ನಿನ್ನೆ ಸಂಜೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಪ್ರೊ. ಜಿ ಎಸ್ ಅಮೂರ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು. ಡಾ.
ಗೋವಿಂದರಾವ್ ತಳಕೋಡ ಡಾ. ಜಿ ಎಸ್ ಅಮೂರ ಕುರಿತು ಉಪನ್ಯಾಸ ನೀಡಿ ಪ್ರೊ. ಅಮೂರ ಅವರು ಹೆಸರಾಂತ ವಿಮರ್ಶಕರು ಹಾಗೂ ಇಂಗ್ಲಿಷ್ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿರುವ ವ್ಯಕ್ತಿ ಎಂದರು. ಪ್ರೊ. ಜಿ ಎಸ್ ಅಮೂರ ಅವರನ್ನು ನೆನೆಪು ಮಾಡಿಕೊಳ್ಳುವದು ಅತ್ಯಂತ ಸೂಕ್ತ ಎಂದು ತಿಳಿಸಿದರು. ಡಾ. ಅಮೂರ ಅವರ ವಿಮರ್ಶೆ ವಸ್ತು ನಿಷ್ಠ ಮತ್ತು ಕೃತಿ ನಿಷ್ಠ ಸಿದ್ಧಾಂತಕ್ಕೆ ಬದ್ಧರಾಗಿ ವಿಮರ್ಶಾ ಲೋಕಕ್ಕೆ ಮಾದರಿ ಆಗಿದ್ದಾರೆ ಎಂದು ತಿಳಿಸಿದರು. ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಡಾ. ಲಿಂಗರಾಜ ಅಂಗಡಿ
ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರೊ. ಕೆ ಎಸ್ ಕೌಜಲಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎಸ್ ಎಸ್ ದೊಡಮನಿ ನಿರೂಪಿಸಿದರು. ಡಾ. ಜಿನದತ್ ಹಡಗಲಿ ವಂದಿಸಿದರು. ವೇದಿಕೆ ಮೇಲೆ ಮಹಾಂತೇಶ ನರೇಗಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಂತವೀರ ಬೆಟಗೇರಿ, ಎಸ್ ಎಮ್ ದಾನಪ್ಪಗೌಡರ, ಸೋಮಶೇಖರ್ ಇಟಗಿ, ವೆಂಕನಗೌಡ ಪಾಟೀಲ,ಎಸ್ ಎಚ್ ಪ್ರತಾಪ್, ಶ್ರೀಮತಿ ಪ್ರಮೀಳಾ ಜಕ್ಕನ್ನವರ, ಶ್ರೀಮತಿ ಗೀತಾ ಕುಲಕರ್ಣಿ, ಶ್ರೀಮತಿ ಸುನಂದಾ ಯಡಾಲ್,ಶ್ರೀಮತಿ ಸುವರ್ಣ ಸುರಕೋಡ ಮುಂತಾದವರು ಉಪಸ್ಥಿತರಿದ್ದರು.