ಮುಸ್ಲಿಂ ಸಮುದಾಯಕ್ಕೆ ಮೀಸಲಾತಿಬೆಳಗಾವಿ ಚಲೋ

ಮುಸ್ಲಿಂ  ಸಮುದಾಯಕ್ಕೆ ಮೀಸಲಾತಿ
ಬೆಳಗಾವಿ ಚಲೋ 
   ಧಾರವಾಡ11:  2 ಬಿ ಮೀಸಲಾತಿ ಶೇ 4  ರಷ್ಟು ಮುಸ್ಲಿಂ ಸಮುದಾಯಕ್ಕೆ ಮಂಜೂರು ಮಾಡುವಂತೆ  ಹಾಗೂ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಇದೇ ದಿ. 13 ರಂದು ಬೆಳಗಾವಿ ಚಲೋ ಹಮ್ಮಿಕೊಂಡಿದೆ ಎಂದು ಉತ್ತರ ಕರ್ನಾಟಕ ಹೋರಾಟ ವೇದಿಕೆಯ ಹೇಳಿದೆ
   ‌2ಬಿ ಶೇ.4 ರಷ್ಟು ಮುಸ್ಲಿಂ ಮೀಸಲಾತಿ ಜಾರಿ ಮಾಡುವ ಕುರಿತು ಸರಕಾರಕ್ಕೆ ಎಚ್ಚರಿಸಲು ಬೆಳಗಾವಿ ಚಲೋ ಹಮ್ಮಿಕೊಂಡಿದ್ದು ಇಡೀ
 ರಾಜ್ಯದ ಮುಸ್ಲಿಂ  ಸಮುದಾಯದ ಮೌಲ್ವಿಗಳು ಹಾಗೂ ಮುಖಂಡರು, ಪ್ರಗತಿಪರ ಚಿಂತಕರು ಹಾಗೂ ಹೋರಾಟಗಾರರು ಈ ಹೋರಾಟದಲ್ಲಿ ಭಾಗಿಯಾಗಿ ತಮ್ಮ ಬೆಂಬಲವನ್ನು ನೀಡಬೇಕು. ಮತ್ತು ಒಂದು ದಿನದ ಸಂಕೇತವಾಗಿ ಹೋರಾಟಕ್ಕೆ ಎಲ್ಲರೂ  ಸರಕಾರಕ್ಕೆ  ಬಗ್ಗೆ ಮನವಲಿಸಲು ಮುಂದಾಗಬೇಕು ಹಾಗೂ ತಾವೆಲ್ಲರೂ ತಪ್ಪದೇ ಈ ಹೋರಾಟಕ್ಕೆ ಕೈಜೋಡಿಸಿ ಶಾಂತಿಯುತವಾಗಿ ಹೋರಾಟವನ್ನು ಯಶಸ್ವಿಗೊಳಿಸಲು ಸಹಕಾರ ನೀಡಬೇಕೆಂದು ಉತ್ತರ ಕರ್ನಾಟಕ ಹೋರಾಟ ವೇದಿಕೆಯ ಸಂಚಾಲಕರಾದ ಎಮ್. ಸಲೀಮ್ ಸಂಗನಮಲ್ಲಾ ಕೋರಿದ್ದಾರೆ.
ನವೀನ ಹಳೆಯದು

نموذج الاتصال