ಹೋರಾಟ ಹತ್ತಿಕ್ಕುವ ಕುತಂತ್ರ ಮಾಡಿದ್ದರಿಂದಲೇ ರಾದ್ಧಾಂತ: ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಕಿಡಿ
ಹುಬ್ಬಳ್ಳಿ: 2ಎ ಮೀಸಲಾತಿಗಾಗಿ ನಡೆಯುತ್ತಿದ್ದ ಹೋರಾಟವನ್ನ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹತ್ತಿಕ್ಕುವ ಕುತಂತ್ರ ಮಾಡಿದ್ದರಿಂದಲೇ ಇಷ್ಟೊಂದು ರಾದ್ಧಾಂತ ನಡೆದಿದೆ ಎಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಕಿಡಿಕಾರಿದರು.
ಶ್ರೀಗಳ ನೇತೃತ್ವದಲ್ಲಿ ನಡೆದ ಹೋರಾಟ ಶಾಂತಿಯುತವಾಗಿ ನಡೆದಿತ್ತು. ಆದರೆ, ವ್ಯವಸ್ಥಿತವಾಗಿ ಹೋರಾಟವನ್ನ ಮಣಿಸುವ ಯತ್ನ ನಡೆಯಿತ್ತಲ್ಲದೇ, ಹಲವರ ಮೇಲೆ ಗಂಭೀರವಾಗಿ ಹಲ್ಲೆ ಮಾಡಲಾಗಿದೆ ಎಂದರು.
ರಾಜ್ಯ ಸರಕಾರದ ಈ ಕ್ರಮದಿಂದ ಹೋರಾಟ ನಿಲ್ಲೋದಿಲ್ಲ. ಇದಕ್ಕೆ ತಕ್ಕ ಪಾಠವನ್ನ ಸಮಾಜ ಕಲಿಸಲಿದೆ ಎಂದು ಎಚ್ಚರಿಸಿದ ಮಾಜಿ ಸಚಿವರು, ನಾಳೆ ನಡೆಯುವ ಹೋರಾಟದಲ್ಲಿ ಭಾಗವಹಿಸುವುದಾಗಿ ಹೇಳಿದರು.
ಬಿಜೆಪಿ ಸರಕಾರ ಆಡಳಿತದಲ್ಲಿ ಇದ್ದಾಗಲೂ ಹೋರಾಟ ನಡೆದಿದೆ. ಲಕ್ಷಾಂತರ ಜನ ಸೇರಿದ್ದರೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗಿತ್ತು. ಆದರೆ, ನಿನ್ನೆಯ ವಿಚಾರ ಮನಸ್ಸಿಗೆ ನೋವನ್ನುಂಟು ಮಾಡಿದಿಯಲ್ಲದೇ, ಮುಖ್ಯಮಂತ್ರಿ ಅವರ ಭಾವನೆ ಏನು ಎಂಬುದು ಬಹಿರಂಗಗೊಂಡಿದೆ ಎಂದರು.