ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ
ಧಾರವಾಡ :- ಸಮಾಜದ ಕೆಳಸ್ತರದ ಜನರ ಹಿತಾಸಕ್ತಿಯನ್ನು ಎತ್ತಿ ಹಿಡಿದ ಮಹಾತ್ಮಾ ಗಾಂಧಿಜಿ ನ್ಯಾಯಪರ ನಿಲುವಿಗೆ ಹಿಡಿದ ಕನ್ನಡಿಯಾಗಿದ್ದು ಅವರ ನಡೆ-ನುಡಿ ಮಾದರಿಯಾಗಿ ನಿಲ್ಲುತ್ತದೆ ಎಂದು ಕ.ವಿ.ವಿ ಸಮಾಜ ವಿಜ್ಞಾನ ವಿಭಾಗ ಡೀನ ಡಾ. ಜಯಶ್ರೀ ಅಭಿಪ್ರಾಯಪಟ್ಟರು.
ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಗುರುವಾರದಂದು ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನಾಟಕ ವಿಶ್ವವಿದ್ಯಾಲಯ ಗಾಂಧಿ ಅಧ್ಯಯನ ವಿಭಾಗ, ಗಾಂಧಿ ಶಾಂತಿ ಪ್ರತಿಷ್ಟಾನ ಕೇಂದ್ರ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಭಾರತ ಏಕತಾ ಆಂದೋಲನ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಂಗೀತ, ಭಜನೆ, ಚಿಂತನ ಮಂಥನ ಗೋಷ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭ್ರಷ್ಟಾಚಾರ ವ್ಯಾಪಕವಾಗಿರುವ ಇಂದಿನ ಸಂದರ್ಭದಲ್ಲಿ ಅವರು ವ್ಯಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ ತೋರಿದ ಸ್ವಚ್ಛ ನಡೆ-ನುಡಿ ಎಲ್ಲ ಕಾಲಕ್ಕೂ ಮಾದರಿಯಾಗಿ ನಿಲ್ಲುವಂಥದ್ದು ಎಂದರು.
ಸಾಹಿತಿ ರಂಜಾನ್ ದರ್ಗಾ ಮಾತನಾಡಿ, ಶತಮಾನದ ಹಿಂದೆ ಉತ್ತರ ಕರ್ನಾಟಕದ ಬೆಳಗಾವಿಗೆ ಭಾರತೀಯ ರಾಷ್ರ್ಟೀಯ ಕಾಂಗ್ರೆಸ್ಸಿನ ಅಧಿವೇಶನ ಸಂಘಟಿಸುವ ಅವಕಾಶ ಸಿಕ್ಕಿದ್ದು ನಮಗೆ ಸಂತಸದ ವಿಷಯವಾಗಿದೆ. ಕರ್ನಾಟಕ ಬಗ್ಗೆ ಗಾಂಧಿಜಿಯವರಿಗೆ ಅಪಾರ ಗೌರವ ಇತ್ತು ಎಂದರು.
ಗಾAಧೀ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಶಿವಾನಂದ ಶೆಟ್ಟರ ಅಧ್ಯಕ್ಷತೆವಹಿಸಿ ಮಾತನಾಡಿ, ಬೆಳಗಾವಿ ಕಾಂಗ್ರೇಸ್ ಅಧೀವೇಶನದ ಭಾಷಣ ಅವರ ಪಾರದರ್ಶಕತೆ, ಪ್ರಾಮಾಣಿಕತೆ, ಅವರು ಕೊಡುತ್ತಿದ್ದ ಮಹತ್ವ, ಪಕ್ಷ ಹಾಗೂ ದೇಶವಾಸಿಗಳಲ್ಲಿ ಒಗ್ಗಟ್ಟು ಮೂಡಿಸುವ ಪ್ರಯತ್ನಗಳು ಎಲ್ಲ ಕಾಲಕ್ಕೂ ಸುಸಂಗತ ಉದಾಹರಣೆಗಳಾಗಿ ನಿಲ್ಲಬಲ್ಲವೆಂದರು.
ಮನೋಜ ಪಾಟೀಲ್, ಡಾ ಸಂಜೀವ ಕುಲಕರ್ಣಿ, ಶಂಕರ್ ಹಲಗತ್ತಿ, ಡಾ. ಶರಣಮ್ಮ ಗೋರೇಬಾಳ್, ಡಾ. ಶಂಭು ಹೆಗಡಾಳ, ಡಾ. ವೀಣಾ ಎಲಿಗಾರ್, ಮಹಾದೇವ ಹೊರಟ್ಟಿ, ಡಾ. ಲಿಂಗರಾಜ ಅಂಗಡಿ ಉಪಸ್ಥಿತರಿದ್ದರು. ಸಮಾರಂಭದ ನಂತರ ಕ.ವಿ.ವಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಹಾಗೂ ಶ್ರೀಮತಿ ಪ್ರೇಮಕ್ಕ ಹೊರಟ್ಟಿ, ಶ್ರೀಮತಿ ಪ್ರೇಮಕ್ಕ ಹಲಕಿ, ಅಂಜಲೀನಾ ಗ್ರೇಗರಿ, ರಾಮಕುಮಾರ ಶಿಂಧೆ ಅವರಿಂದ ಗಾಂಧೀಜಿ ಭಜನೆ ಮತ್ತು ದೇಶಭಕ್ತಿ ಗೀತೆಗಳು ಜರುಗಿದವು. ಶ್ರೀಧರ ಕುಲಕರ್ಣಿ ಸ್ವಾಗತಿಸಿದರು, ಸುಧಾ ಕಬ್ಬೂರ ನಿರೂಪಿಸಿದರು, ಮಂಜುನಾಥ ಮೊಹರೆ ವಂದಿಸಿದರು.