SHIRHATTI:ಅಲಗಿಲವಾಡ ಶಾಲೆಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆ ಕಾರ್ಯಕ್ರಮ ಆಯೋಜನೆ*

SHIRHATTI:ಅಲಗಿಲವಾಡ ಶಾಲೆಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆ ಕಾರ್ಯಕ್ರಮ ಆಯೋಜನೆ.
ಗದಗ : ಶಿರಹಟ್ಟಿ ತಾಲೂಕಿನ ಅಲಗಿಲವಾಡ ಶಾಲೆಯಲ್ಲಿ ಮಾನ್ಯ ನಿರ್ದೇಶಕರು ಸಾಮಾಜಿಕ ಲೆಕ್ಕ ಪರಿಶೋಧನೆ ನಿರ್ದೇಶನಾಲಯ ಬೆಂಗಳೂರು ಹಾಗೂ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಗದಗ ಇವರ ಆದೇಶದಂತೆ ಸಾಮಾಜಿಕ ಲೆಕ್ಕ ಪರಿಶೋಧನೆ ಕಾರ್ಯ ಆಯೋಜಿಸಲಾಗಿದ್ದು ಪ್ರಸಕ್ತ ವರ್ಷ ಗದಗ ಜಿಲ್ಲೆಯ 202 ಶಾಲೆಗಳಲ್ಲಿ 15/07/2024 ರಿಂದ 28/02/2025 ಗೆ ಸಾಮಾಜಿಕ ಲೆಕ್ಕಪರಿಶೋಧನೆ ಕಾರ್ಯ ನಡೆಯಲಿದೆ ಈ ಕಾರ್ಯದ ಮುಖ್ಯ ಉದ್ದೇಶ ಶಾಲೆಯ ಕಾರ್ಯಕ್ಷಮತೆ ಹೆಚ್ಚಿಸಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಂತದ್ದಾಗಿದೆ ಈ ಕಾರ್ಯ ಅಲಗಿಲವಾಡ ಶಾಲೆಯಲ್ಲಿ 16/12/2024 ರಿಂದ 19/12/2024 ರವರೆಗೆ ನಾಲ್ಕು ದಿನಗಳ ಕಾಲ ನಡೆದಿದ್ದು ಶಿರಹಟ್ಟಿ ತಾಲ್ಲೂಕಿನ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ಮಲ್ಲಿಕಾರ್ಜುನ ಪಾಟೀಲ ಇವರ ಅಧ್ಯಕ್ಷತೆಯಲ್ಲಿ ಹಾಗೂ ವ್ಯವಸ್ಥಾಪಕರಾದ  ತಾವರೆಪ್ಪ ಲಮಾಣಿ ಇವರ ನೇತೃತ್ವದಲ್ಲಿ ನಡೆಸಲಾಗಿದೆ ಈ ನಾಲ್ಕು ದಿನಗಳಲ್ಲಿ ಶಾಲೆಯ ಮೂಲಭೂತ ಸೌಲಭ್ಯಗಳ ಪರಶೀಲನೆ , ಮಕ್ಕಳ ಕಲಿಕಾ ಗುಣಮಟ್ಟ ,  ಅನುಷ್ಠಾನಗೊಂಡ ಯೋಜನೆಗಳ ಸಾಮಾಜಿಕ ಪರಿಶೋಧನೆಯ ಸಂಪೂರ್ಣ ಪ್ರಗತಿಯನ್ನು ಪರಿಶೀಲಿಸಿ ಮಕ್ಕಳ ಹಾಗೂ ಶಾಲೆಯ ಶೈಕ್ಷಣಿಕ ಪ್ರಗತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ .

ಈ ಕಾರ್ಯಕ್ರಮದಲ್ಲಿ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ಮಲ್ಲಿಕಾರ್ಜುನ ಪಾಟೀಲ ಈ ಕಾರ್ಯದ ವ್ಯವಸ್ಥಾಪಕರಾದ ತಾವರೆಪ್ಪ ಲಮಾಣಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮರಿಯಪ್ಪ ದೊಡ್ಡಮನಿ , ಗ್ರಾಮಪಂಚಾಯತಿ ಸದಸ್ಯರಾದ ಪ್ರೇಮಯ್ಯ ಬಾಳಿಹಳ್ಳಿಮಠ , ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಕಾಂತ ಪಾಟೀಲ ,ಪ್ರಧಾನ ಗುರುಗಳಾದ ಹಾಲೇಶ ಜಕ್ಕಲಿ ಶಿಕ್ಷಕರಾದ ನೇಮೇಶ ಯರಗುಪ್ಪಿ ಪಾಲಕರಾದ ಇಮಾಮಸಾಬ ನದಾಫ , ರಾಮಣ್ಣ ಬೆಳ್ಳಟ್ಟಿ , ದಾವಲಸಾಬ ಟಪಾಲನವರ , ಫಾತೀಮಾ ದೊಡ್ಡಮನಿ ,  ಒಳಗೊಂಡಂತೆ ಮಕ್ಕಳ ಪಾಲಕರು ಗ್ರಾಮದ ಗುರುಹಿರಿಯರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮಕ್ಕಳು ಭಾಗವಹಿಸಿ ಯಶಸ್ವಿಗೊಳಿಸಿದರು.

ನವೀನ ಹಳೆಯದು

نموذج الاتصال