾಲೆಗೆ 10 ಲಕ್ಷ ಮೌಲ್ಯದ ಕಲಿಕೋಪಕರಣಗಳ ದೇಣಿಗೆ.
ಧಾರವಾಡ : ಇಲ್ಲಿಯ ಎತ್ತನಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಹಿ ಎಕ್ಸ್ಪೋರ್ಟ್ ಪ್ರೈವೇಟ್ ಲಿಮಿಟೆಡ್ ದವರು ಶಾಲೆಗೆ ಆಗಮಿಸಿ 3 ಲಕ್ಷ ರೂಪಾಯಿ ಮೌಲ್ಯದ ಪಿಠೋಪಕರಣಗಳು ಮತ್ತು ಕಲಿಕೋಪಕರಣಗಳನ್ನು ದೇಣಿಗೆ ನೀಡಿದರು. 7 ಲಕ್ಷ ರೂಪಾಯಿ ಮೌಲ್ಯದ ವಿಜ್ಞಾನ ಪ್ರಯೋಗಾಲಯವನ್ನು ಮಂಜೂರು ಮಾಡಿದರು.ಮತ್ತು ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಕಟ್ಟಡ ಅಭಿವೃದ್ಧಿ ಮತ್ತು ಶಾಲಾ ಆವರಣ ಗೋಡೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.
ಘಟಕ 54 ರ ಎಜಿ ಆರ್ ಎಚ್ ಆರ್ ಪಾಸ್ಕಲ್ ಅಲೆಕ್ಸ್ ಲೋಪೇಜ್ ಹಾಗೂ
ವ್ಯವಸ್ಥಾಪಕಿ ರೇಣುಕಾ ಗೋಡಿ ,
ಧನಂಜಯ್ ಕುಮಾರ್ , ನಾಗಯ್ಯ CSR ಟೀಮ್ ಆಗಮಿಸಿದ್ದರು.
ಕಾರ್ಪೊರೇಟರ್ ಸೂರವ್ವ ಪಾಟೀಲ, ಎಸ್ ಡಿಎಂ ಸಿ ಅಧ್ಯಕ್ಷರಾದ ಶಂಕರ ಹಾರಿಕೊಪ್ಪ ಹಾಗೂ ಸದಸ್ಯರು , ಬಿ ಆರ್ ಪಿ ಗಳಾದ ವಿಜಯಲಕ್ಷ್ಮಿ ಯತ್ನಳ್ಳಿ, ಸಿ ಆರ್ ಪಿ ಗಳಾದ ವಿಜಯಲಕ್ಷ್ಮಿ ಕಮ್ಮಾರ್, ಐಸಿ ಏ ಆರ್ ಸಂಸ್ಥೆಯ ಅಧಿಕಾರಿ ನಾಗರತ್ನ ಬಿರಾದಾರ, ಶಿಕ್ಷಣ ಪ್ರೇಮಿ ವಿಠ್ಠಲ ಗುಡಗೂರ, ಸಿದ್ದಣ್ಣ ಕುರಬೆಟ್ಟ, ಮಲ್ಲಿಕಾರ್ಜುನ ಪಾಟೀಲ, ಚಾಂಗದೇವ ಪರಸಣ್ಣವರ , ಜಿಲ್ಲಾ ಪರಿಸರ ಅಭಿಯಾನ ಸಮಿತಿಯ ಅಧ್ಯಕ್ಷ ಜಯಶ್ರೀ ಗೌಳಿಯವರ,ಮಕ್ಕಳು ಪಾಲಕ ಪೋಷಕರು , ಶಾಲೆಯ ಪ್ರಧಾನ ಗುರುಗಳು ಮತ್ತು ಶಿಕ್ಷಕ ಬಳಗ, ಮಕ್ಕಳು ಹಾಜರಿದ್ದು ಕಲಿಕೋಪಕರಣಗಳ ಹಸ್ತಾಂತರ ಭೂಮಿ ಪೂಜೆ ಮತ್ತು ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಪ್ರಧಾನ ಗುರುಮತೆಯರಾದ ಲಲಿತಾ ಕೆ ಪಾಟೀಲ ಸ್ವಾಗತಿಸಿದರು, ಜ್ಯೋತಿ ಚೌಗಲೆ ಕಾರ್ಯಕ್ರಮ ನಿರೂಪಿಸಿದರು. ಬಿ ದೇಸಾಯಿ ವಂದಿಸಿದರು.