ಅಖಿಲ ಕರ್ನಾಟಕ ಭೋವಿ ವಡ್ಡರ್ ವೇದಿಕೆಯ ಕಾರ್ಯಾಧ್ಯಕ್ಷರಾಗಿ ಮಂಜುನಾಥ್ ಹಿರೇಮನಿ ಆಯ್ಕೆ.
ಧಾರವಾಡ :ಅಖಿಲ ಕರ್ನಾಟಕ ಭೋವಿ ವಡ್ಡರ್ ಯುವ ವೇದಿಕೆ ಕ್ರಾಂತಿ (ರಿ ) ಅಖಿಲ ಕರ್ನಾಟಕ ಭೋವಿ ವಡ್ಡರ ಕಲ್ಲು ಬಂಡೆ ಮಣ್ಣು ಮತ್ತು ಕಟ್ಟಡ ಕಾರ್ಮಿಕರ ವೇದಿಕೆ (ರಿ ) ಕಾರ್ಯಾಧ್ಯಕ್ಷರನ್ನಾಗಿ ಮಂಜುನಾಥ್ ತಿಮ್ಮಣ್ಣ ಹಿರೇಮನಿ ಇವರನ್ನು ಆಯ್ಕೆ ಮಾಡಿ ಸನ್ಮಾನಿಸಿ ಗೌರವಿಸಿ ಅಭಿನಂದಿಸಲಾಯಿತು. ಈ ಹಿಂದೆ ಇದೆ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾಗಿ ರಾಜ್ಯಾದ್ಯಂತ ಉತ್ತಮ ಸಂಘಟನೆ ಮಾಡಿದ ಹಿನ್ನೆಲೆಯಲ್ಲಿ ಇವರ ಕಾರ್ಯಕ್ಷಮತೆಯನ್ನ ಗಮನಿಸಿ ರಾಜ್ಯ ಸಮಿತಿ ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ ಎಂದು ರಾಜ್ಯಾಧ್ಯಕ್ಷ ವೈ ಕೊಟ್ರೇಶ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಭೋವಿ ಸಮಾಜದ ಮುಖಂಡರಾದ ಗೋವಿಂದಪ್ಪ ತಿಮ್ಮಣ್ಣ ಬಂಡಿ ವಡ್ಡರ್.ರಾಜ್ಯ ಮಹಿಳಾ ಅಧ್ಯಕ್ಷರಾದ ಸುಶೀಲಮ್ಮ ಮಹಿಳಾ ಮುಖಂಡರಾದ ಪುಷ್ಪವತಿ ಜಿ ಶ್ರೀನಿವಾಸ್ ಅವರೋಲಿ ಸಮಾಜದ ಹಿರಿಯರಾದ ಬಸವರಾಜ ಆನೆಗುಂದಿ. ಬೈಲಹೊಂಗಲ ಅಧ್ಯಕ್ಷರಾದ ರಾಘವೇಂದ್ರ ನರಗುಂದ ಸೇರುತ್ತೆ ಮೊದಲಾದವರು ಇದ್ದರು.